ಟಿಪ್ಪು ಜಯಂತಿ ಕೈಬಿಡುವಂತೆ ಮಂಗಳೂರು ಹಾಗೂ ಪುತ್ತೂರಿನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ

Spread the love

ಟಿಪ್ಪು ಜಯಂತಿ ಕೈಬಿಡುವಂತೆ ಮಂಗಳೂರು ಹಾಗೂ ಪುತ್ತೂರಿನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ

ಮಂಗಳೂರು: ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.  ಪ್ರತಿಭಟನೆಯ ನಂತರ ಕರ್ನಾಟಕದ ರಾಜ್ಯಪಾಲರಿಗೆ  ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ಶ್ರೀ ವಿಜಯ್ ಕುಮಾರ್, ಹಿಂದೂ ಮಹಾಸಭಾದ ಶ್ರೀ ಧರ್ಮೇಂದ್ರ, ಹಿಂದೂ ಯುವಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀ ವೀರಪ್ಪ ಮೂಡುಶೆಡ್ಡೆ ಮಾತನಾಡಿದರು.

ವಿಜಯ್ ಕುಮಾರ್ ಉಡುಪಿ ಜಿಲ್ಲಾ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಮಾತನಾಡಿದ ಹಿಂದೂಗಳ ಹತ್ಯೆ ಮತ್ತು ಮತ್ತು ಮತಾಂತರಿಸುವ ಕ್ರೂರ ಟಿಪ್ಪು ಸುಲ್ತಾನದ ಜಯಂತಿಯನ್ನು ಆಚರಿಸುವುದು, ಹಿಂದೂಗಳ ಗಾಯದ ಮೇಲೆ ಬರೆ ಎಳೆದಂತೆಯೇ ಸರಿ. ಹಿಂದೂಗಳ ಹತ್ಯೆ ಮತ್ತು ಮತ್ತು ಮತಾಂತರಿಸುವ ಕ್ರೂರ ಟಿಪ್ಪು ಸುಲ್ತಾನದ ಜಯಂತಿಯನ್ನು ಆಚರಿಸುವುದು, ಇದು ಹಿಂದೂಗಳ ಗಾಯದ ಮೇಲೆ ಉಪ್ಪು ಸವರಿದಂತೆ.

ಟಿಪ್ಪುವಿಗೆ ಅಧಿಕಾರ ಸಿಕ್ಕಿದ ಕೂಡಲೇ ರಾಜ್ಯದ ಅನೇಕ ಊರುಗಳ ಹಿಂದೂ ಹೆಸರುಗಳನ್ನು ಅಳಿಸಿ, ಇಸ್ಲಾಮಿ ಹೆಸರನ್ನು ಬಲವಂತವಾಗಿ ಮರುನಾಮಕರಣ ಮಾಡಿದನು. ಮೈಸೂರನ್ನು ಇಸ್ಲಾಮೀ ರಾಜ್ಯವೆಂದು ಘೋಷಿಸಿ, ನಾವು ಇಸ್ಲಾಮಿ ಸುಲ್ತಾನರು ಎಂದು ಹೇಳಿದನು. ಅಷ್ಟೇ ಅಲ್ಲದೇ ತನ್ನ ರಾಜ್ಯದಲ್ಲಿನ ಎಲ್ಲಾ ಕಾಫೀರರನ್ನು(ಮುಸಲ್ಮಾನರನ್ನು ಬಿಟ್ಟು ಉಳಿದ ಸಮುದಾಯ ಅಂದರೆ ಹಿಂದೂ) ಮತಾಂತರಿಸಿ ಮುಸಲ್ಮಾನನಾಗಿಸುವೆ ಎಂಬ ಪ್ರತಿಜ್ಞೆಯನ್ನು ತೆಗೆದುಕೊಂಡನು ಮತ್ತು ತಮ್ಮ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ತನ್ನ ರಾಜ್ಯದಲ್ಲಿನ ಎಲ್ಲಾ ಹಿಂದೂಗಳನ್ನು ಮುಸಲ್ಮಾನವನ್ನಾಗಲು ಆದೇಶವನ್ನು ಕೊಟ್ಟನು.

ಟಿಪ್ಪು ಹಿಂದೂವಿರೋಧಿ, ಯಾಕೆಂದರೆ ಸುಮಾರು 27 ಸಾವಿರಕ್ಕಿಂತಲೂ ಹೆಚ್ಚು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ದೇವಾಲಯದ ವಿಗ್ರಹಗಳನ್ನು ಮಸೀದಿಗಳ ಮೆಟ್ಟಿಲುಗಳನ್ನಾಗಿಸಿದ ವಿಧ್ವಂಸಕ. ಕರ್ನಾಟಕದಲ್ಲಿ ಕನ್ನಡದ ಬದಲಾಗಿ ಪರ್ಷಿಯನ್ ಭಾಷೆಯನ್ನು ಹೇರಿಸಲು ಪ್ರಯತ್ನ ಮಾಡಿದನು. ಯಾವುದೇ ಅರ್ಥ ಇಲ್ಲದೇ ಸರಕಾರವು ಅವನ ಜಯಂತಿಯನ್ನು ಆಚರಿಸಲು ಹೊರಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಮಾಡಿದ ಅನ್ಯಾಯವೇ ಆಗಿದೆ.

ಮುಸಲ್ಮಾನರ ಆಚರಣೆಯಲ್ಲಿ ಯಾವುದೇ ವ್ಯಕ್ತಿಯ ಜಯಂತಿ ಆಚರಿಸಲು ನಿರ್ಬಂಧ ಇರುವಾಗ ಸರಕಾರ ಮುಸಲ್ಮಾನರ ಒಪ್ಪಿಗೆ ಇಲ್ಲದೇ ಟಿಪ್ಪು ಜಯತಿ ಆಚರಿಸಲು ಹೊರಟಿರುವುದು ರಾಜಕೀಯ ಲಾಭ ಪಡೆದು ರಾಜ್ಯದಲ್ಲಿ ಅರಾಜಕತೆಯನ್ನು ನಿರ್ಮಾಣ ಮಾಡುವುದಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಕ್ಷಣವೇ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಬೇಕು.

ಸನಾತನ ಸಂಸ್ಥೆಯ ವಕ್ತಾರರಾದ ಸೌ ಸಂಗೀತಾ ಪ್ರಭು ಮಾತನಾಡಿ, ಲಕ್ಷಾಂತರ ಹಿಂದೂಸ್ತ್ರೀಯರನ್ನು ಅತ್ಯಾಚಾರ ಮಾಡಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಟಿಪ್ಪು ಕ್ರೂರಿ ರಾಜನಾಗಿದ್ದನು ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ, ಶ್ರೀ ಪ್ರಭಾಕರ್ ನಾಯ್ಕ್, ಲೋಕೇಶ್ ಕುತ್ತಾರ್, ರಣರಾಗಿಣಿಯ ಸೌ.ಲಕ್ಷ್ಮೀ ಪೈ, ಸನಾತನ ಸಂಸ್ಥೆಯ ಸೌ ಸಂಗೀತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು  : ಟಿಪ್ಪು ಜಯಂತಿ ಆಚರಿಸದಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸ್ಥಳೀಯ ಸಮಸ್ತ ಹಿಂದುತ್ವವಾದಿ ಸಂಘಟನೆಗಳ ವತಿಯಿಂದ ಪುತ್ತೂರಿನ ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಬೆಳಿಗ್ಗೆ ಶಂಖನಾದದೊಂದಿಗೆ ಪ್ರತಿಭಟನೆ ಆರಂಭವಾಯಿತು.  ಶಂಖನಾದವನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ದಯಾನಂದ ಹೆಗ್ಡೆ ಮಾಡಿದರು. ಪ್ರತಿಭಟನೆಯ ನಂತರ ಕರ್ನಾಟಕದ ರಾಜ್ಯಪಾಲರಿಗೆ ಸಹಾಯಕ ಕಮಿಷನರ್ ಮೂಲಕ ಮನವಿ ನೀಡಲಾಯಿತು.  ಪ್ರತಿಭಟನೆಯನ್ನು ಉದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶ್ರೀ ಜನಾರ್ದನ ಗೌಡ, ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ, ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿದರು.

ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿ ಸಮಸ್ತ ಕರ್ನಾಟಕಕ್ಕೆ ಮೋಸಮಾಡುತ್ತಿರುವ ಮಾನ್ಯ ಕರ್ನಾಟಕ ಸರಕಾರದ ನಿಜಮುಖ ಬಯಲಾದಂತಾಗಿದೆ. ಮಾನ್ಯ ಸಿದ್ಧರಾಮಯ್ಯನವರ ನೇತೃತ್ವದ ಸರಕಾರದ ಮುಕ್ತಾಯದ ಸಮಯ ಸಮೀಪಿಸುತ್ತಿದೆ. ಟಿಪ್ಪು ಜಯಂತಿ ಇದು ಕರ್ನಾಟಕ ಸರಕಾರದ ಆಡಳಿತಾವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಕಪ್ಪು ಚುಕ್ಕೆಯ ಕೊಡುಗೆಯಾಗಿದೆ.  `ಟಿಪ್ಪೂ ಸುಲ್ತಾನನು ಆ ಕಾಲದಲ್ಲಿ ಸಮೀಪದ ಸುಳ್ಯದ ಪೆರಾಜೆ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದ, ದ.ಕ ಜಿಲ್ಲೆ & ಕೊಡಗಿನಿಂದ ಮಲಬಾರಿನವರೆಗೂ ಹಿಂದೂ ದೇವಾಲಯಗಳನ್ನು ನಾಶಮಾಡಿದ, 70 ಸಾವಿರಕ್ಕಿಂತಲೂ ಹೆಚ್ಚು ಕ್ರೈಸ್ತರನ್ನು ಮತಾಂತರ ಮಾಡಿದ ಕ್ರೂರಿ ಮತಾಂಧ ಟಿಪ್ಪುಸುಲ್ತಾನನು  ದಕ್ಷಿಣ ಭಾರತದ 8 ಸಾವಿರಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಿದ್ದನು ಎಂದು ಉಲ್ಲೇಖವಿದೆ. ಈ ರೀತಿ ಟಿಪ್ಪುವಿನ ಮತಾಂಧತೆ, ಅಸುಹಿಷ್ಣುತೆಯಿಂದಾಗಿ  ಲಕ್ಷಾಂತರ ಜನರ ಹತ್ಯೆ, ಲಕ್ಷಾಂತರ ಜನರು ಇಸ್ಲಾಂಗೆ ಮತಾಂತರ ಮತ್ತು ಸಾವಿರಾರು ದೇವಸ್ಥಾನಗಳು ಮಸೀದಿಗಳಾಗಿ ರೂಪಾಂತರ, ಮೂರ್ತಿಗಳ ಧ್ವಂಸ, ಗೋಹತ್ಯೆ ಈ ರೀತಿ ಆತನ ರಕ್ತಸಿಕ್ತ ಆಡಳಿತವಾಗಿತ್ತು, ಹಿಂದೂ ಧರ್ಮದಲ್ಲಿನ ವೇದೋಪನಿಷತ್ತುಗಳು ಸಾರುವುದು ಇಡೀ ಜಗತ್ತಿಗೇ ಒಳ್ಳೆಯದಾಗಲಿ, ಶಾಂತಿ ನೆಮ್ಮದಿ ನೆಲೆಸಲಿ ಎಂಬ ಸಾರಾಂಶವನ್ನು ಸಾರುತ್ತದೆ, ಎಂದರು.

ರಾಜ್ಯದ ಮಾನ್ಯ ಸಿಧ್ಧರಾಮಯ್ಯನವರ ಸರಕಾರ ಮುಸಲ್ಮಾನರ ಓಲೈಕೆಗಾಗಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲು ಹೊರಟಿದೆ.  ಯಾವುದೋ ಪಿ.ಎಫ್.ಐ ಸಂಘಟನೆಯು ಇಂದು ರಾಜ್ಯದಲ್ಲಿ ಕೋಲಾಹಲವೆಬ್ಬಿಸಲು ಪ್ರಯತ್ನವನ್ನು ಮಾಡುತ್ತಿದೆ. ನಾವು ಇಂದಿನ ಈ ಪ್ರತಿಭಟನೆಯ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಲು ಬಯಸುತ್ತೇವೆ. ಕಳೆದ 4 ವರ್ಷಗಳಿಂದ ಮತಾಂಧರ ಪರ ನಿಂತು ಹಿಂದೂ ಧರ್ಮದ ಮೇಲೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಟಿಪ್ಪು ಜಯಂತಿ ಸಂದರ್ಭದಲ್ಲಿ ಹಿಂದುತ್ವವಾದಿಗಳ ಹತ್ಯೆಯನ್ನು ಮಾಡಿ ಸರಕಾರ ರಾಜ್ಯದಲ್ಲಿ ಅರಾಜಕತೆ ನಿರ್ಮಾಣ ಮಾಡಿ ರಾಜಕೀಯ ಲಾಭವನ್ನು ಪಡೆಯುತ್ತಿದೆ. ಹಿಂದೂಗಳ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡಿದ ಈ ಕ್ರೂರಿ ಟಿಪ್ಪು ಸುಲ್ತಾನನ ಜಯಂತಿಯನ್ನು ತಕ್ಷಣವೇ ಸರಕಾರ ಪತನವಾಗುವ ಮೊದಲೇ ಎಚ್ಚೆತ್ತು ರದ್ದುಪಡಿಸಬೇಕಾಗಿ ಆಗ್ರಹಿಸುತ್ತೇವೆ.

ಪ್ರತಿಭಟನೆಯ ಸಮಯದಲ್ಲಿ “ಟಿಪ್ಪು ಕ್ರೂರಕರ್ಮಿ ಆಗಿದ್ದನು, ಸುಲ್ತಾನ ಅಲ್ಲ ಕ್ರೂರಿ ಆಗಿದ್ದನು”, “ಇತಿಹಾಸದ ವಿಕೃತಿಕರಣವನ್ನು ತಡೆಯಲು, ಟಿಪ್ಪುಜಯಂತಿ ಆಚರಣೆ ಕೈಬಿಡಿ ಎಂಬ ಘೋಷಣೆಯನ್ನು ಕೊಡಲಾಯಿತು.


Spread the love
1 Comment
Inline Feedbacks
View all comments
jayaram
7 years ago

tippu jayanthi siddaramayya acharisali yarella beda annuvavaru rajadina acharisali