Home Mangalorean News Kannada News ಜೂನ್ 28 ರಂದು ದಾಖಲಾತಿ ಪರಿಶೀಲನೆ

ಜೂನ್ 28 ರಂದು ದಾಖಲಾತಿ ಪರಿಶೀಲನೆ

Spread the love

ಜೂನ್ 28 ರಂದು ದಾಖಲಾತಿ ಪರಿಶೀಲನೆ

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ “ಡಿ” ವೃಂದದ ಅಡುಗೆ ಸಹಾಯಕರ ಮತ್ತು ಕಾವಲುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಅಡುಗೆ ಸಹಾಯಕರ ಹುದ್ದೆಯ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯನ್ನು ಜೂನ್ 21 ರಂದು ನೇತ್ರಾವತಿ ಸಭಾಂಗಣ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉರ್ವಸ್ಟೋರ್, ಕೊಟ್ಟಾರ, ಮಂಗಳೂರು ಇಲ್ಲಿ ನಡೆಸಲಾಗಿರುತ್ತದೆ. ಆದರೆ, ಅರ್ಹ ಅಭ್ಯರ್ಥಿಗಳ ಪಟ್ಟಿಯನುಸಾರ ದಾಖಲಾತಿಗಳ ಪರಿಶೀಲನೆಗೆ ಹಾಜರಾಗದೇ ಇರುವ ಅಡುಗೆ ಸಹಾಯಕರ ಹುದ್ದೆಗೆ ಜೂನ್ 28 ರಂದು ಬೆಳಿಗ್ಗೆ 10 ಗಂಟೆಗೆ ನೇತ್ರಾವತಿ ಸಭಾಂಗಣ, ದ.ಕ ಜಿಲ್ಲಾ ಪಂಚಾಯತ್, ಉರ್ವಸ್ಟೋರ್, ಮಂಗಳೂರು ಇಲ್ಲಿ ಪರಿಶೀಲನೆ ನಡೆಯಲಿದೆ.

ಆದ್ದರಿಂದ, ದಾಖಲಾತಿ ಪರಿಶೀಲನೆಗಾಗಿ ಪ್ರಕಟಿಸಿರುವ ಅರ್ಭರ್ಥಿಗಳ ಪಟ್ಟಿಯಲ್ಲಿರುವ ಹಾಜರಾಗದೇ ಇರುವ ಅಭ್ಯರ್ಥಿಗಳು ಮಾತ್ರ ತಿತಿತಿ.ಜಞ.ಟಿiಛಿ.iಟಿ/ವೆಬ್‍ಸೈಟ್‍ನಲ್ಲಿ ಕಾಲ್‍ಲೆಟರನ್ನು ಡೌನ್‍ಲೋಡ್ ಮಾಡಿಕೊಂಡು, ಕಾಲ್‍ಲೆಟರ್‍ನಲ್ಲಿ ತಿಳಿಸಿರುವಂತೆ ಎಲ್ಲಾ ಮೂಲ ದಾಖಲೆಗಳು ಮತ್ತು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನಿಗಧಿತ ಸಮಯಕ್ಕೆ ಸರಿಯಾಗಿ ನಿಗಧಿತ ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0824-2451237 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love

Exit mobile version