ಜ.23-26: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

Spread the love

ಜ.23-26: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಸಿರಿ ತೋಟಗಾರಿಕೆ ಸಂಘ ಮಂಗಳೂರು ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.23ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಈ ಬಾರಿಯ ಪ್ರದರ್ಶನದಲ್ಲಿ ಹೂವುಗಳಿಂದ ತಯಾರಿಸಲಾದ 22 ಅಡಿ ಎತ್ತರದ ಐಫೆಲ್ ಟವರ್ ವಿಶೇಷ ಆಕರ್ಷಣೆಯಾ ಗಿರಲಿದೆ. 12 ಅಡಿ ಸುತ್ತಳತೆಯಲ್ಲಿ ಅಂದಾಜು 2 ಲಕ್ಷ ವಿವಿಧ ಹೂವುಗಳಿಂದ ಈ ಟವರ್ ಸಿಂಗಾರಗೊಳ್ಳಲಿದೆ ಎಂದು ದ.ಕ. ಜಿ.ಪಂ. ಸಿಇಒ ಡಾ. ಆನಂದ್‌ರವರು ಮಂಗಳವಾರ ಕದ್ರಿ ಉದ್ಯಾನವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಫೋಟೋ ಪ್ರೇಮ್, ಸೆಲ್ಫಿ ಝೋನ್ ಮಾದರಿ, ಮಶ್ರೂಮ್, ಹನಿಬಿ, ಮಿಕ್ಕಿ ಮೌಸ್ ಹಾಗೂ ವಿವಿಧ ಜಾತಿಯ ಪುಷ್ಪಗಳಿಂದ 4ರಿಂದ 6 ಅಡಿ ಎತ್ತರದಲ್ಲಿ ಕಲಾಕೃತಿಗಳು ಈ ಬಾರಿಯ ವಿಶೇಷತೆಗಳಲ್ಲಿ ಸೇರಿವೆ. ಸಿರಿಧಾನ್ಯದಲ್ಲಿ ಮತ್ತು ಅಲಂಕಾರಿಕ ಎಲೆಗಳಿಂದ ಕಂಬಳ ಕೋಣದ ಮಾದರಿಯನ್ನು 5 ರಿಂದ 6 ಅಡಿ ಸುತ್ತಳತೆಯ ತಯಾರಿಸಿ ಪ್ರದರ್ಶಿಸಲಾಗುವುದು. ಸಿರಿಧಾನ್ಯದಲ್ಲಿ ಯಕ್ಷಗಾನದ ಎರಡು ಕಲಾಕೃತಿ ಮತ್ತು ಮೀನುಗಾರರ ಮತ್ತು ಕಂಬಳ ಓಟಗಾರನ ಬಗ್ಗೆ ಕಲಾಕೃತಿಯನ್ನು ನಿರ್ಮಿಸಿ ಪ್ರದರ್ಶಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜ.23ರಂದು ಬೆಳಗ್ಗೆ 11ಕ್ಕೆ ಸ್ಪೀಕರ್ ಯು.ಟಿ. ಖಾದರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಡಾ. ಆನಂದ್ ತಿಳಿಸಿದರು.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಸುಮಾರು 20,000 ಸಂಖ್ಯೆಯ 30ಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳಾದ ಸಾಲಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಡೇಲಿಯಾ, ಪೆಟೂನಿಯಾ, ಟೊರಿನೊ ಮತ್ತಿತರ ಹೂವುಗಳನ್ನು ಕುಂಡದಲ್ಲಿ ಬೆಳೆಯಲಾಗಿದ್ದು, ಪ್ರದರ್ಶನದಲ್ಲಿ ಜೋಡಿಸಲಾಗುವುದು. ಇಕೆಬೆನಾ ಹೂವಿನ ಜೋಡಣೆಯ ಪ್ರದರ್ಶನವೂ ಇದೆ ಎಂದು ಎಂದರು.

ಝೇಂಕಾರ ಬ್ರ್ಯಾಂಡ್‌ನ ಜೇನು ಮಾರಾಟ ಮತ್ತು ಸಂಸ್ಕರಣೆ ಹಾಗೂ ಗುಣಮಟ್ಟ ಸುಧಾರಿಸುವ ಬಗ್ಗೆ, ಮಾಹಿತಿ, ಪ್ರಚಾರ ಕೈಗೊಂಡು, ವಿವಿಧ ಜೇನು ಸಹಕಾರ ಸಂಘ, ರೈತ ಉತ್ಪಾದಕರ ಸಂಸ್ಥೆಗಳಿಂದ ಜೇನಿನ ವಿವಿಧ ತಳಿಗಳ, ಮೌಲ್ಯ ವತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಜೇನಿನ ಔಷಯ ಗುಣಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಪಿಲಿಕುಳ ಜೈವಿಕ ಉದ್ಯಾನವನ ವತಿಯಿಂದ ಪಶ್ಚಿಮ ಘಟ್ಟದ ಪ್ರಮುಖ ಸಸ್ಯ ಪ್ರಬೇಧಗಳ ಮಾಹಿತಿ ನೀಡುವುದು, ಔಷಯ ಗಿಡಗಳ ಪ್ರದರ್ಶನ ಮತ್ತು ಮಹತ್ವ ಹಾಗೂ ರೈತ ಉತ್ಪಾದಕರ ಸಂಸ್ಥೆಗಳಿಂದ ವಿವಿಧ ದೇಸಿ ಸೀಡ್‌ಗಳ ಪ್ರದರ್ಶನ ಮಾಡಲಾಗುವುದು. ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರೋಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು. ರೈತರಿಂದ ಹಣ್ಣು, ತರಕಾರಿಗಳ ಮಾದರಿ ಪ್ರದರ್ಶನ, ಗೆಡ್ಡೆ ಗೆಣಸು, ದೇಸಿ ಬೀಜಗಳ ಪ್ರದರ್ಶನ, ಮಾರಾಟ, ಸ್ವಸಹಾಯ ಸಂಘಗಳ ಮ ಉತ್ಪನ್ನಗಳ ಪ್ರದರ್ಶನ, ಮಾರಾಟ ಇರಲಿದೆ ಎಂದು ಅವರು ಹೇಳಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಮೋದ್ ಸಿ.ಎಂ., ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ. ಜಗನ್ನಾಥ ಗಾಂಭೀರ್, ರಾಮ ಮುಗ್ರೋಡಿ, ಜಿ.ಕೆ. ಭಟ್, ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಫಲಪುಷ್ಪ ಪ್ರದರ್ಶನದಲ್ಲಿ ವಯಸ್ಕರಿಗೆ 30 ರೂ., ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲಾ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿ ಆಗಮಿಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಉಚಿತ ಪ್ರವೇಶವಿದೆ. ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ವೀಕ್ಷಿಸಲು ಅವಕಾಶವಿದೆ. ತೋಟಗಾರಿಕಾ ಇಲಾಖೆ ವತಿ ಯಿಂದ ವಿವಿಧ ಜಾತಿಯ ಒಂದೂವರೆ ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಒಂದು ಗಿಡಕ್ಕೆ ಒಂದು ರೂ.ನಂತೆ ಮಾರಾಟ ಮಾಡಲಾಗುವುದು. ಟೊಮೊಟೊ, ಬದನೆ, ಬೆಂಡೆ, ಅಲಸಂಡೆ ಗಿಡಗಳು ಮಾರಾಟಕ್ಕೆ ಲಭ್ಯವಿವೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡಿ. ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments