ಜೂ. 13: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಮಾರ್ಗದರ್ಶನ ಶಿಬಿರ
ಉಡುಪಿ : ನೇತಾಜಿ ಸ್ಪೋಟ್ಸ್ ಕ್ಲಬ್ ಪರ್ಕಳ ಮತ್ತು ಬಿಲ್ಲವರ ಸೇವಾ ಸಂಘ, ಬನ್ನಂಜೆ ಇವರ ಜಂಟಿ ಆಶ್ರಯದಲ್ಲಿ ನಾಳೆ (ಜೂ. 13) ಬೆಳಿಗ್ಗೆ ಗಂ. 10ಕ್ಕೆ ಉಡುಪಿ ಬನ್ನಂಜೆಯ ಶಿವಗಿರಿ ಸಭಾಂಗಣದಲ್ಲಿ ಸಿಇಟಿ ಮತ್ತು ನೀಟ್ ಪ್ರವೇಶ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ನ ಸ್ಥಾಪಕಾಧ್ಯಕ್ಷ ಉಮರ್ ಯು. ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿರುವ ಶಿಬಿರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ – ನ್ಯಾಚುರಾಪಥಿ, ಬಿ. ಫಾರ್ಮ, ಫಾರ್ಮ ಡಿ., ಇಂಜಿನೀಯರಿಂಗ್ ಮತ್ತು ಫಾರ್ಮ್ ಸಾಯನ್ಸ್ನ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್ಲೈನ್ ಸಿಇಟಿ/ನೀಟ್ ಕೌನ್ಸಿಲಿಂಗ್ನ ವಿಧಾನ, ದಾಖಲಾತಿ ಪರಿಶೀಲನೆ, ಬೇಕಾಗಿರುವ ಅಗತ್ಯ ದಾಖಲೆಗಳು, ಸೀಟುಗಳ ಆಯ್ಕೆ ಪ್ರಕಿೃಯೆ ಮತ್ತು ಪಿಯುಸಿ ವಿದ್ಯಾರ್ಥಿಗಳ ಕಲಿಕೆಗಿರುವ ಅವಕಾಶಗಳ ಬಗ್ಗೆ ಪೂರಕ ಮಾಹಿತಿ ನೀಡಲಾಗುವುದು.
ಪ್ರವೇಶ ಉಚಿತವಾಗಿದ್ದು, ಆಸಕ್ತರು ಮೊ.ಸಂ. 9448252703 ಅಥವಾ 9845054191ಗೆ ಕರೆಮಾಡಿ ಹೆಸರು ನೋಂದಾಯಿಸಬಹುದೆಂದು ಮಾಧವ ಬನ್ನಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.