ಮಂಗಳೂರು: ಎಲ್ಲರಿಗೂ ಆರೋಗ್ಯ ಇದು ಸರ್ಕಾರದ ಧ್ಯೇಯವಾಗಿದ್ದು ಇದನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲರಿಗೂ ಯೋಗಾಭ್ಯಾಸದ ಮಹತ್ವವನ್ನು ತಿಳಿಸಲು ವಿಶ್ವ ಸಂಸ್ಥೆಯು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಎಂದು ಆಚರಿಸಲು ಕರೆ ನೀಡಿರುವ ಸಲುವಾಗಿ ದ.ಕ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೂನ್ 21 ರಂದು ಬೆಳಿಗ್ಗೆ 7.30 ಕ್ಕೆ ಮಂಗಳೂರು ನಗರದ ಮಿನಿವಿಧಾನ ಸೌಧದಲ್ಲಿ, 8 ಗಂಟೆಗೆ ಲಾಲ್‍ಬಾಗ್ ಹ್ಯಾಟ್ ಹಿಲ್‍ನಲ್ಲಿರುವ ಆಫೀಸರ್ಸ್ ಕ್ಲಬ್ ಮತ್ತು 8.30 ಕ್ಕೆ ಮಂಗಳಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗಾಬ್ಯಾಸ ನಡೆಯಲಿವೆ. ಸಾರ್ವಜನಿಕರು, ಯೋಗಾಸಕ್ತರು ಯೋಗಾಸನ ಮಾಡಲು ಅನುಕೂಲಕರವಾದ ವಸ್ತ್ರಗಳನ್ನುಧರಿಸಿ ಅವರವರಿಗೆ ಬೇಕಾದ ಜಮಕಾನೆಗಳನ್ನು ಯೋಗ ಪ್ರದರ್ಶನ ಆರಂಭವಾಗುವ ಅರ್ಧಗಂಟೆ ಮುಂಚಿತವಾಗಿ ಹಾಜರಿರುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ: ದೇವದಾಸ್ ಇವರು ಮನವಿ ಮಾಡಿರುತ್ತಾರೆ.
ಪತಂಜಲಿ ಯೋಗ ಶಿಕ್ಷಣ ಪ್ರತಿಷಾನ್ಠವತಿಯಿಂದ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂನ್ 21 ರ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನ, ಮರೋಳಿಯ ಸೂರ್ಯನಾರಾಯಣ ದೇವಸ್ಥಾನ, ಮಣ್ಣಗುಡ್ಡೆಯ ಸಂಘನಿಕೇತನ, ಮತ್ತು ವಾಮಂಜೂರಿನ ಮಂಗಳ ಜ್ಯೋತಿ ಸಮಗ್ರ ಶಾಲೆ ಇಲ್ಲಿ ಸಾಮೂಹಿಕ ಸರಳ ಯೋಗಾಭ್ಯಾಸಗಳು ನಡೆಯಲಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ ಶ್ರೀ ವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಡಿ.ಹೆಚ್.ಒ ಡಾ:ರಾಮಕೃಷ್ಣ ರಾವ್, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಕುಶಾಲಪ್ಪ – ಆವಿಷ್ಕಾರ ಯೋಗ, ಪತಂಜಲಿ ಯೋಗದ ನಾರಾಯಣ ಶೆಟ್ಟಿ ಹಾಗೂ ವಿವಿಧ ಇಲಾಖಾಧಿಕಾರಿಗಳು, ಆಯುಷ್ ಕಾಲೇಜುಗಳ ಪ್ರಾಂಶುಪಾಲರು, ಆಯುಷ್ ವೈಧ್ಯಾಧಿಕಾರಿಗಳು