ಡಿಕೆಶಿ ಪದಗ್ರಹಣ; ಉಡುಪಿ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು ಗಳ ಸಭೆ

Spread the love

ಡಿಕೆಶಿ ಪದಗ್ರಹಣ; ಉಡುಪಿ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು ಗಳ ಸಭೆ

ಉಡುಪಿ: ಕೆ.ಪಿ.ಸಿ.ಸಿ. ಅಧ್ಯಕ್ಷರ ಪ್ರದಗ್ರಹಣ ಸಮಾರಂಭವು ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಜರಗಿದರೂ ಕೋವಿಡ್ 19 ಪ್ರಯುಕ್ತ ಪಕ್ಷದ ಎಲ್ಲಾ ಕಾರ್ಯಕರ್ತರ ಭಾಗವಹಿಸುವಿಕೆ ಅಸಾಧ್ಯ. ಈ ಹಿನ್ನಲೆಯಲ್ಲಿ ರಾಜ್ಯದ ಬ್ಲಾಕ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯ 8000 ಕೇಂದ್ರಗಳಲ್ಲಿ ಝೂಮ್ ಆ್ಯಪ್ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಕಾರ್ಯಕರ್ತರು ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವಿಕೆಗೆ ಕೆಪಿಸಿಸಿ ಎಲ್ಲಾ ಪೂರ್ವ ತಯಾರಿ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಡಿ.ಕೆ. ಶಿವಕುಮಾರ್ರವರು ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಜಿಲ್ಲೆಯ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ರವರು ಮಾತನಾಡುತ್ತಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆಶಿಯವರು 3 ತಿಂಗಳ ಹಿಂದೆ ನಾಮಕರಣಗೊಂಡಿದ್ದರೂ ಕೋವಿಡ್-19 ಪ್ರಯುಕ್ತ ಪಕ್ಷದ ಎಲ್ಲಾ ಕಾರ್ಯಕರ್ತರ ಸಮ್ಮುಖ ಪದಗ್ರಹಣ ಸಮಾರಂಭ ನೆರವೇರಿಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಎಲ್ಲಾ ಕಾರ್ಯಕರ್ತರು ಅವರವರ ಸ್ಥಳಗಳಲ್ಲಿಯೇ ಪಾಲ್ಗೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲಾಗಿದೆ. ಡಿಕೆಶಿಯವರ ಆಗಮನದೊಂದಿಗೆ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ಕಾಣುತ್ತಿದ್ದೇವೆ ಹಾಗೂ ನೂತನ ಅಧ್ಯಕ್ಷರು ಪಕ್ಷವನ್ನು ಕೇಡರ್ ಬೇಸ್ ಆಗಿ ಸಂಘಟಿಸುವ ಆಶಾವಾದ ವ್ಯಕ್ತಪಡಿಸಲಿರುವುದು ಪಕ್ಷದ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದರು.

ಕಡಬ, ಮಂಗಳೂರು ಹಾಗೂ ಬೆಳ್ತಂಗಡಿಗಳಿಗೆ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಮುರಳಿ ಶೆಟ್ಟಿ, ದಿನೇಶ್ ಪುತ್ರನ್ ಹಾಗೂ ಹರೀಶ್ ಕಿಣಿಯವರು ತಮ್ಮ ಉಸ್ತುವಾರಿ ಕ್ಷೇತ್ರಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ರೂಪುರೇಷೆಗಳನ್ನು ಹಂಚಿಕೊಂಡರು.

ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ್ ರಾವ್ ಕಿದಿಯೂರು, ಹಬೀಬ್ ಅಲಿ, ಉದ್ಯಾವರ ನಾಗೇಶ್ ಕುಮಾರ್, ವಿವಿಧ ಘಟಕಗಳ ಅಧ್ಯಕ್ಷರುಗಳಾದ ರೋಶನಿ ಒಲಿವರ್, ಶಶಿಧರ ಶೆಟ್ಟಿ ಎಲ್ಲೂರು, ಸುರೇಶ್ ನಾಯ್ಕ್, ಗೋಪಿ ಕೆ. ನಾಯ್ಕ್, ಇಸ್ಮಾಯಿಲ್ ಆತ್ರಾಡಿ, ಯತೀಶ್ ಕರ್ಕೇರಾ, ಹರೀಶ್ ಶೆಟ್ಟಿ ಕೀಳಿಂಜೆ, ಉಪೆಂದ್ರ ಗಾಣಿಗ, ವಿಘ್ನೇಶ್ ಕಿಣಿ, ಸಂಜಯ್ ಆಚಾರ್ಯ, ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಹರೀಶ್ ಕಿಣಿ ಧನ್ಯವಾದವಿತ್ತರು.


Spread the love