ಜ್ಯುವೆಲರಿ ಮಾಲಕನ ದರೋಡೆ ಸಂಚು ರೂಪಿಸಿದ ಆರೋಪಿಗಳ ಬಂಧನ
ಮಂಗಳೂರು: ನಗರದ ಜುವೆಲ್ಲರಿ ಮಾಲಕನ ದರೋಡೆ ಸಂಚು ರೂಪಿಸಿದ ಅಂತರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಶೇಖ್ ಮಹಮ್ಮದ್ ಅನ್ಸಾರ್ @ ಅನ್ಸಾರ್ (34 ವರ್ಷ), ರಮೀಜ್ @ ರಮೀಜ್ ಕೆ.ಸಿ.ರೋಡ್ (21 ವರ್ಷ ), ಮಹಮ್ಮದ್ ತೌಸೀಫ್ @ ತಚ್ಚು (24 ವರ್ಷ), ಮಹಮ್ಮದ್ ತೌಸೀಫ್ @ ತೌಸೀಫ್ (25 ವರ್ಷ), ಉಬೇದುಲ್ಲಾ (25 ವರ್ಷ) ತಂದೆ: ಮುಸ್ತಫಾ, ಮಹಮ್ಮದ್ ಆಲಿ (25 ವರ್ಷ), ಅಂತರಾಜ್ಯ ಆರೋಪಿಗಳಾದ ಅಹಮ್ಮದ್ ಕಬೀರ್ (30 ವರ್ಷ), ಅಸ್ಗರ್ ಆಲಿ @ ಅಸ್ಗರ್ @ ಅಚ್ಚು (27 ವರ್ಷ), ಸಾಬೀತ್ (19 ವರ್ಷ), ಮೊಹಮ್ಮದ್ ಸಬಾದ್ @ ಸವಾದ್ (22 ವರ್ಷ), ಅಮೀರ್ ಆಲಿ @ ಅಮೀರ್ (19 ವರ್ಷ) ಎಂದು ಗುರುತಿಸಲಾಗಿದೆ.
ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮದ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ಕೆಲವು ಯುವಕರು ಒಟ್ಟು ಸೇರಿಕೊಂಡು ಯಾರನ್ನೋ ದರೋಡೆ ಮಾಡುವ ಕುರಿತು ಮಾತನಾಡಿಕೊಂಡು ದರೋಡೆ ನಡೆಸುವ ಸಿಧ್ದತೆಯಲ್ಲಿ ಇರುವ ಬಗ್ಗೆ ಖಚಿತ ವರ್ತಮಾನ ಬಂದಿದ್ದು, ಇದರಂತೆ ಎ.ಸಿ.ಪಿ.ಯವರು , ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿ.ಐ ಸಿದ್ದ ಗೌಡ ಭಜಂತ್ರಿ ಮತ್ತು ತಮ್ಮ ಅಧೀನದಲ್ಲಿರುವ ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರನ್ನು ಕರೆದುಕೊಂಡು ಮಂಗಳೂರು ನಗರದ ಪಚ್ಚನಾಡಿ ಎಂಬಲ್ಲಿರುವ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ಹೋದಾಗ ಸದ್ರಿ ರಸ್ತೆಯ ಬದಿಯಲ್ಲಿ ಒಂದು ಮಾರುತಿ 800 ಕಾರು, ಮಾರುತಿ ರಿಟ್ಜ್ ಕಾರನ್ನು ಮತ್ತು 02 ಬೈಕ್ ಗಳನ್ನು ನಿಲ್ಲಿಸಿಕೊಂಡು, ಕೆಲವು ಯುವಕರು ಮಾತನಾಡುತ್ತಿದ್ದುದನ್ನು ಕಂಡು, ನಾವುಗಳು, ನಮ್ಮ ವಾಹನಗಳನ್ನು ಸದ್ರಿ ಕಾರುಗಳಿಗೆ ಅಡ್ಡವಾಗಿ ಅದರಲ್ಲಿದ್ದ 11 ಜನರನ್ನು ವಶಕ್ಕೆ ಪಡೆದು
ಇವರ ವಶದಲ್ಲಿದ ಸೊತ್ತುಗಳನ್ನು ಈ ಕೆಳಗಿನಂತಿದೆ.
1. ಮಾರುತಿ 800 ಕಾರು ನಂಬ್ರ: ಕೆಎ-02-ಝಡ್-4617 , ಕಾರಿನ ಅಂದಾಜು ಮೌಲ್ಯ ರೂಪಾಯಿ 50,000/-
2. ಮಾರುತಿ ರಿಟ್ಜ್ ಕಾರಿನ ಅಂದಾಜು ಮೌಲ್ಯ ರೂಪಾಯಿ 03 ಲಕ್ಷ
3. ಕಬ್ಬಿಣದ ಚೂರಿ- 1
4. ಕಬ್ಬಿಣದ ರಾಡ್- 1
5. ಕಬ್ಬಿಣದ ರಾಡ್- 1
6. ಕಾಟು ಮರದ ಸೋಂಟೆ -1
7. ಕಬ್ಬಿಣದ ರಾಡ್- 1.
8. ಕಾಟು ಮರದ ಸೋಂಟೆ- 1
9. ಕಾಟು ಮರದ ಸೋಂಟೆ-1
10. ನಕಲಿ ನಂಬರ್ ಪ್ಲೇಟ್ -4
11.ನಗದು ರೂ.16050/-
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ-ರೂ.3,66050/- ಆಗಿರುತ್ತದೆ.
ಇವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಆರೋಪಿತರು ರಥಬೀದಿಯ ವೈಷ್ಣವಿ ಜ್ಯುವೆಲ್ಲರಿ ಮಾಲಿಕನಾದ ಸಂತೋಷ್ ಎಂಬವರಿಗೆ ಸೇರಿದ ನಗದು ಮತ್ತು ಚಿನ್ನಾಭರಣಗಳನ್ನು ಲೂಠಿ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಈ ದರೋಡೆ ಸಂಚಿನಲ್ಲಿ ಇನ್ನೂ 4 ಆರೋಪಿತರು ಪರಾರಿಯಾಗಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು.
ಈ ಮೇಲಿನ ಆರೋಪಿಗಳ ಮೇಲೆ ಕರ್ನಾಟಕ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಲ್ಲೆ ಪ್ರಕರಣ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗರುವ ಬಗ್ಗೆ ತನಿಖೆಯ ವೇಳೆ ತಿಳಿದುಬಂದಿರುತ್ತದೆ.
ಸುಮಾರು 20 ದಿನಗಳ ಹಿಂದೆ ರಥಬೀದಿಯ ಇದೇ ವೈಷ್ಣವಿ ಜ್ಯುವೆಲ್ಲರಿ ಮಾಲಿಕನಾದ ಸಂತೋಷ್ ಎಂಬವರಿಗೆ ಸೇರಿದ ನಗದನ್ನು ಬೇರೆ ತಂಡವೊಂದು ಲೂಟಿ ಮಾಡಿದ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಯಾಗಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಹನುಮಂತರಾಯ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ಕೆ.ರಾಮ ರಾವ್ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಎ.ಎಸ್.ಐ ಮೋಹನ.ಕೆ.ವಿ, ಹೆಚ್ ಸಿ ಗಳಾದ ಗಿರೀಶ್ ಬೆಂಗ್ರೆ, ಸುನೀಲ್ ಕುಮಾರ್, ರೆಜಿ ವಿ ಎಂ, ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್ ,ಮಹೇಶ್, ಮಹಮ್ಮದ್ ಶರೀಪ್ ,ದಯಾನಂದ, ಸುಧೀರ್ ಶೆಟ್ಟಿ, ಮಹಮ್ಮದ್ ಇಕ್ಬಾಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಯ ಪಿ.ಐ ರವರಾದ ಎಸ್.ಎಚ್.ಭಜಂತ್ರಿ ಮತ್ತು ಹೆಚ್.ಸಿ ಗಳಾದ ರಂಜನ್, ಮೋಹನ್, ಸುಭಾಶ್ ಸಿಬ್ಬಂದಿಗಳಾದ ಮಾರುತಿ, ಆನಂದ ಮತ್ತು ಗ್ಯಾನಪ್ಪ ರವರುಗಳು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.