Home Mangalorean News Kannada News ಜೀವ ಇದ್ದಾಗಲೇ ಜೀವಿಗಳನ್ನು ಜೀವ ಇರುವ ಹಾಗೆ ಮಾಡುವುದು ಸ್ವರೂಪ

ಜೀವ ಇದ್ದಾಗಲೇ ಜೀವಿಗಳನ್ನು ಜೀವ ಇರುವ ಹಾಗೆ ಮಾಡುವುದು ಸ್ವರೂಪ

Spread the love

ಮಂಗಳೂರು: ಜೀವ ಇದ್ದಾಗಲೇ ಜೀವಿಗಳನ್ನು ಜೀವ ಇರುವ ಹಾಗೆ ಮಾಡುವುದು ಸ್ವರೂಪ ಎಂದು ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಹೇಳಿದರು. ಅವರು 35 ದಿನಗಳ ಕಾಲ ನಡೆದ ಸ್ವರೂಪ ಅಧ್ಯಯನ ಕೇಂದ್ರದ ರಜಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಲ್ಲಿ ಶಿಬಿರಾರ್ಥಿಗಳು ಹೃದಯಪೂರ್ವಕವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು.

ಅ

ಇನ್ನೋರ್ವ ಅತಿಥಿ ಖ್ಯಾತ ಸಾಹಿತಿ ಗುರುರಾಜಮಾರ್ಪಳ್ಳಿ ಮಾತನಾಡಿ ಒಬ್ಬ ವ್ಯಕ್ತಿಯ ಮನಸ್ಸಿನ ವಿಕಾಸದ ಸಾಧ್ಯತೆಯನ್ನು ವೈಜ್ಞಾನಿಕ ನೆಲೆಯಲ್ಲಿ ಅಭ್ಯಸಿಸುವ ಗೋಪಾಡ್ಕರ್ ಅವರ ಸಂಶೋಧನೆಯನ್ನು ಸಮಾಜವು ಶಿಕ್ಷಣದಲ್ಲಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.

ಯಕ್ಷಗಾನ ಕಲಾವಿದ ತಾರನಾಥ ವರ್ಕಾಡಿ, ಪೋಷಕರಾದ ರವೀಶ್ ಕುಮಾರ್, ಬ್ರಹ್ಮಾಚಾರ್, ಮಿಮಿಕ್ರಿ ಪಟು ಉದಯ ಕಾನತ್ತೂರು, ಗಾಯತ್ರಿ ಉಪಾಧ್ಯ, ಪಕಲಕುಂಜ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಕೇಂದ್ರದ ಪ್ರಾಂಶುಪಾಲೆ ಸುಮಾಡ್ಕರ್ ಸ್ವಾಗತಿಸಿ ನಿರ್ದೇಶಕರಾದ ಗೋಪಾಡ್ಕರ್ ಪ್ರಸ್ತಾವನೆಗೈದರು. ಪ್ರೇಮಾನಾಥ್ ಮರ್ಣೆ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version