ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ
ಮಂಗಳೂರು: ಕೊರೋನಾ ಲಾಕ್ಡೌನ್ ಬಳಿಕ ಕುವೈಟ್ನಿಂದ ಪ್ರಥಮ ಚಾರ್ಟರ್ ವಿಮಾನ ಜೂ. 17 ರಂದು ಸಂಜೆ 5ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಆಗಮಿಸಲಿದೆ.
ಕುವೈಟ್ನಿಂದ ರಾಜ್ಯಕ್ಕೆ ಆಗಮಿಸುವ ಮೊದಲ ವಿಮಾನವೂ ಇದಾಗಿದೆ. ಅಕ್ಟರ್ ಟ್ರಾವೆಲ್ಸ್ ಸಂಸ್ಥೆಯವರು ಜಝಿರ ಏರ್ವೇಸ್ ಸಹಯೋಗದೊಂದಿಗೆ ಈ ಚಾರ್ಟರ್ ವಿಮಾನದ ವ್ಯವಸ್ಥೆ ಕೈಗೊಂಡಿದೆ. 180 ಪ್ರಯಾಣಿಕರು ಈ ವಿಮಾನ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ.
ಪೂರ್ವನಿಗದಿಯಂತೆ ವಂದೇ ಭಾರತ್ ಮಿಷನ್ ಯೋಜನೆ ‘ಎರಡನೆಯ ಆವೃತ್ತಿಯಲ್ಲಿ ಜೂ. 16 ರಂದು ಕುವೈಟ್ನಿಂದ ಬೆಂಗಳೂರು ಮತ್ತು ಹೈದರಾಬಾದ್ಗೆ ವಿಮಾನ ಆಗಮಿಸಬೇಕಾಗಿತ್ತು. ಭಾರತದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟವಾಗಿದ್ದ ವಿಮಾನಗಳ ವೇಳಾಪಟ್ಟಿಯಲ್ಲಿ ಈ ವಿಮಾನಗಳ ಹೆಸರು ದಿಢೀರ್ ಕಣ್ಮರೆಯಾಗಿದ್ದು ಈಗ ವೈಟ್ನಿಂದ ಪ್ರಥಮ ಚಾರ್ಟರ್ ವಿಮಾನ ಜೂ. 17 ರಂದು ಸಂಜೆ 5ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕ್ಕೆ ಆಗಮಿಸಲಿದೆ .