Home Mangalorean News Kannada News ಜೆಪಿ ಹೆಗ್ಡೆ ಬೆಂಬಲಿಗ ರಜತ್ ರಾಮ್ ಮೋಹನ್ ಬಿಜೆಪಿ ಸೇರ್ಪಡೆ

ಜೆಪಿ ಹೆಗ್ಡೆ ಬೆಂಬಲಿಗ ರಜತ್ ರಾಮ್ ಮೋಹನ್ ಬಿಜೆಪಿ ಸೇರ್ಪಡೆ

Spread the love

ಜೆಪಿ ಹೆಗ್ಡೆ ಬೆಂಬಲಿಗ ರಜತ್ ರಾಮ್ ಮೋಹನ್ ಬಿಜೆಪಿ ಸೇರ್ಪಡೆ

ಕಾರ್ಕಳ : ಜಯಪ್ರಕಾಶ್ ಹೆಗ್ಡೆ ಯವರ ಬೆಂಬಲಿಗ, ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ “ರಜತ್ ರಾಮ್ ಮೋಹನ್  ಸೇರಿದಂತೆ ಹಲವಾರು ಯುವಕರು ಭಾರತೀಯ ಜನತಾಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದರು.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ , ವಿದಾನ ಪರಿಷತ್ ನ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಇನ್ನಿತರ ಮುಖಂಡರ ಹಾಗೂ ನೆರೆದ್ದಿದ್ದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜಯಪ್ರಕಾಶ್ ಹೆಗ್ಡೆ ಯವರ ಬೆಂಬಲಿಗ, ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ “ರಜತ್ ರಾಮ್ ಮೋಹನ್ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾದರು.

ಇವರ ಜೊತೆಗೆ ಪೃಥ್ವಿರಾಜ್,ಅಕ್ಷಯ್ ಶೆಟ್ಟಿ,ಪ್ರಮೋದ್ ಜೈನ್,ರವೀಂದ್ರ ಶೆಟ್ಟಿ, ಪ್ರಮೋದ್ ಕುಮಾರ್, ನಿರಂಜನ್, ಶರತ್ ಕುಮಾರ್,ಸ್ವಸ್ತಿಕ್ ಪೂಜಾರಿ ವಿದ್ಯಾರ್ಥಿ ಮುಂದಾಳುಗಳಾದ ಪ್ರಜ್ವಲ್ ನಾಯ್ಕ,ವಿರಾಜ್, ಗುರು ಪ್ರಸಾದ್ ಪೂಜಾರಿ,ಗೌತಮ್ ದೇವಾಡಿಗ ಸೇರ್ಪಡೆಯಾದರು.

ಈಗಾಗಲೇ ಅನೇಕ ಮಂದಿ ಯುವಕ ಮಿತ್ರರು,ವಿದ್ಯಾರ್ಥಿ ಮಿತ್ರರು ಬಿ.ಜೆ.ಪಿ ಸೇರಲು ಬಹಳಷ್ಟು ಸಂಖ್ಯೆಯಲ್ಲಿ ಉತ್ಸುಕ ರಾಗಿದ್ದು ಮುಂದಿನ ದಿನಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಬಿ.ಜೆ.ಪಿ ಗೆ ಸೇರ್ಪಡೆಯಾಗಲಿದ್ದಾರೆ ಎಂದು ರಜತ್ ರಾಮ್ ಮೋಹನ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.


Spread the love

Exit mobile version