Home Mangalorean News Kannada News ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016ಜುಲೈ 2 ಮತ್ತು 3...

ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016

Spread the love

ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ವಾರ್ಷಿಕವಾಗಿ ಉತ್ಕøಷ್ಠ ಮಟ್ಟದಲ್ಲಿ ಆಯೋಜಿಸಿದ್ದು, ಈ ಬಾರಿಜುಲೈ 2 ಮತ್ತು 3 ರಂದು ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ನಡೆಯಲಿದೆ. ಗ್ರಾಮೀಣ ಭಾಗದಯುವಜನತೆಗೆ ಸೂಕ್ತ ಉದ್ಯೋಗವಕಾಶವನ್ನುಒದಗಿಸುವಉದ್ದೇಶದೊಂದಿಗೆ ಆಳ್ವಾಸ್ ಪ್ರಗತಿಆರಂಭಗೊಂಡು, ಇಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಪಕ್ವ ವೇದಿಕೆಯನ್ನು ನಿರ್ಮಿಸುವಲ್ಲಿ ಮತ್ತು ಕಂಪನಿಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಫಲಪ್ರದವಾಗಿದೆ. ಕಂಪನಿಗಳ ಆತಿಥ್ಯ ಹಾಗೂ ವ್ಯವಸ್ಥೆಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಹಿಸುತ್ತದೆ. ಈ ಉದ್ಯೋಗ ಮೇಳ ಆಳ್ವಾಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆದೇಶದೆಲ್ಲಡೆಯಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಇದುಉದ್ಯೋಗ ಪಡೆಯುವ ಮುಕ್ತ ವೇದಿಕೆಯಾಗಿದೆ. ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ಉದ್ಘಾಟನೆಯನ್ನು ಎನ್.ಎಮ್.ಸಿ ಮತ್ತುಯು.ಎ.ಇ ಎಕ್ಸ್ಚೆಂಜ್ನ ಸಿ.ಇ.ಓ, ಡಾ.ಬಿ.ಆರ್,ಶೆಟ್ಟಿಜುಲೈ 2 ರಂದು ನೆರವೇರಿಸಲಿದ್ದಾರೆ.

image003alvas-education-foundation-press-20160604-003

ಆಳ್ವಾಸ್ ಪ್ರಗತಿ 2016 ರಲ್ಲಿ 300ಕ್ಕೂ ಅಧಿಕ ಕಂಪನಿಗಳು ಈ ಬಾರಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 250 ಕಂಪನಿಗಳು ನೋಂದಾಯಿಸಿವೆ. ಕಂಪನಿಗಳು ನೊಂದಣಿ ಮತ್ತು ಮಾಹಿತಿಗೆ ನಮ್ಮ ವೆಬ್ಸೈಟ್ ಆದ www.alvaspragati.com <http://www.alvaspragati.com> ಗೆ ಭೇಟಿ ಕೊಡಿ ಅಥವಾ placement.alvas@gmail.com mail to : placement.alvas@gmail.com ಗೆ ಮೇಲ್ ಮಾಡಬಹುದು.

ಆಳ್ವಾಸ್ ಪ್ರಗತಿ 2016 ರಲ್ಲಿ ಭಾಗವಹಿಸಿರುವ ಪ್ರಮುಖ ಕಂಪನಿಗಳೆಂದರೆ,ಹೆಚ್.ಪಿ, ಅರ್ನ್ಸ್ಟ್ ಎಂಡ್ ಯಂಗ್, ಟಿ.ಸಿ.ಎಸ್, ಕೆಫೆ ಕಾಫಿ ಡೇ, ಎನ್.ಎಮ್.ಸಿ, ಹೋಂಡಾ, ಐ.ಬಿ.ಯಂ, ಎರಿಕ್ಸನ್,ನಾರಾಯಣ ಹೋಸ್ಪಿಟಲ್, ಟೊಯೊಟಾ, ಟಾಟಾ ಮೊಟಾರ್ಸ್, ಪ್ಯಾರಾಗೊನ್, ನಿಂಜರ್ಕಾಟ್, ಯು.ಎ.ಇ, ಎಕ್ಸ್ಚೇಂಜ್, ಫೇಡರಲ್ ಮೊಗಲ್, ಹೆಚ್.ಡಿ.ಎಫ್.ಸಿ ಬ್ಯಾಂಕ್, ಐ.ಸಿ.ಐ.ಸಿ.ಐ ಬ್ಯಾಂಕ್, ಐಡಿಯಾ, ಕೆಂವೆಲ್, ಕಿರ್ಲೋಸ್ಕರ್ ಎಲೆಕ್ಟ್ರಿಕ್, ಕೆ.ಟಿ.ಟಿ.ಎಂ, ಒರಾಕಲ್, ಐ.ಬಿ.ಎಮ್, ಆಮೆಜಾನ್, ಬಯೋಕಾನ್, ಆದಾನಿ ಗ್ರೂಪ್ ,ಟೆಕ್ ಮಹೇಂದ್ರ, ಗೋದ್ರೆಜ್, ಟೈಟಾನ್, ಐ.ಟಿ.ಸಿ, ತಾಜ್ಗ್ರೂಪ್, ಐ.ಸಿ.ಐ.ಸಿ.ಐ ಬ್ಯಾಂಕ್, ವಿಪ್ರೋ,ಟಿ.ವಿ.ಎಸ್, ಆಲ್ಕಾಗ್ರೂ, ಎಂಪಸಿಸ್, ಸ್ಟಾಂಡರ್ಡ್ ಚಾಟರ್ಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಮ್.ಆರ್.ಜಿ, ಇತ್ಯಾದಿ. ಈ ಬಾರಿಯಉದ್ಯೋಗ ಮೇಳದಲ್ಲಿ ಎಲ್ಲ ವಿಭಾಗದ ಕಂಪನಿಗಳು ಭಾಗವಹಿಸಲಿದ್ದು ಅವುಗಳಲ್ಲಿ ಮುಖ್ಯವಾಗಿ, ಉತ್ಪಾದನೆ, ಮಾಹಿತಿತಂತ್ರಜ್ಞಾನ, ಟೆಲಿಕಾಂ, ಐಟಿಇಎಸ್, ಬಿಎಪ್ಎಸ್ಐ, ಮಾರಾಟ ಮತ್ತುರಿಟೇಲ್, ಫಾರ್ಮಾ, ಆತಿಥ್ಯ, ಹೆಲ್ತ್ಕೇರ್, ಶಿಕ್ಷಣ ಮತ್ತುಎನ್.ಜಿ.ಓ, ಕ್ಷೇತ್ರಗಳನ್ನು ಒಳಗೊಂಡಿದೆ.

ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ವಿಶೇಷತೆಗಳು:
1. ಎಲ್ಲ ವಿಭಾಗದ ಪದವೀಧರರಿಗೆಟೆಲಿಕಾಂ, ಐಟಿ, ಸೇಲ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳು.
2. ಹೋಟೆಲ್ ಮ್ಯಾನೆಂಜ್ಮೆಂಟ್ ಪದವೀಧರರಿಗೆ ಪ್ರೀಮಿಯರ್ ಮತ್ತು ಸ್ಟಾರ್ ಹೋಟೆಲ್ಗಳಲ್ಲಿ ವಿಫುಲ ಉದ್ಯೋಗಾವಕಾಶಗಳು.
3. ನರ್ಸಿಂಗ್ ಪದವೀಧರರಿಗೆ ಭಾರತದ ಹೆಸರಾಂತ ಆಸ್ಪತ್ರೆಗಳಲ್ಲಿ ಮತ್ತು ಗಲ್ಫ್ ದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು
4. ಐ.ಟಿ.ಐ ಮತ್ತು ಡಿಪ್ಲೊಮಾ ಪದವಿಧರರಿಗೆ ಮ್ಯಾನುಫಾಕ್ಚರಿಂಗ್ ಮತ್ತು ಆಟೋಮೋಬೈಲ್ ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶ.
ಆಳ್ವಾಸ್ ಪ್ರಗತಿ -2016 ರ ಪ್ರಮುಖಾ0ಶಗಳು:
1) ಕ0ಪೆನಿ ಮತ್ತು ಉದ್ಯೋಗಾಕಾ0ಕ್ಷಿಗಳಿಗೆ ಉಚಿತ ನೊ0ದಣೆ ವ್ಯವಸ್ಧೆ ಏರ್ಪಡಿಸಿದ್ದು. ಆಸಕ್ತರು www.alvaspragati.com ನಲ್ಲಿ ನೊ0ದಾಯಿಸಬಹುದು.
2)ಅ0ಡ್ರಾೈಡ್ ಮತ್ತುಐಓಸ್ ಮೊಬೈಲ್ ಹೊ0ದಿರುವವರು, ವೆಬ್ಸೈಟ್ನಲ್ಲಿ ನೊಂದಾಯಿಸಿ ತಮ್ಮ ಸ್ಮಾರ್ಟ್ ಫೋನ್ನಲ್ಲಿಆ್ಯಪ್ಡೌನ್ಲೋಡ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅ0ಡ್ರಾೈಡ್ ಹೊಂದಿರುವವರು-ಗೂಗಲ್ಆಪ್ ಸ್ಟೋರ್ನಲ್ಲಿ ಮತ್ತುಐಓಎಸ್ ಹೊಂದಿರುವವರುಆ್ಯಪ್ ಸ್ಟೋರ್ನಲ್ಲಿಡೌನ್ಲೋಡ್ ಮಾಡಬಹುದು.
3) ಆಳ್ವಾಸ್ ವಿದ್ಯಾಗಿರಿಕ್ಯಾಂಪಸ್ನಲ್ಲಿಉದ್ಯೋಗ ಮಾಹಿತಿಕೇಂದ್ರ ಸ್ಥಾಪಿಸಿದ್ದು ಜುಲೈ 2 ಮತ್ತು 3 ರಂದು ನುರಿತಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ನಿಮಿಷ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿಯನ್ನು ಒದಗಿಸಿ ಮಾರ್ಗದರ್ಶನ ನೀಡಲಿದ್ದಾರೆ.
4) ದೂರದಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಧೆಯನ್ನು ಒದಗಿಸಲಾಗುವುದು.
5) ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಐ.ಟಿ.ಐ ಅಭ್ಯರ್ಥಿಗಳಿಗೆ ತಮ್ಮತಮ್ಮ ಐ.ಟಿ.ಐ ಕೇಂದ್ರಗಳಿಂದ ಬಸ್ಸಿನ ವ್ಯವಸ್ಧೆಯನ್ನುಏರ್ಪಡಿಸಲಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನವುಗಳನ್ನು ತಪ್ಪದೆ ತರಬೇಕು:
1) 5-10 ಇತ್ತೀಚಿನ ಭಾವಚಿತ್ರ (ಪಾಸ್ ಪೋರ್ಟ್ ಸೈಜ್)
2) ಎಲ್ಲಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ (ಜೆರಾಕ್ಸ್ ಪ್ರತಿ)
3) ಸ್ವ ವಿವರವಿರುವ ಬಯೋಡೆಟಾ
4) ಆನ್ಲೈನ್ ನೋಂದಣಿ ಸಂಖ್ಯೆ

ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು ಜುಲೈ 2 ಮತ್ತು 3 ರಂದು ಬೆಳಿಗ್ಗೆ 8.30 ಕ್ಕೆ ಹಾಜರಿರಬೇಕು. ಯಾವುದೇ ಪ್ರಶ್ನೆಗಳಿದ್ದರೆ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು 9611686148/ 8494934852 /08258262716. ಇಮೇಲ್ – placement.alvas@gmail.com


Spread the love

Exit mobile version