ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ (ರಿ) ಆಳ್ವಾಸ್ ಪ್ರಗತಿ-ಜೂನ್ 24 ಹಾಗೂ 25, 2017 ಪ್ರತಿಷ್ಠಿತ 200 ಕಂಪೆನಿಗಳ ಪಾಲ್ಗೊಳ್ಳುವಿಕೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ಆಯೋಜನೆಗೊಳ್ಳುತ್ತಿರುವ ಬಹು ನಿರೀಕ್ಷಿತ ಹಾಗೂ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿದ ಖ್ಯಾತಿಯನ್ನು ಹೊಂದಿರುವ ಆಳ್ವಾಸ್ ಪ್ರಗತಿ ಉದ್ಯೋಗಮೇಳದ 9ನೇ ಆವೃತ್ತಿಯು ಇದೇ ಜೂನ್ 24 ಹಾಗೂ 25ರಂದು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
ಈ ಬಾರಿಯ ಆಳ್ವಾಸ್ ಪ್ರಗತಿ -2017 ವಿನೂತನ ಅವಕಾಶಗಳು ಹಾಗೂ ವಿಭಿನ್ನ ಆಯಾಮಗಳೊಂದಿಗೆ ಜೂನ್ 24 ರಂದು ವಿದ್ಯಾಗಿರಿಯಲ್ಲಿ ಪೂರ್ವಾಹ್ನ 9:30 ಕ್ಕೆ ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ಸರ್ಕಾರದ ಕ್ರೀಡಾ ಹಾಗೂ ಯುವಜನ ಸೇವಾ ಖಾತೆಯ ಸಚಿವ ಪ್ರಮೋದ್ ಮದ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿಲಿದ್ದು, ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಬುದಾಬಿ ಎನ್ಎಂಸಿ ಯ ಉಪಾದ್ಯಕ್ಷರು ಹಾಗೂ ಸಿಇಒ ಬಿನಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ, ಮಾಜಿ ಸಚಿವರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಅಮರನಾಥ್ ಶೆಟ್ಟ್ಷಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹತ್ತು ಹಲವು ವಿನೂತನ ಶೈಲಿಯೊಂದಿಗೆ ಆಳ್ವಾಸ್ ಪ್ರಗತಿ 2017, ಮಾರುಕಟ್ಟೆಯಲ್ಲಿ ಹೆಚ್ಚಿನ ಉದ್ಯೋಗವಕಾಶವನ್ನು ನೀಡುತ್ತಿರುವ ಕಂಪೆನಿಗಳು ಹಾಗೂ ವಿಫುಲ ಉದ್ಯೋಗವಕಾಶದ ಕ್ಷೇತ್ರಗಳಾದ ಐಟಿ, ಐಟಿಈಎಸ್, ಮ್ಯಾನುಫ್ಯಾಕ್ಚರಿಂಗ್, ಸೇಲ್ಸ್ ಹಾಗೂ ರಿಟೇಲ್ಸ್, ಬ್ಯಾಂಕಿಂಗ್ ಹಾಗೂ ಫಿನಾನ್ಸ್, ಹೊಸ್ಪಿಟ್ಯಾಲಿಟಿ, ಎನ್‍ಜಿಒ ಹಾಗೂ ಶಿಕ್ಷಣ ಕ್ಷೇತ್ರವನ್ನು ತೆರದಿಡಲಿದೆ. ಈ ಉದ್ಯೋಗಮೇಳವು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯ ವಿವಿಧ ಕ್ಷೇತ್ರಗಳಾದ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ವಾಣಿಜ್ಯ, ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ, ಹಾಗೂ ಕೌಶಲಭರಿತ ಪಿಯುಸಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ಆಳ್ವಾಸ್ ಪ್ರಗತಿ-2017ರಲ್ಲಿ ಭಾಗವಹಿಸುವ ಪ್ರತಿಷ್ಠಿತ ಕಂಪೆನಿಗಳ ವಿವರ
- ಐಟಿ ಕ್ಷೇತ್ರದ ಪ್ರಮುಖ ಕಂಪೆನಿಗಳಾದ ಅಮೇಜಾನ್, ಮೈಂಡ್ ಟ್ರಿ, ಒರೇಕಲ್, ಸರ್ವಹಾ ಸಿಸ್ಟಮಂ ಪ್ರೈ.ಲಿಮಿಟೆಡ್, ಕೋಡ್ ಕ್ರಾಫ್ಟ್, ಕ್ವಿನಾಕ್ಸ್,ಸಿಇಎಸ್ ಲಿಮಿಟೆಡ್, ಹಾಗೂ ಟೆಕ್ ಮಹೀಂದ್ರಾ
- ಉತ್ಪಾದನಾ ಕ್ಷೇತ್ರದ ಕಂಪೆನಿಗಳಾದ ಟೊಯೊಟೋ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ.ಲಿಮಿಟೆಡ್, ಒರಿಯಂಟ್ ಬೆಲ್ ಲಿಮಿಟೆಡ್, ಕಿರ್ಲೊಸ್ಕರ್ ಟೊಯೋಟಾ ಟೆಕ್ಸಟೈಲ್ ಮ್ಯಾಷಿನೆರಿ ಪ್ರೈ ಲಿ, ಇಂಡೋ ಯುಎಸ್ ಮಿಮ್ ಟೆಕ್ ಪ್ರೈ.ಲಿ, ನೆಕ್ಷಟೀರ್ ಆಟೋಮೋಟಿವ್ ಪ್ರೈ.ಲಿ, ಸ್ಟ್ರಫಾರವಾ ಇಂಡಿಯಾ ಪ್ರೈ.ಲಿ, ಜೆಸಿಆರ್ ಡ್ರಿಲ್ಸೋಲ್, ಎಕ್ಸಿಡಿ ಕ್ಲಚ್ ಇಂಡಿಯಾ ಪ್ರೈ.ಲಿ, ಸ್ವೀಚ್ ಗೇರ್ & ಕಾಂಟ್ರೋಲ್ ಟೆಕನಿಕ್ಸ್, ಹಾಗೂ ಕಿರ್ಲೋಸ್ಕರ್ ಟೆಕ್ಸಟೈಲ್ ಮೆಷಿನರಿ ಪ್ರೈಲಿ
- ದೂರವಾಣಿ ಕ್ಷೇತ್ರದ ಎರ್‍ಟೆಲ್, ವೊಡಾಪೋನ್, ರಿಲೆಯನ್ಸ್, ರಿಲೆಯನ್ಸ್ ಕಮ್ಯೂನಿಕೇಶನ್
- ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದ ಪ್ರಮುಖ ಕಂಪೆನಿಗಳಾದ ಜಿಸಿಸಿಯ ಯುಎಇ ಎಕ್ಸಚೇಂಜ್ , ಹೆಚ್‍ಡಿಎಫ್‍ಸಿ ಬ್ಯಾಂಕ್, ಅಕ್ಸಿಸ್ ಬ್ಯಾಂಕ್, ಎಸ್‍ಬಿಆಯ್ ಲೈಪ್ ಇನ್ಸುರೇನ್ಸ್, ಡೀವಾನ್ ಹೌಸಿಂಗ್ ಫಿನಾನ್ಸ್ ಲಿಮಿಟೆಡ್, ಭಾರತಿ ಆಕ್ಸಾ, ಕಾರ್ವಿ ಸ್ಟೋಕ್ ಬ್ರೋಕಿಂಗ್ ಹಾಗೂ ಪ್ಯೂಚರ್ ಜೆನರಲ್ ಲೈಫ್ ಇನ್ಸುರೆನ್ಸ್
- ಆರೋಗ್ಯ ಕ್ಷೇತ್ರದ ಕಂಪೆನಿಗಳಾದ ಎನ್‍ಎಮ್‍ಸಿ ಹೆಲ್ತಕೇರ್, ಅಪೋಲೋ ಹಾಸ್ಪಿಟಲ್ಸ್, ನಾರಾಯಣ ಹೃದಾಯಾಲಯ, ಆಯ್ಫನ್ ಗ್ಲೋಬಲ್ ಮೇದಾಂತ್- ದಿ ಮೆಡಿಸಿಟಿ ಹಾಗೂ ಇಂಡಿಯನ್ ಹಾಸ್ಪಿಟಲ್‍ಗಾಗಿ ಅವಕಾಶಗಳು ಲಭ್ಯವಿದೆ.
- ಫಾರ್ಮಸಿಟಿಕಲ್ ಕಂಪೆನಿಗಳಾದ ಬಯಾಕಾನ್, ಸಿಪ್ಲಾ, ರೆಸಿಫಾರ್ಮ ಫಾರ್ಮಾ ಸರ್ವಿಸಸ್ ಪ್ರೈ.ಲಿ, ಸಿಕ್ವೆಂಟ್ ಸೈಂಟಿಫಿಕ್ ಲಿಮಿಟೆಡ್, ಜುಬಿಲಿಂಟ್ ಜೆನರಿಕ್ ಲಿಮಿಟೆಡ್
- ಸೇಲ್ಸ್ ಹಾಗೂ ರಿಟೇಲ್ಸ್ ಕ್ಷೇತ್ರದ ಕೆಫೆ ಕಾಫಿ ಡೇ, ಪ್ಯಾನ್ಟಾಲೂಮ್ಸ್, ಡೆಕಾತ್ಲಾನ್ ಸ್ಪೋಟ್ಸ್ ಇಂಡಿಯಾ ಪ್ರೈ.ಲಿ, ಜೋಯ್ ಆಲುಕ್ಕಸ್, ನಂದಿ ಟೊಯೊಟೋ, ಪ್ಯಾರಗಾನ್ ವಿಕೆಸಿ ಪ್ರೈಡ್
- ಹಾಸ್ಪಟ್ಯಾಲಿಟಿ ಕ್ಷೇತ್ರದ ಪ್ರಮುಖ ಸಂಸ್ಥೆಗಳಾದ ವಿವಾಂತಾ ಬೈ ತಾಜ್, ದಿ ಪ್ಲೋರಾ ಗ್ರ್ಯಾಂಡ್, ದಿ ಕ್ಯಾಪಿಟಲ್, ದ ಕಂಟ್ರಿ ಇನ್ ಸೂಟ್ಸ್
ಆಳ್ವಾಸ್ ಪ್ರಗತಿ 2017ರ ವಿಶೇಷತೆಗಳು:
- ಬಿಎಸ್ಸಿ, ಬಿಎ, ಬಿಕಾಂ ಪದವಿದರರಿಗೆ ವಿಫುಲ ಉದ್ಯೋಗಾವಕಾಶ
- ರಾಷ್ಟ್ರದ ಪ್ರತಿಷ್ಟಿತ ಆಸ್ಪತ್ರೆಗಳಾದ ಅಪೋಲೋ, ನಾರಾಯಣ ಹೃದಾಯಾಲಯ, ಆಯ್ಫನ್ ಗ್ಲೋಬಲ್ ಮೇದಾಂತ್- ದಿ ಮೆಡಿಸಿಟಿ ಹಾಗೂ ಇಂಡಿಯನ್ ಹಾಸ್ಪಿಟಲ್ ಗಳಲ್ಲಿ ಬಿಎಸ್ಸಿ/ ಜಿಎನ್‍ಎಮ್ ನರ್ಸಿಂಗ್ ಪದವಿದರರಿಗೆ 300 ಕ್ಕೂ ಹೆಚ್ಚಿನ ಉದ್ಯೋಗಾವಕಾಶ
- ಬಿಫಾರ್ಮಾ ಹಾಗೂ ಡಿ ಫಾರ್ಮಾ ಪದವೀದರಲ್ಲದೇ, ಎಂಎಸ್ಸಿ , ಬಿಎಸ್ಸಿ ಕೆಮೆಸ್ಟ್ರಿ ಪದವಿದರರಿಗೆ ಕೋರ್ ಫಾರ್ಮಾಸಿಟಿಕಲ್ ಕಂಪೆನಿಗಳಾದ ಬಯಾಕಾನ್, ಸಿಪ್ಲಾ, ರೆಸಿಫಾರ್ಮ ಫಾರ್ಮಾ ಸರ್ವಿಸಸ್ ಪ್ರೈ.ಲಿ, ಸಿಕ್ವೆಂಟ್ ಸೈಂಟಿಫಿಕ್ ಲಿಮಿಟೆಡ್, ಜುಬಿಲಿಂಟ್ ಜೆನರಿಕ್ ಲಿಮಿಟೆಡ್ ಗಳಲ್ಲಿ ವಿಫುಲ ಅವಕಾಶ
- ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರದ ಕಂಪೆನಿಗಳಿಂದ ಪದವಿ ಹಾಗೂ ಸ್ನಾತ್ತಕೋತ್ತರ ಪದವೀದರರಿಗೆ 1500 ಹೆಚ್ಚಿನÀ ಉದ್ಯೋಗಾ ಉದ್ಯೋಗಾವಕಾಶ
- ಕೋರ್ ಐಟಿ ಪದವೀದರರಿಗೆ ಬೆಂಗಳೂರು, ಮಂಗಳೂರು, ಮುಂಬೈ, ಪುನೆ, ಇಂದೋರ್, ಹಾಗೂ ಚೆನ್ನೈಯಲ್ಲಿ ಉದ್ಯೋಗಾ ಉದ್ಯೋಗಾವಕಾಶ
- ಬಿಇ ಕೆಮಿಕಲ್ ಹಾಗೂ ಟೆಕ್ಸಟೈಲ್ ಇಂಜಿನಿಯರಿಂಗ್ ಪದವೀದರರಿಗೆ ಪ್ರತಿಷ್ಟಿತ ಕಂಪೆನಿಗಳಿಂದ ಅತ್ಯಾಕರ್ಷಕ ವೇತನದ ಸೌಲಭ್ಯ
- ಐಟಿಐ ವಿದ್ಯಾರ್ಥಿಗಳಿಗೆ 300 ಕ್ಕೂ ಹೆಚ್ಚಿನ ಉದ್ಯೋಗವಕಾಶ. ಟರ್ನರ್ಸ್ ಫಿಟ್ಟರ್ಸ್, ಹಾಗೂ ವೆಲ್ಡರ್ಸ್‍ಗಳಿಗೆ ಪ್ರತಿಷ್ಟಿತ ಕಂಪೆನಿಗಳಿಂದ ಉದ್ಯೋಗವಕಾಶ. ಮ್ಯಾಕಾನಿಕಲ್ ಹಾಗೂ ಆಟೋಮೋಬೈಲ್ ಪದವಿದರರಿಗೆ 250ಕ್ಕೂ ಅಪ್ರೆಂಟೈಷಿಪ್ ಗೆ ಅವಕಾಶ
- ಸೇಲ್ಸ್ ಹಾಗೂ ರಿಟೇಲ್ಸ್ ಕಂಪೆನಿಗಳಿಂದ ಪದವಿ ಹಾಗೂ ಮಾರ್ಕೆಟಿಂಗ್ ಮತ್ತು ಎಚ್‍ಅರ್‍ನಲ್ಲಿ ಎಂಬಿಎ ಪದವೀಧರರಿಗೆ ಉದ್ಯೋಗವಕಾಶ. ಈ ಕ್ಷೇತ್ರವು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 100ಕ್ಕೂ ಹೆಚ್ಚಿನ ಅವಕಾಶವನ್ನು ಒದಗಿಸುತ್ತಿದೆ.
- ಈ ಭಾರಿಯ ಉದ್ಯೋಗ ಮೇಳದಲ್ಲಿ ದೇಶದ ನಾನ ಭಾಗಗಳಿಂದ, ಅದರಲ್ಲೂ ಮುಖ್ಯವಾಗಿ ಉತ್ತರ ಭಾರತ ಹಾಗೂ ಮಧ್ಯ ಭಾರತ, ಕೇರಳ, ತಮಿಳನಾಡು, ತೆಲಂಗಾಣನಿಂದ ಪ್ರತಿಷ್ಟಿತ 15 ಕಂಪೆನಿಗಳು ಪಾಲ್ಗೊಳ್ಳಲಿವೆ.
- ಭಾರತದ ಅತಿ ದೊಡ್ಡ ಆನ್‍ಲೈನ್ ಮರಾಟ ಮಳಿಗೆ ಅಮೇಜಾನ್ 120ಕ್ಕೂ ಅಧಿಕ ಉದ್ಯೋಗವಕಾಶವನ್ನು ನೀಡಲಿದೆ.
- ಪ್ರತಿಷ್ಟಿತ ಐಟಿ ಕಂಪೆನಿ ಮೈಂಡ್ ಟ್ರೀ ಯು ಮೊದಲ ಹಂತದ ನೇಮಕಾತಿ ಪರೀಕ್ಷೆಯನ್ನು ನಡೆಸಲಿದೆ
- ಆಟೋಮೊಬೈಲ್ ಷೋರೂಂಗಳು ಸೇಲ್ಸ್,ಮಾರ್ಕೆಟಿಂಗ್ ಕ್ಷೇತ್ರದ ವೃತ್ತಿಗಾಗಿ ಪದವಿ, ಸ್ನಾತ್ತಕೋತ್ತರ ಪದವಿ, ಐಟಿ, ಡಿಪ್ಲೋಮಾ ವಿದ್ಯಾರ್ಥಿಗಳನ್ನು ನಿರೀಕ್ಷಿಸಲಿದೆ.
- ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶ ಆಳ್ವಾಸ್ ಪ್ರಗತಿಯದ್ದಾಗಿದ್ದು, ಇದಕ್ಕಾಗಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ತಂತ್ರಜ್ಞಾನ ಆಧಾರಿತ ಮೊಬೈಲ್ ಆ್ಯಪ್‍ನ್ನು ಸಿದ್ಧಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪನಿಗಳು ಹಾಗೂ ಅಭ್ಯರ್ಥಿಗಳಿಗೆ ಪೂರಕ ಮಾಹಿತಿ ಒದಗಿಸುವಲ್ಲಿ ಇದು ಸಹಾಯಕವಾಗಿದೆ.
- ಉದ್ಯೋಗಮೇಳದಲ್ಲಿ ಭಾಗವಹಿಸುವ ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಆನ್‍ಲೈನ್ ನೊಂದಾವಣೆ ಕಡ್ಡಾಯವಾಗಿದೆ
- ಜುವಾರಿ ಆಗ್ರೋ ಕೆಮಿಕಲ್ಸ್ ಲಿಮಿಟೆಡ್, ಟೊಯೋಟೋ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ.ಲಿ, ಜುಬುಲಿಯಂಟ್ ಜೆನರಿಕ್ಸ್ ಲಿಮಿಟಡ್, ಸರ್ವಹಾ ಸಿಸ್ಟಮ್ಸ್ ಪ್ರೈ ಲಿ, ಪಾರಗಾನ್ ಗ್ರೂಪ್, ವರ್ತ ಎಲೆಕ್ಟ್ರಾನಿಕ್ ಇಂಡಿಯಾ ಪ್ರೈ ಲಿ ಮುಂತಾದ ಕಂಪೆನಿಗಳು ಅನುಭವಿ ಅಭ್ಯರ್ಥಿಗಳಿಗೂ ಅವಕಾಶವನ್ನು ಒದಗಿಸುತ್ತಿವೆ.
- ಅನುಭವವಿಲ್ಲದ ಸಿವಿಲ್ ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶಗಳು ವಿರಳವಾಗಿದ್ದರೂ, ಅನುಭವಿ ಅಭ್ಯರ್ಥಿಗಳಿಗೆ ಕಾಮಗಾರಿವಲಯದಲ್ಲಿ ವಿಫುಲ ಅವಕಾಶವಿದೆ.
- ದೂರದ ಊರುಗಳಿಂದ ಆಗಮಿಸುವ ಉದ್ಯೋಕಾಂಕ್ಷಿಗಳಿಗೆ ಜೂನ್ 23 ನಂತರ ಸಂಸ್ಥೆಯ ವತಿಯಿಂದÀ ವಸತಿಯ ಅವಕಾಶವನ್ನು ಕಲ್ಪಿಸಲಾಗುವುದು
- ಉದ್ಯೋಗ ಮೇಳದ ಹಿನ್ನಲೆಯಲ್ಲಿ ಜೂನ್ 17 ಮತ್ತು 18 ರಂದು ಮೂಡಬಿದಿರೆಯ ವಿದ್ಯಾಗಿರಿಯ ಆವರಣದಲ್ಲಿ ಉದ್ಯೋಗ ಮೇಳದ ಕುರಿತು ಮಾಹಿತಿ ಕಾರ್ಯಗಾರ ಜರುಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 9611686148, 8494934852, 9008907716, 8971250414, 9844762311
ಅಭ್ಯರ್ಥಿಗಳ ಉಚಿತ ನೊಂದಾವಣಿಗಾಗಿ:
http://alvaspragati.com/CandidateRegistrationPage
- ವಿಶೇಷ ಸೂಚನೆ: ಐಟಿಐ, ಪಿಯುಸಿ, ಎಸ್‍ಎಸ್‍ಎಲ್‍ಸಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಉದ್ಯೋಕಾಂಕ್ಷಿಗಳಿಗೆ ಆನ್‍ಲೈನ್ ನೊಂದಾವಣೆ ಕಡ್ಡಾಯ
- ಅನ್‍ಲೈನ್ ನೊಂದಾವಣೆಯ ನಂತರ ಅಭ್ಯರ್ಥಿಗಳು ಆಳ್ವಾಸ್ ಪ್ರಗತಿ ಆಪ್‍ನ್ನು ಹೆಚ್ಚಿನ ವಿವರಗಳಿಗಾಗಿ ಡೌನಲೋಡ ಮಾಡಬಹುದು.
ಆಂಡ್ರಾಯಿಡ್ ಬಳಕೆದಾರರಿಗೆ: https://goo.gl/RBjnNb
ಐಒಎಸ್ ಬಳಕೆದಾರಿಗಾಗಿ : https://goo.gl/mTVR9e
- ಅರ್ಹ ವಿದ್ಯಾರ್ಥಿಗಳು ಹಾಗೂ ಆಸಕ್ತ ಉದ್ಯೋಗಾಕಾಂಕ್ಷಿಗಳನ್ನು ತಲುಪಬೇಕೆನ್ನುವುದು ಆಳ್ವಾಸ್ ಪ್ರಗತಿಯ ಮುಖ್ಯ ಉದ್ದೇಶ. ಇದಕ್ಕಾಗಿ ಮೊಬೈಲ್ ಆ್ಯಪ್ ಹಾಗೂ ವೆಬ್‍ಸೈಟ್‍ನ್ನು ಸಿದ್ಧಪಡಿಸಲಾಗಿದ್ದು, ನಿರಂತರ ಮಾಹಿತಿ ನೀಡಲಾಗುತ್ತಿದೆ. ಆಳ್ವಾಸ್ ಪ್ರಗತಿಯ ಹೊಸ ಬೆಳವಣಿಗೆಗಳನ್ನು ಈ ಮೂಲಕ ಅಪ್‍ಡೇಟ್ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸ್ಥೆ ವಿನಂತಿಸಿದೆ.
ವೆಬ್‍ಸೈಟ್: www.alvaspragati.com
ವಿವೇಕ್ ಆಳ್ವ, ಮ್ಯಾನೇಜಿಂಗ್ ಟ್ರಸ್ಟೀ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಡಾ. ಪದ್ಮನಾಭ ಶೆಣೈ, ಪಿ.ಆರ್.ಒ., ಸಂಪತ್ ಜಿ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ, ಸುಶಾಂತ್ ಅನಿಲ್ ಲೋಬೋ, ಪ್ಲೇಸ್‍ಮೆಂಟ್ ಲೀಡ್ಶ್ರೀ, ಕಾಂತ್ ಸುವರ್ಣ , ಸಂಯೋಜಕರು , ಆಳ್ವಾಸ್ ಪ್ರಗತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.