Home Mangalorean News Kannada News ಟಿಪ್ಪು ಜಯಂತಿ ಕೈ ಬಿಡಲು – ಸಂಸದ ನಳಿನ್‍ಕುಮಾರ್ ಆಗ್ರಹ

ಟಿಪ್ಪು ಜಯಂತಿ ಕೈ ಬಿಡಲು – ಸಂಸದ ನಳಿನ್‍ಕುಮಾರ್ ಆಗ್ರಹ

Spread the love

ಟಿಪ್ಪು ಜಯಂತಿ ಕೈ ಬಿಡಲು – ಸಂಸದ ನಳಿನ್‍ಕುಮಾರ್ ಆಗ್ರಹ

ಮಂಗಳೂರು : ರಾಜ್ಯದ ಜನತೆಯ ಪ್ರಬಲ ವಿರೋಧವಿದ್ದರೂ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸುವ ಮೂಲಕ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿದೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಿಸಿದ ಪರಿಣಾಮ ಪ್ರಾಣಹಾನಿ ಸಹಿತ ರಾಜ್ಯದ ವಿವಿಧೆಡೆ ಹಿಂಸಾಚಾರ ನಡೆದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇನ್ನಾದರೂ ವಿವೇಚನೆಯಿಂದ ವರ್ತಿಸಿ ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡಬೇಕೆಂದು ದ.ಕ.ಸಂಸದ ನಳಿನ್‍ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಮಾಯಕರ ಕೊಲೆ , ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಕಾಂಗ್ರೆಸ್ ನಾಯಕರ ತುಷ್ಟೀಕರಣ ನೀತಿಯಿಂದಾಗಿ ಜಿಲ್ಲೆಯಲ್ಲಿ ಸಮಾಜ ಘಾತಕ ಕೃತ್ಯ ನಡೆಸುವವರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಇದೀಗ ಟಿಪ್ಪು ಜಯಂತಿ ಆಚರಣೆ ಕರಾವಳಿ ಜನತೆಯ ಆತಂಕಕ್ಕೆ ಕಾರಣವಾಗಿದೆ. ಟಿಪ್ಪು ಜಯಂತಿ ಸಂದರ್ಭ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version