Home Mangalorean News Kannada News ಜೂನ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆತ್ಮಘಾತುಕ- ಪಿ.ವಿ.ಮೊಹನ್

ಜೂನ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆತ್ಮಘಾತುಕ- ಪಿ.ವಿ.ಮೊಹನ್

Spread the love

ಜೂನ್ ತಿಂಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆತ್ಮಘಾತುಕ- ಪಿ.ವಿ.ಮೊಹನ್

ಮಂಗಳೂರು: ಕರ್ನಾಟಕ ಸರಕಾರವು ಜೂನ್ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮವು ಅತ್ಯಂತ ಆತುರದ ಹೆಜ್ಜೆಯಾಗಿದೆ.ಅತ್ಮಘಾತುಕ ಕ್ರಮವಾಗಿದೆ. ಅಷ್ಟು ಅವಸರ ಬೇಕಾಗಿಲ್ಲ. ಪರೀಕ್ಷೆ ಗಳನ್ನು ಎಲ್ಲಾವು ತಿಳಿಯಾದ ಮೇಲೆ ಜುಲೈನ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಲ್ಲಿ ಮಾಡುವುದು ಸೂಕ್ತ ಎಂದು ಕೆಪಿಸಿಸಿ ವಕ್ತಾರರಾದ ಪಿ ವಿ ಮೋಹನ್ ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ನಿರ್ಬಂಧ ದಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲ ವಾರ ಬಹಳ ನಿರ್ಣಯಕ ವೆಂದು ಹಲವು ಸಾಂಕ್ರಾಮಿಕ ರೋಗ ತಜ್ಞರು, ವೈದ್ಯಕೀಯ ಕ್ಷೇತ್ರದ ತಜ್ಞರು ಈಗಾಗಲೇ ಹೇಳಿದ್ದಾರೆ. ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಬರುವ ಜೂನ್-ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಲಿದೆ ಎಂದು ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ಹೇಳಿದೆ.
ದೇಶದಲ್ಲಿ ಕೊವಿಡ್-19 ಪ್ರಕರಣಗಳು ಈಗ 50 ಸಾವಿರ ಗಡಿ ದಾಟಿದ್ದು, ಇದರ ಆಧಾರದ ಮೇಲೆ ಮತ್ತು ಮಾಹಿತಿಯ ಪ್ರಕಾರ ಬರುವ ಜೂನ್-ಜುಲೈನಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ಬಹಳ ಉತ್ತುಂಗಕ್ಕೇರುವ ಸಾಧ್ಯತೆ ಇದೆ ಎಂದಿದೆ. ಮಾರ್ಚ್ ನಲ್ಲಿ ಮೊದಲ ಲಾಕ್ ಡೌನ್ 25 ರಂದು ಕೋವಿಡ್ ಸೋಂಕಿನ ಪ್ರಕರಣಗಳು 657 ಇದ್ದು 130 ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ಮೇ 3 ರಂದು ಸೋಂಕಿನ ಪ್ರಕರಣಗಳು 42, 836 ದಾಖಲಾಗಿದ್ದು 401 ಜಿಲ್ಲೆಗಳಿಗೆ ಹಬ್ಬಿದೆ. ಮೇ ತಿಂಗಳ ಅಂತ್ಯದಲ್ಲಿ 3 ಲಕ್ಷ ಮುಟ್ಟುವ ಸಾಧ್ಯತೆಯು ಹೆಚ್ಚಿದೆ.
ಮೇ 17 ರ ತನಕ ಲಾಕ್ ಡೌನ್ ಇದೆ.ಪರಿಸ್ಠಿತಿ ಮತ್ತಷ್ಟು ಉಲ್ಬಣಗೊಂಡರೆ ಲಾಕ್ ಡೌನ್ ಅನ್ನು ಮುಂದುವರಿಸುವ ಸಾದ್ಯತೆ ಇದೆ. ಕೊರೊನಾ ಸಂಬಂಧಿಸಿ ವಿವಿಧ ದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು,ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗ ಕಳಕೊಂಡವರು, ವೃತ್ತಿ ಪರರು, ಉದ್ದಿಮೆ ದಾರರು ಇತ್ಯಾದಿ ಸುಮಾರು 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಇದನ್ನು ನಿಭಾಯಿಸುವುದು ಕರ್ನಾಟಕ ಸರ್ಕಾರ ಕ್ಕೆ ಇದೊಂದು ದೊಡ್ಡ ಸವಾಲಾಗಿದೆ. ಇದರ ನಡುವೆ ಪರೀಕ್ಷೆ ನಡೆಸುವ ಚಿಂತನೆಯು ದೊಡ್ಡ ಪ್ರಮಾದಕ್ಕೆಯಿಡೆಮಾಡಲಿದೆ .
ಕೋವಿಡ್ ಸೋಂಕು ಪ್ರಕರಣಗಳಲ್ಲಿ ಶೇಕಡಾ 80 ರಷ್ಟು ಹೆಚ್ಚಿನ ಸಂಖ್ಯೆಯ ಸೋಂಕಿನಲ್ಲಿ ರೋಗದ ಲಕ್ಷಣಗಳು ಇಲ್ಲದಿರುವುದರಿಂದ ಕ್ವಾರಂ ಟೈನ್ ಮತ್ತು ಐಶೋಲೆಷನ್ ವ್ಯವಸ್ಥೆಗಳಲ್ಲಿ ಹೆಚ್ಚು ಕಡಿಮೆ ಯಾದರೆ ರೋಗ ವು ಹರಡುವ ಸಂಭವ ಇದೆ. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯವಾದರೂ ಅದರಲ್ಲಿ ಸಮಾಜದ ಪಾತ್ರ ಬಹಳಷ್ಟು ಪ್ರಮುಖ ಮತ್ತು ನಿರ್ಣಾಯಕ ವಾಗಿದೆ.ಪ್ರಸ್ತುತ ವಾತಾವರಣದಲ್ಲಿ ಇಡೀ ಸಮಾಜವೇ ಒತ್ತಡ, ಯಾತನೆ ಮತ್ತು ಅತಂತ್ರ ಸ್ಠಿತಿಯಲ್ಲಿದೆ. ಆರ್ಥಿಕವಾಗಿ ಕುಸಿದುಹೋಗಿದೆ. ಇದೊಂದು ದೀರ್ಘ ಕಾಲೀನ ಹೋರಾಟ ವಾಗಿರುವುದರಿಂದ, ಪ್ರಾಯೋಗಿಕ ಮತ್ತು ವಾಸ್ತವಿಕತೆ ಅರಿತು, ಈ ಸಮಯದಲ್ಲಿ ಪರೀಕ್ಷೆ ಗಳನ್ನು ಮುಂದೂಡುವುದು ಉಚಿತ ಮತ್ತು ವಿವೇಕ ಕ್ರಮವಾಗಿದೆ.

ಸುಮಾರು 9 ಲಕ್ಷ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಗೆ ಹಾಜರಾಗುತ್ತಾರೆ. ಸರಕಾರವು ಫೇಸ್ಬುಕ್ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ ಮಾತಾಡುತ್ತದೆ. ಎಷ್ಟು ಮಂದಿ ಮಕ್ಕಳತ್ತಿರ ಫೇಸ್ ಬುಕ್ ಇದೆ? ಎಷ್ಟು ಮಂದಿ ಮಕ್ಕಳ ಮನೆಯಲ್ಲಿ ಟಿವಿ ಇದೆ? ಬಡವರ ಮಕ್ಕಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಿಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಪುನರ್ಮನನ ಕಾರ್ಯಕ್ರಮವನ್ನು ವೀಕ್ಷಿಸಿಸಲು ಸಮುದಾಯ ಭವನಗಳಲ್ಲಿ ಟಿವಿ ಗಳನ್ನು ಸಜ್ಜುಗೊಳಿಸಿ, ಅವರೆಲ್ಲ ರನ್ನು ಪರೀಕ್ಷೆಗೆ ಸಿದ್ದಗೊಳಿಸುವ ಸಾಮಾಜಿಕ ನ್ಯಾಯ ವನ್ನು ಇವತ್ತು ಮಾನ್ಯ ಸಚಿವರು ತೋರಿಸ ಬೇಕೆಂದು ಕಾಂಗ್ರೆಸ್ ಪಕ್ಷ ವು ಅಗ್ರ ಪಡಿಸುತ್ತದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕಗಳನ್ನು ಹೆಚ್ಚಿಸದಿರುವಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಸರ್ಕಾರ ನೀಡಿರುವ ನಿರ್ದೇಶನವನ್ನು ಆಡಳಿತ ಮಂಡಳಿಯು ಗಂಭೀರವಾಗಿಪರಿಗಣಿಸಿದಂತೆ ಇಲ್ಲ. ಸರ್ಕಾರದ ಅಧಿಸೂಚನೆ ಅನ್ವಯ ಪ್ರತಿವರ್ಷ ಶೇ 15ರಷ್ಟು ಬೋಧನಾ ಶುಲ್ಕವನ್ನು ಹೆಚ್ಚಿಸಲು ಶಾಲಾ ಆಡಳಿತ ಮಂಡಳಿಗಳಿಗೆ ಅವಕಾಶವಿದೆ. ಆದರೆ, ಕೊರೊನಾ ವೈರಾಣು ಸೋಂಕಿನ ಭೀತಿಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪೋಷಕರಿಗೆ ಶಾಲಾ ಶುಲ್ಕದ ಹೆಚ್ಚಳ ಹೊರೆಯಾಗಿ ಪರಿಣಮಿಸುವುದರಿಂದ, ಈ ಬಾರಿ ಶುಲ್ಕವನ್ನು ಹೆಚ್ಚಿಸದಿರುವಂತೆ ಸರ್ಕಾರ ತಿಳಿಸಿದೆ. ಆದರೆ ಖಾಸಗಿ ಶಾಲೆಗಳು ಶುಲ್ಕ ವನ್ನು ಹೆಚ್ಚಿಸಿದಲ್ಲದೆ ಮೂರು ದಿನಗಳಲ್ಲಿ ಕಟ್ಟಿ ಸೀಟ್ ಅನ್ನು ಖಾತ್ರಿ ಮಾಡಬೇಕೆಂದು ತಾಕೀತನ್ನು ಮಾಡಿದೆ. ಸರ್ಕಾರದ ಸೂಚನೆ ಬರದೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ನಡೆಸುವಂತಿಲ್ಲ.
ಆನ್ ಲೈನ್ ಮೂಲಕ ಸೀಟ್ ಗಳನ್ನು ಭರ್ತಿಮಾಡುವ ಪ್ರಕ್ರಿಯೆ ಧಾರಾಳವಾಗಿ ನಡೆಯುತ್ತಿವೆ. ಸರ್ಕಾರದ ಸೂಚನೆಗೆ ಕಿಮ್ಮತ್ ಬೆಲೆಯನ್ನುಖಾಸಗಿ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯ ನೀಡಲಿಲ್ಲ. ಸರ್ಕಾರವು ಕೂಡಲೇ ನಡು ಪ್ರವೇಶವನ್ನು ಮಾಡ ಬೇಕು. ಕೋವಿಡ್– 19ರ ಭೀತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು–ಪೋಷಕರ ಹಿತಾಸಕ್ತಿ ಯನ್ನು ರಕ್ಷಿಸುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೆ ಶಾಮೀಲಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದನ್ನು ಮೊದಲು ಸರಿ ಪಡಿಸಿ. ಮತ್ತು ಇದೇ ಸರ್ಕಾರವು ಇನ್ನೊಂದೆಡೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಯ (ಎಂ.ಡಿ) ಸೀಟಿನ ವಾರ್ಷಿಕ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ . ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಸೀಟಿಗೆ ಈವರೆಗೆ ಇದ್ದ ವಾರ್ಷಿಕ ಶುಲ್ಕವನ್ನು ಶೇ 23ರಷ್ಟು ಹಾಗೂ ಕೌನ್ಸೆಲಿಂಗ್ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದವರಿಗೆ ಶುಲ್ಕವನ್ನು ಶೇ 32ರಷ್ಟು ಹೆಚ್ಚಿಸಲಾಗಿದೆ . ಈ ಸೀಟು ಗಳ ಶುಲ್ಕವನ್ನು ಕಳೆದ ವರ್ಷವಷ್ಟೆ ದೊಡ್ಡ ಪ್ರಮಾಣದಲ್ಲಿ ಏರಿಸಲಾಗಿದೆ. ಈ ರೀತಿ ಮಾರಕವಾಗಿ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿ ಇರುವಾಗ ಬೇಕಾಬಿಟ್ಟಿ ಯಾಗಿ ಮಾತಾಡುತ್ತಿದ್ದ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಈಗ ಯಾಕೆ ಸುಮ್ಮನೆ ಕೂತಿದೆ? ಇದು ಕೂಡ ಬಿಜೆಪಿಯ ಕಪಟ ನಾಟಕದ ಪ್ರಮುಖ ಪಾತ್ರ ಧಾರಿ ಎಂದು ಅವರು ಆರೋಪಿಸಿದ್ದಾರೆ.


Spread the love

Exit mobile version