ಟಿಪ್ಪರ್ – ದ್ವಿಚಕ್ರ ವಾಹನ ಡಿಕ್ಕಿ – ಬ್ಯೂಟಿಷಿಯನ್ ಸಾವು

Spread the love

ಟಿಪ್ಪರ್ – ದ್ವಿಚಕ್ರ ವಾಹನ ಡಿಕ್ಕಿ – ಬ್ಯೂಟಿಷಿಯನ್ ಸಾವು

ಮಂಗಳೂರು: ನವೆಂಬರ್ 27 ರಂದು ಇಲ್ಲಿನ ಬಿಎಂಎಸ್ ಹೋಟೆಲ್ ಬಳಿ ಕುಂಟಿಕನ್ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ 42 ವರ್ಷದ ಬ್ಯೂಟಿಷಿಯನ್ ಮೃತಪಟ್ಟಿದ್ದಾರೆ.

ಮೃತರನ್ನು ಕಾವೂರ್ ಮೂಲದ ಪ್ರಿಯಾ ಸುವರ್ಣ (42) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ನವೆಂಬರ್ 27 ರಂದು ಪ್ರಿಯಾ ತನ್ನ ದ್ವಿಚಕ್ರ ವಾಹನದಲ್ಲಿ ಮಂಗಳೂರಿನಿಂದ ಮನೆಗೆ ತೆರಳುತ್ತಿದ್ದು ಬಿಎಂಎಸ್ ಹೋಟೆಲ್ ಬಳಿಯ ಕುಂಟಿಕನ್ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಒಂದು ಅವರ ದ್ವಿಚಕ್ರ ವಾಹನವನ್ನು ಹೊಡೆದಿದೆ. ಘಟನೆಯಿಂದ ಪ್ರಿಯಾ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡರು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದಾಗಿ ಪ್ರಿಯಾ ಕೊನೆಯುಸಿರೆಳೆದರು.

ಟಿಪ್ಪರ್ ಚಾಲಕ ಕುಡಿದು ವಾಹನ ಚಲಾಯಿಸಿದ್ದು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಎಲ್ಎನ್ ಪ್ರಿಯಾ ಸುವರ್ಣ ಮಂಗಳೂರಿನ ಕಾವೇರಿ ಲಯನ್ಸ್ ಕ್ಲಬ್ನ ಸಕ್ರಿಯ ಸದಸ್ಯರಾಗಿದ್ದರು; ಮಂಗಳೂರು ಲೇಡೀಸ್ ಬ್ಯೂಟಿ (ಪಾರ್ಲರ್) ಸಂಘದ ಖಜಾಂಚಿಯೂ ಆಗಿದ್ದರು ಮತ್ತು ಮಂಗಳೂರಿನ ಕಾವೂರ್ನ ಪ್ರಿಷ್ಮಾ ಬ್ಯೂಟಿ ಪಾರ್ಲರ್ನ ಮಾಲೀಕರಾಗಿದ್ದರು.


Spread the love