ಜುಗಾರಿ ಅಡ್ಡೆಗೆ ಪೊಲೀಸರ ದಾಳಿ – 12 ಮಂದಿಯ ಬಂಧನ
ಮಂಗಳೂರು: ಮಂಗಳೂರು ನಗರದ ಮಾರ್ನಮಿಕಟ್ಟೆ 1 ನೇ ರೈಲ್ವೇ ಬಿಡ್ಜ್ ಬಳಿಯ ಖಾಲಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ ಜುಗಾರಿ ಅಡ್ಡೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಧಾಳಿ ನಡೆಸಿ, ಹನ್ನೆರಡು ಜನ ಆರೋಪಿಗಳನ್ನು ಬಂಧಿಸಿ, 8380/- ರೂ ನಗದು ಹಣ ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಬಂಧಿತರನ್ನು ಸುರತ್ಕಲ್ ಹೊಸಬೆಟ್ಟು ನಿವಾಸಿ ಗಣೇಶ (47), ಜೆಪ್ಪು ಬಪ್ಪಾಲ್ ನಿವಾಸಿ ಸಚಿನ್ (42), ಬೋಳಾರ ನಿವಾಸಿ ಪ್ರವೀಣ್ (43), ಮಂಜ್ವೇಶ್ವರ ನಿವಾಸಿ ಭಾಸ್ಕರ (60), ಉಳ್ಳಾಲದ ಮುಸ್ತಾಫಾ ಸದಬ್ಬ ತೋಡಾರ್ (48), ಕೊಣಾಜೆ ನಿವಾಸಿ ಉದಯ (32), ಬೊಳಾರ ನಿವಾಸಿ ಶಹನವಾಜ್ (29), ಕಿರಣ್ ಕುಮಾರ್ (50), ಅತ್ತಾವರ ನಿವಾಸಿ ಸುಧಾಕರ್ (64), ಕೃಷ್ಣಾಪುರ ನಿವಾಸಿ ಹೇಮಂತ್ (32), ಬೆಂಗರೆ ನಿವಾಸಿ ಪುರಂದರ (45), ಬಂಟ್ವಾಳ ನಿವಾಸಿ ಪ್ರವೀಣ್ (40) ಎಂದು ಗುರುತಿಸಲಾಗಿದೆ.
ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಬಾಸ್ಕರ ಒಕ್ಕಲಿಗ, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಶ್ರೀ ಮಹಮ್ಮದ್ ಶರೀಫ್ ರ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಆರೋಪಿ ಪತ್ತೆಗೆ ಸಿಬ್ಬಂಧಿಗಳು ಸಹಕರಿಸಿರುತ್ತಾರೆ.