ಡಾ. ಆರತಿ ಕೃಷ್ಣ – ಕೊಲ್ಲಿ ರಾಷ್ಟ್ರಗಳ ಪ್ರವಾಸ
ಮಂಗಳೂರು : ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಡಿಸೆಂಬರ್ 17 ರಂದು ಕತಾರ್ ನ ರಾಜಧಾನಿಯಾದ ದೋಹದಲ್ಲಿನ ಭಾರತೀಯ ಸಾಂಸ್ಕøತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಕರ್ನಾಟಕ ಮೂಲದ ಸಂಘಗಳಾದ ಕನಾಟಕ ಸಂಘ, ತುಳು ಕೂಟ, ಬಂಟ್ಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್, ಕರ್ನಾಟಕ ಮುಸ್ಲಿಂ ಸಾಂಸ್ಕøತಿಕ ಸಂಘ ಮತ್ತು ಸೌತ್ ಕೆನರಾ ಮುಸ್ಲಿಂ ಕಲ್ಯಾಣಾಭಿವೃಧಿ ಸಂಘ ಜಂಟಿಯಾಗಿ ಆಯೋಜಿಸಿದ್ಧ ಕನ್ನಡ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿ ಜಾರಿಗೆ ತಂದಿರುವ ಅನಿವಾಸಿ ಭಾರತೀಯ/ಕನ್ನಡಿಗರ ನೀತಿಯ ಕುರಿತು ಡಾ. ಆರತಿ ಕೃಷ್ಣ ರವರು ಸವಿವರವಾದ ಮಾಹಿತಿಯನ್ನು ನೆರೆದಂತಹ ಅಪಾರ ಸಂಖ್ಯೆಯ ಅನಿವಾಸಿ ಕನ್ನಡಿಗರಿಗೆ ನೀಡಿದರು. ಅನಿವಾಸಿ ಭಾರತೀಯರ ವಿವಿಧ ಬಹುತೇಕ ಬೇಡಿಕೆಗಳಿಗೆ ಅನಿವಾಸಿ ಭಾರತೀಯ ನೀತಿಯಡಿಯಲ್ಲಿ ಪರಿಹಾರ ಮಾರ್ಗೋಪಾಯಗಳಿದ್ದು, ಇನ್ನು ಕೆಲವು ಬೇಡಿಕೆಗಳಿಗೆ ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆಗೆ ಪತ್ರ ವ್ಯವಹಾರವನ್ನು ನಡೆಸಿ ಶೀಘ್ರ ಗತಿಯಲ್ಲಿ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ವತಿಯಿಂದ ಈಡೇರಿಸಲು ಬದ್ಧರಾಗಿ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕತಾರಿನ ಭಾರತೀಯ ರಾಯಭಾರಿಗಳಾದ ಪಿ. ಕುಮಾರನ್, ಮುಖ್ಯ ಅತಿಥಿಗಳಾಗಿ ಮತ್ತು ಭಾರತೀಯ ಸಾಂಸ್ಕøತಿಕ ಕೇಂದ್ರದ ಮಿಲನ್ ಅರುಣ್, ಕೆ.ಎಂ.ಸಿ. ಪ್ರಧಾನ ಕಾರ್ಯದರ್ಶಿ ಶಾಕಿಬ್ ರಾಜ ಖಾನ್, ಎಂ.ಸಿ.ಸಿ. ಅಧ್ಯಕ್ಷ, ಪ್ರಕಶ್ ನಾರೊಹ್ನ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ, ಹೆಚ್. ಕೆ.ಮಧು ಉಪಸ್ಥಿತರಿದ್ದರು.