Spread the love
ಜ.22: ವೆಲ್‍ಫೇರ್ ಅಸೋಸಿಯೇಶನ್ ವತಿಯಿಂದ ರಕ್ತದಾನ ಶಿಬಿರ
ಉಡುಪಿ: ಉಡುಪಿ ಮುಸ್ಲಿಂ ವೆಲ್‍ಫೇರ್ ಅಸೋಸಿಯೇಶನ್ ವತಿಯಿಂದ ಮಣಿಪಾಲ ಕೆಎಂಸಿಯ ಬ್ಲಡ್‍ಬ್ಯಾಂಕ್ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಜ.22ರಂದು ಬೆಳಗ್ಗೆ 10.30ಕ್ಕೆ ಉಡುಪಿ ಜಾಮೀಯ ಮಸೀದಿಯ ವರಾಠದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆಎಂಸಿಯ ವೈದ್ಯ ಡಾ.ಅಬ್ದುಲ್ ರಝಾಕ್, ಬ್ಲಡ್‍ಬ್ಯಾಂಕಿನ ಅಸೋಸಿಯೇಟ್ ಪೆÇ್ರ.ಡಾ.ಶಮೀ ಶಾಸ್ತ್ರೀ, ಮಣಿ ಪಾಲ ಮಸೀದಿ ಅಧ್ಯಕ್ಷ ಹಾಜಿ ಕೆ.ಅಬ್ದುಲ್ಲಾ ಪರ್ಕಳ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಸಯ್ಯದ್ ಯಾಸೀನ್, ಎಸ್‍ಐಓ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್, ಪಿಎಫ್‍ಐ ಉಡುಪಿ ವಿಭಾಗ ಅಧ್ಯಕ್ಷ ಬಶೀರ್ ಎ. ರಹಿಮಾನ್ ಭಾಗವಹಿಸಲಿರುವರು ಎಂದು ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love