ಡಿಜಿಟಲ್ ಇಂಡಿಯಾ ಅಭಿಯಾನದ ವಾಹನಕ್ಕೆ ಪ್ರಿಯಾಂಕ ಮೇರಿ ಚಾಲನೆ
ಮಣಿಪಾಲ: ಉಡುಪಿ ಜಿಲ್ಲೆಯಾದ್ಯಂತ 45 ದಿನಗಳ ಕಾಲ ಸಂಚರಿಸಲಿರುವ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಾಹನಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಅಭಿಯಾನದ ಉಡುಪಿ ಜಿಲ್ಲಾ ಉಸ್ತುವಾರಿ ಪ್ರಮೋದ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಇಂತಹ ಮೂರು ವಾಹನಗಳು ಸಂಚರಿಸುತ್ತಿದ್ದು ಗ್ರಾಪಂ, ಶಾಲಾ ಕಾಲೇಜುಗಳಲ್ಲಿ ತೆರಳಿ ಡಿಜಿಟಲ್ ತಂತ್ರಜ್ಞಾನದಲ್ಲಿ ಸಿಗುವ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಗಳನ್ನು ನೀಡಲಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.