ಜುಗಾರಿ ಅಡ್ಡೆಗೆ ದಾಳಿ – 9 ಮಂದಿಯ ಬಂಧನ – 10.93 ಲಕ್ಷ ಸೊತ್ತು ವಶ
ಮಂಗಳೂರು: ನಗರದ ಕರಂಗಲ್ಪಾಡಿಯ ಮೆಜೆಸ್ಟಿಕ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ 3 ನೇ ಮಹಡಿಯ ಒಂದು ಕೋಣೆಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ- ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ, 09 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳ ವಿರುದ್ದ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿರುತ್ತದೆ.
ಬಂಧಿತರನ್ನು ಕೂಳೂರು ಪಡುಕೋಡಿ ಗ್ರಾಮದ ಅಶೋಕ್ ಶೆಟ್ಟಿ @ ಕೋರಿ ಶೆಟ್ಟಿ (49), ದೆರೆಬೈಲ್ ಅಶೋಕನಗರದ ನಿವಾಸಿ ಆನಂದ (49), ಕಂಕನಾಡಿ ನಿವಾಸಿ ರಾಜಶೇಖರ @ ಬೆಂಡ್ ರಾಜ (46), ಮೂಲ್ಕಿ ಕೊಲ್ನಾಡು ನಿವಾಸಿ ತಿಲಕ್ ರಾಜ್ (33), ದೆರೆಬೈಲ್ ಕೊಂಚಾಡಿ ನಿವಾಸಿ ಶರತ್ ಕುಮಾರ್ (37), ಕೊಟ್ಟಾರ ನಿವಾಸಿ ನೀಲಪ್ಪ ಭೀಮಪ್ಪ ಮೇಟಿ (30), ಕುಲಶೇಖರ ನಿವಾಸಿ ಸಾಜಿದ್ ಅಹ್ಮದ್ (48), ಕರಂಗಲ್ಪಾಡಿ ನಿವಾಸಿ ಜೀವನ್ ಕುಮಾರ್ (59), ಕಂಕನಾಡಿ ನಿವಾಸಿ ಸೂರಜ್ ತಿಮ್ಮಪ್ಪ ಪೂಜಾರಿ (42) ಎಂದು ಗುರುತಿಸಲಾಗಿದೆ.
ಬಂಧಿತರಿಂದ ನಗದು ಹಣ ರೂ. 68,140/- , ಮೊಬ್ಯೆಲ್ ಗಳು ಒಟ್ಟು-11, ಬಲೇನೊ ಕಾರು KL-11-BB-4669, ಅಕ್ಟೀವಾ ಸ್ಕೂಟರ್ KA-19 EP-1318, ಕವಾಸಕಿ ಬೈಕ್ KA-14 R-3263 ಮತ್ತು ಅಕ್ಟೀವಾ ಸ್ಕೂಟರ್ KA-19 ET-3159 ವಶಪಡಿಸಿಕೊಂಡಿದ್ದು, ಸ್ವಾದೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಬೆಲೆ 10,93,190/ – ಆಗಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಕೇಂದ್ರ ಉಪ ವಿಭಾಗದ ಎ ಸಿ ಪಿ ಭಾಸ್ಕರ ಒಕ್ಕಲಿಗರವರ ಮಾರ್ಗದರ್ಶನದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಾರುತಿ ಜಿ ನಾಯಕ್ ರವರು ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಮಾರುತಿ ಎಸ್. ವಿ. ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.