Home Mangalorean News Kannada News ಜಿಲ್ಲೆಯಲ್ಲಿ ಮೀಟರ್ ಬಡ್ಡಿಗೆ ಶೀಘ್ರ ಕಡಿವಾಣ; ಫೋನ್-ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ್ ಪಾಟೀಲ್

ಜಿಲ್ಲೆಯಲ್ಲಿ ಮೀಟರ್ ಬಡ್ಡಿಗೆ ಶೀಘ್ರ ಕಡಿವಾಣ; ಫೋನ್-ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ್ ಪಾಟೀಲ್

Spread the love

ಜಿಲ್ಲೆಯಲ್ಲಿ ಮೀಟರ್ ಬಡ್ಡಿಗೆ ಶೀಘ್ರ ಕಡಿವಾಣ; ಫೋನ್-ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ್ ಪಾಟೀಲ್

ಉಡುಪಿ: ಜಿಲ್ಲೆಯ ಜನರಿಗೆ ಸಮಸ್ಯೆ ತಂದೊಡ್ಡಿರುವ ಮೀಟರ್ ಬಡ್ಡಿಗೆ ಸಂಬಂಧಿಸಿ ಈಗಾಗಲೇ ಪೋಲಿಸರು ಕ್ರಮಕೈಗೊಳ್ಳಲು ಆರಂಭಿಸಿದ್ದು, ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು ಅನಿಲ್ ಅಗ್ರಹಾರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಆದ್ದರಿಂದ ಸಾರ್ವಜನಿಕರೆ ಇಂತಹ ಬಡ್ಡಿ ಸಮಸ್ಯೆ ಇದ್ದಲ್ಲಿ ಯಾವುದೇ ರೀತಿಯಲ್ಲಿ ಹೆದರದೆ ಹತ್ತಿರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ ಸಂಜೀವ್ ಪಾಟೀಲ್ ಹೇಳೀದರು.

ಅವರು ಶನಿವಾರ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಕರೋರ್ವರು ಬಡ್ಡಿ ವ್ಯಾಪಾರಿಗಳು ರಾತ್ರಿ ಹೊತ್ತು ಬಂದು ಮನೆಯಲ್ಲಿ ಗದ್ದಲ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಅಲ್ಲದೆ ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಕರೆಗೆ ಉತ್ತರಿಸಿದರು.

ಅಲ್ಲದೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಕೂಡ ಬಸ್ಸಿನ ಎಂಜೆಂಟರೂ ಕೂಡ ಬಡ್ಡಿ ವ್ಯವಹಾರ ನಡೆಸುತ್ತಿದ್ದು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದರು.
ಕಾರ್ಕಳದ ಮನೆಯೊಂದರಲ್ಲಿ ಅಕ್ರಮವಾಗಿ ಕುಳಿತು ಇಸ್ಪಿಟ್ ಆಡುತ್ತಿರುವ ಬಗ್ಗೆ ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿ ಕೂಡಲೇ ಪೋಲಿಸರು ಧಾಳಿ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಬೈಂದೂರು, ಶಿರೂರು ಭಾಗದಲ್ಲಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ನಿರಂತರವಾಗಿ ನಡೆಯುತ್ತಿದೆ ಎಂಬ ಕರೆಗೆ ಉತ್ತರಸಿದ ಅವರು ಇಲಾಖೆ ಈ ಭಾಗದಲ್ಲಿ ಹಲವಾರು ಪ್ರಕರಣಗಳನ್ನು ಬೇಧಿಸಿದೆ ಆದರೆ ಇದು ಪುನರಾವರ್ತನೆಯಾಗುತ್ತಿದೆ ಈ ಕುರಿತು ಜಿಲ್ಲಾ ಅಬಕಾರಿ ಡಿಸಿಯವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಗಿಫ್ಟ್ ಬಂದಿದೆ ಎಂದು ಕರೆ ಮಾಡಿ ತಿಳಿಸಿದ ಬಳಿಕ ಮನೆಗೆ ಗಿಫ್ಟ್ ತಂದು ಹಣ ನೀಡುವಂತೆ ಸತಾಯಿಸಿತ್ತಿದ್ದು ಗಿಫ್ಟ್ ಪಡೆದುಕೊಳ್ಳದೆ ವಾಪಾಸು ಕಳುಹಿಸಿದ್ದಕ್ಕೆ ಫೋನ್ ಮಾಡಿ ಬೈಯ್ಯುತ್ತಿದ್ದು ಇದರೀಂದ ಕಿರಿಕಿರಿಯಾಗುತ್ತಿದೆ ಎಂಬ ಕರೆಗೆ ಉತ್ತರಿಸಿದ ಎಸ್ಪಿ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿ ಫೋನ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಾಮೀಯಾ ಮಸೀದಿ, ಆಭರಣ ಜುವೆಲರ್ಸ್ ಮತ್ತು ಸಂಸ್ಕೃತ ಕಾಲೇಜು ಮಾರ್ಗದಲ್ಲಿ ರಸ್ತೆಯ ಎರಡು ಕಡೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಜನರಿಗೆ ನಡೆಯಲು ಕಷ್ಟಾವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಕುರಿತು ಕೂಡಲೇ ಗಮನ ಹರಿಸಲಾಗುವುದು ಎಂದರು.

ಮಂದಾರ್ತಿ ಪರಿಸರದಲ್ಲಿ ಖಾಸಗಿ ವಾಹನ ಚಾಲಕರು ತಮ್ಮ ಕಾರುಗಳಿಗೆ ಬಿಳೀ ನಂಬರ್ ಪ್ಲೇಟ್ ಇಟ್ಟುಕೊಂಡು ಬಾಡಿಗೆ ಮಾಡುತ್ತಿದ್ದು ಇದರಿಂದ ಬಾಡಿಗೆ ಟ್ಯಾಕ್ಷಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿಯವರು ಇಂದಿನಿಂದ ಪೋಲಿಸರು ಇದರ ವಿರುದ್ದ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಲಾಡ್ಜುಗಳಲ್ಲಿ ಕೆಲವರು ಜ್ಯೋತಿಷ್ಯ ಹೇಳುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ ಆದರೆ ಅವರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದ ದೂರಿಗೆ ಉತ್ತರಿಸಿದ ಅವರು ಜನರು ಜಾಗೃತರಾಗಿ ಅವರುಗಳ ಬಳಿ ಹೋಗುವುದನ್ನು ನಿಲ್ಲಿಸಬೇಕು ಅಲ್ಲದೆ ಸದ್ಯವೇ ಸರಕಾರ ಮೌಡ್ಯ ನಿಷೇಧ ಕಾಯಿದೆ ತರುವ ಚಿಂತನೆ ಹೊಂದಿದೆ ಬಳೀಕ ಇಂತಹ ಜ್ಯೋತಿಷಿಗಳ ಹಾವಳಿ ನಿಲ್ಲಲಿದೆ ಎಂದರು.

ಅದಲ್ಲದೆ ಮಟ್ಕಾ, ಅಕ್ರಮ ಮರಳುಗಾರಿಕೆ, ಅಕ್ರಮ ಕಲ್ಲುಕೋರೆ, ಟ್ರಾಫಿಕ್ ಸಮಸ್ಯೆ ಕುರಿತು ಕೂಡ ಹಲವಾರು ಕರೆಗಳು ಬಂದವು. ಈ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 24 ಕರೆಗೆಳು ಬಂದಿದ್ದವು.

ಬಳಿಕ ಮಾತನಾಡಿದ ಎಸ್ಪಿಯವರು ಕಳೆದ ವಾರದಿಂದ ಒಟ್ಟು 7 ಮಟ್ಕಾ ಧಾಳಿ ನಡೆಸಿ 8 ಮಂದಿಯನ್ನು ಬಂಧಿಸಲಾಗಿದೆ, 2 ಇಸ್ಪಿಟ್ ಜೂಜು ಧಾಳಿಯಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ ಅಲ್ಲದೆ ಅಮಲು ಪದಾರ್ಥ ಗಾಂಜಾ ಸಂಬಂಧಿತ 3 ಕೇಸುಗಳಲ್ಲಿ 4 ಮಂದಿಯನ್ನು ಬಂದಿಸಲಾಗಿದೆ ಎಂದರು.


Spread the love

Exit mobile version