Home Mangalorean News Kannada News ಜ: 11-12 ರಂದು  ಸೈಂಟ್ ಮೇರೀಸ್ ಸಿರಿಯನ್ ಕೇಥೆಡ್ರಲ್  ಬ್ರಹ್ಮಾವರ ಉದ್ಘಾಟನೆ

ಜ: 11-12 ರಂದು  ಸೈಂಟ್ ಮೇರೀಸ್ ಸಿರಿಯನ್ ಕೇಥೆಡ್ರಲ್  ಬ್ರಹ್ಮಾವರ ಉದ್ಘಾಟನೆ

Spread the love

 ಜ: 11-12 ರಂದು  ಸೈಂಟ್ ಮೇರೀಸ್ ಸಿರಿಯನ್ ಕೇಥೆದ್ರಲ್  ಬ್ರಹ್ಮಾವರ ಉದ್ಘಾಟನೆ

ಉಡುಪಿ: 129 ವರ್ಷ ಹಳೆಯದಾದ ಬ್ರಹ್ಮಾವರದ ಸೈಂಟ್ ಮೇರೀಸ್ ಸಿರಿಯನ್ ಕೇಥೆದ್ರಲ್ ನ ನವೀಕರಿಸಿದ ದೇವಲಾಯದ ಕಟ್ಟಡವು 2018ರ ಜನವರಿ 11 ಮತ್ತು 12ರಂದು ಪುನರ್ ಪ್ರತಿಷ್ಠಾಪನೆಗೊಳ್ಳಲು ಸಿದ್ಧವಾಗಿದೆ ಎಂದು ಕೆಥೆಡ್ರಲ್ ಸಹಾಯಕ ಧರ್ಮಗುರು ವಂ ನೊಯೇಲ್ ಲೂವಿಸ್ ಅವರು ಉಡುಪಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದರು.

ಭಾರತೀಯ (ಮಲಂಕಾರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಸರ್ವೋಚ್ಚ ಮುಖ್ಯಸ್ಥರು, ಕಥೋಲಿಕೊಸ್ ಪರಮ ಪವಿತ್ರ ಬಸೆಲಿಯೋಸ್ ಮಾರ್ತೋಮಾ ದ್ವಿತಿಯರ ನೇತ್ರತ್ವದಲ್ಲಿ ಪುನರ್ ಪ್ರತಿಷ್ಠಾಪನೆಯ ದೈವೀಕ ವಿಧಿವಿಧಾನಗಳು ನಡೆಯಲಿವೆ. ಪರಮ ಪವಿತ್ರ ಬಸೆಲಿಯೋಸ್ ಮಾರ್ತೋಮಾ ದ್ವಿತಿಯರೊಂದಿಗೆ, ಬ್ರಹ್ಮಾವರ ಬಿಷಪ್ ಯಾಕೂಬ್ ಮಾರ್ ಇಲಿಯಾಸ್, ಮುಂಬೈ ಬಿಷಪ್ ಗೀರ್ ವರ್ಗೀಸ್ ಮಾರ್ ಕಾರ್ಲೋಸ್, ಕೊಲ್ಕತ್ತಾ ಬಿಷಪ್ ಜೋಸೆಫ್ ಮಾರ್ ದಿಯಾನ್ನಿಯೊಸ್, ಅಹ್ಮದಾಬಾದ್ ಬಿಷಪ್ ಗೀರ್ ವರ್ಗೀಸ್ ಮಾರ್ ಯೂಲಿಸ್  ರವರು ಪುನರ್ ಪ್ರತಿಷ್ಠಾಪನೆಯ ದೈವೀಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವರು.

ರಾಮಲಿಂಗ ರೆಡ್ಡಿ ಯವರು (ಗೌರವಾನ್ವಿತ. ಗ್ರಹ ಮಂತ್ರಿಗಳು., ಕರ್ನಾಟಕ ಸರಕಾರ), ಶ್ರೀ ಕೆ. ಜೆ. ಜೋರ್ಜ್ ರವರು (ಗೌರವಾನ್ವಿತ. ಮಂತ್ರಿಗಳು., ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಕರ್ನಾಟಕ ಸರಕಾರ) ಮತ್ತು ಶ್ರೀ ಪ್ರಮೋದ್ ಮಧ್ವರಾಜ್ ರವರು (ಗೌರವಾನ್ವಿತ. ಮಂತ್ರಿಗಳು., ಯುವಜನ ಮತ್ತು ಕ್ರೀಡಾ ಪ್ರಾಧಿಕಾರ, ಪಶು ಸಂಗೋಪನೆ, ಮೀನುಗಾರಿಕೆ  ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು – ಕರ್ನಾಟಕ ಸರಕಾರ) ಉದ್ಘಾಟನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಇವರೊದಿಗೆ ಸ್ಥಳೀಯ ಪ್ರಮಖ ರಾಜಕೀಯ ಮತ್ತು ಧಾರ್ಮಿಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Brief History / ಸಂಕ್ಷಿಪ್ತ ಇತಿಹಾಸ

1889ರಲ್ಲಿ ಸಂತರ ಸಮಾನಾರಾದ ಮತ್ತು ಕ್ರಾಂತಿಕಾರಿ ಬಿಷಪರಾದ, ಆಶೀರ್ವದಿಸಲ್ಪಟ್ಟ ಅಲ್ವಾರೀಸ್ ಮಾರ್ ಜೂಲಿಯಸ್ ರವರಿಂದ ಈ ದೇವಾಲಯವು ಸ್ಥಾಪನೆಯಾಯ್ತು ಮತ್ತು ಬ್ರಹ್ಮಾವರದ ಪವಾಡ ಪುರುಷರಾದ, ಆಶೀರ್ವದಿಸಲ್ಪಟ್ಟ ಫಾ. ಆರ್ ಝೆಡ್. ನೊರೊನ್ಹಾರವರು ಇದನ್ನು ಪೋಷಿಸಿ ಬೆಳೆಸಿದರು.

ಹುಲ್ಲಿನ ಮೇಲ್ಚಾವಣಿ ಹೊಂದಿದ ಕಟ್ಟದಲ್ಲಿ ಆಶೀರ್ವದಿಸಲ್ಪಟ್ಟ ಫಾ. ಆರ್ ಝೆಡ್. ನೊರೊನ್ಹಾರವರ ಮೊಟ್ಟ ಮೊದಲ ಬಲಿಪೂಜೆಯೊಂದಿಗೆ ದೇವಾಲಯದ ಆರಂಭವಾಯಿತು. ತದನಂತರ, ಆಶೀರ್ವದಿಸಲ್ಪಟ್ಟ ಫಾ. ಆರ್ ಝೆಡ್. ನೊರೊನ್ಹಾರವರ ಈ ಹಿಂದಿನ ಹಂಚಿನ ಮೇಲ್ಛಾವಣಿಯಿರುವ ಬ್ರಹತ್ ಇಗರ್ಜಿಯ ಶಂಕು ಸ್ಥಾಪನೆ ಮಾಡಿದರು. ಹಳೆಯ ಕೇಥೆದ್ರಲ್ ನ ಕಟ್ಟಡದ ಕಾಮಗಾರಿಯು ಫಾ. ಪಿ. ಜಿ. ಕೊಶಿಯವರ ಕಾಲದಲ್ಲಿ ಅಂದರೆ 1960ರಲ್ಲಿ ಸಂಪೂರ್ಣಗೊಂಡು, ದರ್ಮನಿಷ್ಠೆ, ಭಕ್ತಿ ಮತ್ತು ಗೌರವದ ಸ್ಮಾರಕವಾಗಿ ಬೆಳೆದುಬಂತು.

ಕಾಲಕ್ರಮೇಣ, ಭಕ್ತಿಕರ ಸಂಖ್ಯೆಯಲ್ಲಿ ಹೆಚ್ಚಳವಾದ್ದರಿಂದ ಕೆಥೆದ್ರಲ್ ನ ಕಟ್ಟಡವನ್ನು ವಿಸ್ತರಿಸುವುದು ಮತ್ತು ನವೀಕರಿಸುವುದು ಅಗತ್ಯವೇನಿಸುತು.

2013ರ  ಅಗಸ್ಟ್ 4 ರಂದು ಅಂದಿನ ಧ್ರಮಗುರುಗಳಾದ ವಂದನೀಯ ಫಾದರ್. ಲೋರೆನ್ಸ್ ಡಿ’ ಸೋಜಾರವರ ಅಧಿಕಾರವಧಿಯಲ್ಲಿ, ಬ್ರಹ್ಮಾವರ ಧರ್ಮ ಪ್ರಾತ್ಯಂದ ಬಿಷಪರಾದಾ, ಹಿಸ್ ಗ್ರೇಸ್ ಯೋಕೊಬ್ ಮಾರ್ ಎಲಿಯಾಸ್ ರವರು ಕೆಥೆದ್ರಲ್ ನ ಕಟ್ಟಡದ ನವೀಕಾರಣದ ಕಾರ್ಯಕ್ಕೆ ಶಂಕು ಸ್ಥಾಪನೆ ಮಾಡಿದರು.

ಕೆಥೆದ್ರಲ್ ನ ಕಟ್ಟಡದ ನವೀಕರಣದ ಕಾರ್ಯವು ಪ್ರಸ್ತುತ ಧರ್ಮಗುರುಗಳಾದ ವಂದನೀಯ ಫಾದರ್. ಸಿ.ಎ.ಐಸಾಕ್ ರವರ ಮುಂದಾಳತ್ವದಲ್ಲಿ ಸಂಪೂರ್ಣಗೊಂಡಿದೆ.

 ನವೀಕರಿಸಿದ ಚರ್ಚಿನ ವಿಶೇಷತೆಗಳು

ನವೀಕರಿಸಿದ ಕೆಥೆದ್ರಲ್ ಕಟ್ಟಡವು ಪೋರ್ಚುಗೀಸ್ , ಕೇರಳ ಮತ್ತಿ ಆಧುನಿಕ ವಾಸ್ತುಶೈಲಿಯ ಮಿಶ್ರಣವನ್ನು ಹೊಂದಿದೆ.  ಮುಂಭಾಗದಲ್ಲಿ  ಸುಂದರವಾದ ಮಧ್ಯದಲ್ಲಿ ಎತ್ತರಕ್ಕಿರುವ ಕಟ್ಟಡದ ವಿನ್ಯಾಸವು ಕರಾವಳಿಯ ಕೊಂಕಣಿ ಕ್ರೈಸ್ತರ ಮೇಲೆ ಪೋರ್ಚುಗೀಸ್ ವಾಸ್ತುಶೈಲಿಯ ಪ್ರಬಾವವನ್ನು ದರ್ಶಿಸುತ್ತದೆ.  ಬಲಿಪೀಥದ ಮೇಲಿರುವ ಬೃಹತ್ ನೀಲಿ ಗುಮ್ಮಟವು ಓರ್ಥೊಡೊಕ್ಸ್ ಚರ್ಚಗಳ ವಿಶೇಷವಾಗಿ ಬೈಜಾಂಟಿನ್ ಚರ್ಚಿನ ವಾಸ್ತುಶಿಲ್ಪದ ಮಾದರಿಯಾಗಿದೆ. ಚರ್ಚಿನ ಮುಂಭಾಗದಲ್ಲಿರುವ ಕಲ್ಲಿನ ಶಿಲುಬೆ, ಏಳು ಹಂತಗಳಿರುವ ಕಲ್ಲಿನ ದೀಪ ಸ್ತಂಭ ಮತ್ತು 40 ಅಡಿಗಳ ಚಿನ್ನದ ಲೇಪವಿರುವ ಉಕ್ಕಿನ ಧ್ವಜಸ್ತಂಭವು ಭಾರತದ / ಕೇರಳದ ಪ್ರಾಚೀನ ವಾಸ್ತುಶೈಲಿಯನ್ನು ಬಿಂಬಿಸುವುದರೊಂದಿಗೆ, ಮಲಂಕಾರ ಓರ್ಥೊಡೊಕ್ಸ್ ಚರ್ಚಿನ ಭಾರತೀಯತೆಯನ್ನು ಪ್ರತಿದ್ವನಿಸುತ್ತಿದೆ. ಚರ್ಚಿನ ಒಳಭಾಗದಲ್ಲಿ ಸುಂದರವಾದ ಬಣ್ಣದ ಗಾಜಿನ ವರ್ಣಚಿತ್ರಗಳನ್ನು ನೋಡಬಹುದು. ಇವು ಯುರೋಪಿಯನ್ ಚರ್ಚಿನ ಪ್ರಮುಖ ಲಕ್ಷಣವಾಗಿದೆ. ನವೀಕರಿಸಿದ ಇಗರ್ಜಿಯಾ ಅತೀ ಸುಂದರವಾದ ಭಾಗವೆಂದರೆ ಸಂಪೂರ್ಣವಾಗಿ ಮರದಿಂದ ವಿನ್ಯಾಸಗೊಳಿಸಿದ  ಬಲಿಪೀಠ (ಅಲ್ತಾರ್).  ಇಡೀ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಇಂತಹ ವಿನ್ಯಾಸ ಮೊದಲೆನೆಯದಾಗಿದೆ.

Programme Schedule / ಕಾರ್ಯಕ್ರಮದ ವೆಳಾಪಟ್ಟಿ

ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮವು ದಿನಾಂಕ 7-1-2018 ರ ಆದಿತ್ಯವಾರದಂದು ಪವಿತ್ರ ಬಲಿಪೂಜೆಯ ನಂತರ ಬೆಳಗ್ಗೆ 10.30ಕ್ಕೆ ನಡೆಯುವ ಧ್ವಜಾರೋಹಣದೊದಿಗೆ ಆರಂಭವಾಗುವುದು.

7-1-2018 ರಿಂದ 10-1-2018 ರವರೆಗೆ ಪ್ರತಿ ಬೆಳಗ್ಗೆ 8 ಗಂಟೆಗೆ ಪವಿತ್ರ ಬಲಿಪೂಜೆ ಮತ್ತು ಸಂಜೆ 6 ಗಂಟೆಗೆ ವಿಶೇಷ ಸಂಧ್ಯಾ ಪ್ರರ್ಥೆನೆಗಳು ನೆಡೆಯಿಲಿರುವುದು.

ಜನವರಿ 11ನೇ ತಾರಿಕಿನಿಂದು ಬ್ರಹ್ಮಾವರದ ಆಕಾಶವಾಣಿ ಸರ್ಕಲ್ ನಿಂದ ಎಸ್.ಎಮ್.ಎಸ್ ಕೆಥೆದ್ರಲ್ ನವರೆಗೆ ನಡೆಯುವ ಹೊರೆಕಾಣಿಕೆಯ ಮೆರವಣಿಗೆಯೊಂದಿಗೆ ಪ್ರಮುಖ ಉತ್ಸವಾದಿ ಕಾರ್ಯಕ್ರಮಗಳು ಆರಂಭವಾಗಲಿದೆ.  ಹೊರೆಕಾಣಿಕೆಯ ಮೆರವಣಿಗೆಯನ್ನು ಬ್ರಹ್ಮಾವರ ಧರ್ಮಪ್ರಾಂತ್ಯದ ಬಿಷಪರಾದ ಹಿಸ್ ಗ್ರೇಸ್ ಯಾಕೊಬ್ ಮಾರ್ ಎಲಿಯಾಸ್ ರವರು ಉದ್ಘಾಟಿಸಲಿರುವರು.

ಅದೇ ದಿನ ಸಂಜೆ 5.30 ರಿಂದ ನವೀಕರಿಸಿದ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಪ್ರಾರ್ಥನಾ ವಿಧಿಗಳು ನಡೆಯಲಿದ್ದು ರಾತ್ರಿ 8.30 ಕ್ಕೆ ಭೋಜನದ ವ್ಯವಸ್ಥೆ ಮಾಡಲಾಗಿದೆ.

ದಿನಾಂಕ ಜನವರಿ  12 ರಂದು  ಬೆಳಗ್ಗೆ 6.30 ರಿಂದ  ಪುನರ್ ಪ್ರತಿಷ್ಠಾಪನೆಯ ಪ್ರಾರ್ಥನಾ ವಿಧಿಗಳ ಎರಡನೇ ಭಾಗವು ಆರಂಭವಾಗಲಿದೆ. ತದನಂತರ ಬೆಳಗ್ಗೆ 8.30 ಕ್ಕೆ ಸರಿಯಾಗಿ ಪುನರ್ ಪ್ರತಿಷ್ಠಾಪನೆಗೊಂಡ ದೇವಾಲಯದಲ್ಲಿ ಪವಿತ್ರ ಬಲಿಪೂಜೆ ನಡೆಯಲಿದೆ.

ಪವಿತ್ರ ಬಲಿಪೂಜೆಯ ನಂತರ ಸಾರ್ವಜನಿಕ  ಸಭೆಯನ್ನು ಆಯೋಜಿಸಲಾಗಿದೆ

ಸಾರ್ವಜನಿಕ  ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ಧರ್ಮಪ್ರಾಂತ್ಯದ ಬಿಷಪರಾದ ಹಿಸ್ ಗ್ರೇಸ್ ಯಾಕೊಬ್ ಮಾರ್ ಎಲಿಯಾಸ್ ರವರು ವಹಿಸಲಿರುವರು. ಸಾರ್ವಜನಿಕ  ಸಭೆಯನ್ನು ಕಥೋಲಿಕೊಸ್ ಪರಮ ಪವಿತ್ರ ಬಸೆಲಿಯೋಸ್ ಮಾರ್ತೋಮಾ ದ್ವಿತಿಯರು ಉಧ್ಘಾಟಿಸಿ, ಉಧ್ಗಾಟನ ಭಾಷಣವನ್ನು ಮಾಡಲಿರುವರು.

 


Spread the love

Exit mobile version