ಜ.25-26ರಂದು ಬೊಂದೇಲ್ ಫಿಯೆಸ್ಟಾ
ಮಂಗಳೂರು : ನಗರದ ಬೊಂದೆಲ್ ಚರ್ಚ್ ವಠಾರದಲ್ಲಿ ಜ.25 ಮತ್ತು 26ರಂದು ಬೊಂದೆಲ್ ಫಿಯೆಸ್ಟಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ವಿವಿಧ ಖಾದ್ಯಗಳ ಮಳಿಗೆಗಳು, ಆಟದ ಮಳಿಗೆಗಳು, ಪ್ರಮೋಶನಲ್ ಮಳಿಗೆಗಳು, ಚಾರಿಟಿ ಸೇಲ್ ಮಳಿಗೆ, ಸ್ಪಾಟ್ ಗೇಮ್ಸ್, ಲಕ್ಕಿ ಡ್ರಾ, ನೃತ್ಯ, ಹಾಡುಗಳು ಸೇರಿದಂತೆ ಮೋಜಿನ ಸ್ಪರ್ಧೆಗಳು ಎರಡು ದಿನಗಳ ಕಾಲ ನಡೆಯಲಿದೆ. ಸುಮಾರು 40ರಷ್ಟು ಆಹಾರ ಹಾಗೂ ಆಟದ ಮಳಿಗೆಗಳಿರುತ್ತವೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ಗುವಾಹಟಿಯ ನಿವಾಸಿ ಖ್ಯಾತ ಕಲಾವಿದ ನಿರುಪಮ್ ಕೋನ್ವಾರ್ ಮತ್ತು ಲೈವ್ ಸ್ಕೆಚ್ಚಿಂಗ್ ಮತ್ತು ಪೈಂಟಿಂಗ್ ಮಾಡಲಿದ್ದಾರೆ ಮತ್ತು ಅದನ್ನು ಕಾರ್ಯಕ್ರಮದಲ್ಲಿ ಹರಾಜು ಹಾಕಲಾಗುವುದು ಎಂದು ಅವರು ಹೇಳಿದರು.
ಜ.20ರಂದು ಸಂಜೆ 6 ಗಂಟೆಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನಾರವರು ವಿನ್ಸೆಂಟ್ ಫೆರ್ನಾಂಡಿಸ್ ಕಾಸ್ಸಿಯಾರವರ ‘ಮೊಗಾಚಿ ಲಾರಾಂ’ ಧ್ವನಿ ಸುರುಳಿ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ. ಕ್ಲಿಫರ್ಡ್ ಪಿಂಟೋ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಸ್ಟೀವನ್ ನೊರೊನ್ಹ, ಉಪಾಧ್ಯಕ್ಷ ರೆಜಿನಾಲ್ಡ್ ಡಿಸೋಜ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮನೋಜ್ ಲೂಯಿಸ್ ಉಪಸ್ಥಿತರಿದ್ದರು.