ಜುಲೈ 1ರಂದು ಅಂಬಲಪಾಡಿಯಲ್ಲಿ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ

Spread the love

ಜುಲೈ 1ರಂದು ಅಂಬಲಪಾಡಿಯಲ್ಲಿ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ: ಅಂಚೆ ಮನೋರಂಜನಾ ಕೂಟ, ಉಡುಪಿ, ಮಣಿಪಾಲ ಹಾಗೂ ಕುಂದಾಪುರ ಇವರ ಸಹಯೋಗದಲ್ಲಿ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಜುಲೈ 1 ರಂದು ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಭವಾನಿ ಮಂಟಪದಲ್ಲಿ ಬೆಳಿಗ್ಗೆ 9ರಿಂದ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷರಾದ ರಾಜಶೇಖರ ಭಟ್ ಅವರು ಉಡುಪಿ ಅಂಚೆ ವಿಭಾಗದಲ್ಲಿ ಸುಮಾರು 265 ಅಂಚೆ ಕಚೇರಿಗಳಿದ್ದು, ಇಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತ ಸಾಹಿತ್ಯಾಸಕ್ತರು, ಬರಹಗಾರರು ಇದ್ದು, ಇವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಶೇಖರ ಭಟ್ ವಹಿಸಿದರೆ, ಸಮ್ಮೇಳನವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ.

ಗೌರವ ಉಪಸ್ಥಿತಿ ಯಲ್ಲಿ  ಕೆ. ರಘುಪತಿ ಭಟ್, ಮಾನ್ಯ ಶಾಸಕರು, ಉಡುಪಿ. ಮುಖ್ಯ ಅತಿಥಿಗಳಾಗಿ ಸುಧಾಕರ ಜಿ. ದೇವಾಡಿಗ, ಗೌರವ ಸಲಹೆಗಾರರು, ಸ್ವಾಗತ ಸಮಿತಿ, ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ. ಉಡುಪಿ. ಸೂರ್ಯನಾರಾಯಣ ರಾವ್, ಅಧ್ಯಕ್ಷರು, ಸ್ವಾಗತ ಸಮಿತಿ, ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ. ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ. ಪ್ರದೀಪ್‍ಕುಮಾರ್ ಕಲ್ಕೂರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲೆ. ಕುದಿ ವಸಂತ ಶೆಟ್ಟಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕರು, ಉಡುಪಿ. ಎಸ್. ನಿತ್ಯಾನಂದ ಪಡ್ರೆ, ನಿವೃತ್ತ ಹಿರಿಯ ಉಪಸಂಪಾದಕರು, ಉದಯವಾಣಿ, ಮಣಿಪಾಲ. ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ತುಳುಕೂಟ, ಉಡುಪಿ ಭಾಗವಹಿಸಲಿದ್ದಾರೆ.

ಅಂಚೆ~ಸಾಹಿತ್ಯ~ಸಾಂಗತ್ಯ ವಿಚಾರ ವೇದಿಕೆ ~ ಅಂಚೆ ಪತ್ರಗಳ ಭಾವಲೋಕ ಕುರಿತು ಕುದಿ ವಸಂತ ಶೆಟ್ಟಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕರು. ಉಡುಪಿ, ಅಂಚೆ~ಹಾಸ್ಯ~ಲಾಸ್ಯ ಕುರಿತು ಎಸ್. ನಿತ್ಯಾನಂದ ಪಡ್ರೆÉ, ನಿವೃತ್ತ ಹಿರಿಯ ಉಪ ಸಂಪಾದಕರು, ಉದಯವಾಣಿ, ಮಣಿಪಾಲ ವಿಚಾರ ಮಂಡಿಸಲಿದ್ದಾರೆ.

ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೇಲೆ ಅವರು ಅಂಚೆ ಸೇವೆ – ದೇಶ ಸೇವೆ ವಿಚಾರದಲ್ಲಿ ಶಿಕರೋಪನ್ಯಾಸ ನೀಡಲಿರುವರು. ಈ ಸಂದರ್ಭದಲ್ಲಿ ಕು.ಗೋ, ಅಂಶುಮಾಲಿ, ಹಳ್ಳೀ ಭಟ್, ಸುಕನ್ಯಾ ಕಳಸ ಅವರಿಗೆ ಅಂಚೆ ಸಾಹಿತ್ಯ ಪುರಸ್ಕಾರ ನೀಡಲಾಗುವುದು ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಜಯರಾಮ ಶೆಟ್ಟಿ , ಶ್ರೀನಾಥ್ ಬಸ್ರೂರ್, ಉಪಾಧ್ಯಕ್ಷರುಗಳು, ಸೂರ್ಯನಾರಾಯಣ ರಾವ್, ಅಧ್ಯಕ್ಷರು, ಪೂರ್ಣಿಮಾ ಜನಾರ್ದನ್, ಪ್ರಧಾನ ಕಾರ್ಯದರ್ಶಿ, ಸುರೇಶ್ ಕೆ., ಕೋಶಾಧಿಕಾರಿ, ಸ್ವಾಗತ ಸಮಿತಿ, ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ, ನರಸಿಂಹ ನಾಯಕ್, ಕಾರ್ಯದರ್ಶಿ, ಅಂಚೆ ಮನೋರಂಜನಾ ಕೂಟ,  ಕಾರ್ಯದರ್ಶಿ, ಅಂಚೆ ಮನೋರಂಜನಾ ಕೂಟ, ಮಣಿಪಾಲ ಉಪಸ್ಥಿತರಿದ್ದರು.


Spread the love