ಜ.19 ಮತ್ತು 20ರಂದು ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ
ಮಂಗಳೂರು : ಕೇಂದ್ರ ಸಂಸ್ಕøತಿ ಸಚಿವಾಲಯದ ವತಿಯಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿ ಜ.19 ಮತ್ತು 20ರಂದು ನಗರದ ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ ನಡೆಯಲಿದೆ.
ದೇಶದ ವೈವಿಧ್ಯತೆ ಹಾಗೂ ಏಕತೆ ಸಾರುವ ಈ ಉತ್ಸವದಲ್ಲಿ ವಿವಿಧ ರಾಜ್ಯಗಳ ಕಲಾವಿದರು ತಮ್ಮ ಕಲಾನೈಪುಣ್ಯತೆ ಪ್ರದರ್ಶಿಸಲಿದ್ದಾರೆ ಎಂದು ದ.ಕ.ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ ಅವರು ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವ ಆಯೋಜನೆಯಾಗಿದ್ದು, ಮೂರನೇ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯುತ್ತಿದೆ.ದೇಶದ ವಿವಿಧ ಭಾಗಗಳ ಜನರ ಸಂಸ್ಕøತಿಯನ್ನು ಪರಸ್ಪರ ಅರಿತುಕೊಳ್ಳುವುದು ಈ ಉತ್ಸವದ ಉz್ದÉೀಶವಾಗಿದೆ ‘ ಎಂದರು.
ಅರುಣಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್ಗಡ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಗುಜರಾತ್ ಸಹಿತ ವಿವಿಧ ರಾಜ್ಯಗಳ 26 ತಂಡಗಳು ಜನಪದ, ಬುಡಕಟ್ಟು, ಶಾಸ್ತ್ರೀಯ ಹಾಗೂ ಅಪರೂಪದ ನೃತ್ಯಪ್ರಕಾರಗಳನ್ನು ಪ್ರದರ್ಶಿಸಲಿವೆ. 400ಕ್ಕೂ ಅಧಿಕ ಕಲಾವಿದರ ಭಾಗವಹಿಸಲಿದ್ದಾರೆ. ಸಾಂಸ್ಕøತಿಕ ಮಹೋತ್ಸವದ ಅಂಗವಾಗಿ ವಿವಿಧ ರಾಜ್ಯಗಳ ಕರಕುಶಲ ವಸ್ತು ಪ್ರದರ್ಶನದ 21 ಮಳಿಗೆಗಳು ಹಾಗೂ 5 ರಾಜ್ಯಗಳ ಆಹಾರ ಮಳಿಗೆಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು.
ಜ.19ರಂದು ಸಾಯಂಕಾಲ 6 ಗಂಟೆಗೆ ರಾಷ್ಟ್ರೀಯ ಸಾಂಸ್ಕøತಿಕ ಮಹೋತ್ಸವದ ಉದ್ಘಾಟನೆ ನೆರವೇರಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೊ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಮಯೋಜಕರಾದ ಆರ್.ಉಮಾಶಂಕರ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.