ಜ.8: ಉಡುಪಿ ನಗರದ ನಿವೇಶನ ರಹಿತರಿಗೆ ಫ್ಲ್ಯಾಟ್ ಮಾದರಿಯ ಮನೆಗಳ ಶಂಕುಸ್ಥಾಪನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ಸಮುಚ್ಛಯ ನಿರ್ಮಿಸಲು ಶಂಕುಸ್ಥಾಪನೆ ಜನವರಿ 8ರಂದು ಬುಧವಾರ ಶಂಕುಸ್ಥಾಪನೆ ನಡೆಯಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಅವರು ಶನಿವಾರ ಪುರಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಸರ್ವೆ ನಂಬ್ರ 350/2ಎ1ರಲ್ಲಿ 6.97 ಎಕ್ರೆ ಮತ್ತು ಸ. ನಂಬ್ರ 319/1ಬಿ ರಲ್ಲಿ 1.25 ಎಕ್ರೆ ಒಟ್ಟು 8.22 ಎಕ್ರೆ ಜಮೀನನ್ನು ರಹಿತರಿಗೆ ನೀವೆಶನ ಹಂಚಿಕೆ ಮಾಡಲು ಕಾಯ್ದಿರಿಸಲಾಗಿದ್ದು. ಇದರಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ 460 ನಿವೇಶನ ರಹಿತರಿಗೆ ಜಿ+3 ಮಾದರಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಈಗಾಗಲೇ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿರುತ್ತದೆ.
ಪ್ರತಿ ಮನೆಗೆ ರೂ 7,42,994 ಘಟಕ ವೆಚ್ಚ ತಗಲಲಿದ್ದು, ಕೆಂದ್ರ ಸರಕಾರದ 1.50 ಲಕ್ಷ ಹಾಗೂ ರಾಜ್ಯ ಸರಕಾರದ 2 ಲಕ್ಷ ಅನುದಾನದೊಂದಿಗೆ ಪರಿಶಿಷ್ಟ ಜಾತಿ/ಪಂಗಡದ ಫಲನುಭಾವಿಯಿಂದ ರೂ60,000 ಹಾಗೂ ಇತರ ಫಲಾನುಭವಿಗಳಿಂದ ರೂ 90,000 ವಂತಿಗೆ ನೀಡಬೇಕಾಗಿದ್ದು, ನಗರಸಭೆ ಅನುದಾನ ರೂ74,299 ನೀಡಲಿದ್ದು ಬ್ಯಾಂಕ್ ಸಾಲ ಪರಿಶಿಷ್ಟ ಜಾತಿ/ಪಂಗಡದವರಿಗೆ ರೂ 258695 ಮತ್ತು ಇತರ ಫಲಾನುಭವಿಗಳಿಗೆ ರೂ 3,08,695 ಬ್ಯಾಂಕ್ ಸಾಲವನ್ನು ಒದಗಿಸಲಾಗುತ್ತದೆ ಎಂದರು.
ಮೊದಲ ಹಂತದಲ್ಲಿ 460 ನಿವೇಶನ .ನಂಬ್ರ ನೆಲ +3 ಮಾದರಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿದ್ದು ಸದರಿ ಜಮೀನಿನಲ್ಲಿ ಎಕ್ರೆ ಮಾತ್ರ ಬೇಕಾಗಿದ್ದು ಉಳಿದ ಜಮೀನಿನಲ್ಲಿ ಎರಡನೇ ಹಂತದಲ್ಲಿ ನೆಲ + 3 ಮಾದರಿಯ 264 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಹಾಗೂ 3 ನೇ ಹಂತದಲ್ಲಿ ಹೆರ್ಗಾ ಗ್ರಾಮದ ಸ.ನಂಬ್ರ 191/1ಎಪಿ1ರಲ್ಲಿ 1.12 ಎಕ್ರೆ ಮತ್ತು ಪುತ್ತೂರು ಗ್ರಾಮದ ಸ ನಂಬ್ರ 242/1ರಲ್ಲಿ 0.63 ಎಕ್ರೆ ಜಮೀನಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿದ್ದು ಒಟ್ಟು ಸುಮಾರು 1000 ಮನೆಗಳ ಗುರಿಯನ್ನು ಕ ಎಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಿರುವ ಮನೆಗಳ ಶಂಕುಸ್ಥಾಪನೆಯನ್ನು ರಾಜ್ಯದ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ವಿ ಸೋಮಣ್ಣ ನೆರವೇರಿಸಲಿದ್ದು, ರಾಜ್ಯದ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವರಾದ ಆರ್ ಅಶೋಕ್, ಬಂದರು ಮತ್ತುಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ, ಜಿಪಂ ಅಧ್ಯಕ್ಷರಾದ ದಿನಕರ ಬಾಬು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.