ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರಕ್ಕೆ ಎಂಪಿಎಲ್ ಟ್ರೋಪಿ, ಫ್ರೆಂಡ್ಸ್ ಮಟಪಾಡಿ ರನ್ನರ್ಸ್
ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಬ್ರಹ್ಮಾವರ ಆಶ್ರಯದಲ್ಲಿ ನಡೆದ ದಿ. ಪ್ರಭಾಕರ ಆಚಾರ್ಯ ಸ್ಮರಣಾರ್ಥ ನಡೆದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಮಟಪಾಡಿ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಡಿಸೆಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ತನ್ನದಾಗಿಸಿಕೊಂಡಿತು. ಫ್ರೆಂಡ್ಸ್ ಮಟಪಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.
ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಧಾಕರ ಶೆಟ್ಟಿ ಉದ್ಘಾಟಿಸಿದರು.
ಪಂದ್ಯಾಟದಲ್ಲಿ ಆಹ್ವಾನಿತ 10 ತಂಡಗಳು ಭಾಗವಹಿಸಿದ್ದು, ಸರಣಿ ಶ್ರೇಷ್ಠ ರಾಘವೇಂದ್ರ ಪೂಜಾರಿ, ಪಂದ್ಯ ಶ್ರೇಷ್ಠ ರಾಗಿ ಶ್ರೀಕಾಂತ್, ಉತ್ತಮ ದಾಂಡಿಗನಾಗಿ ಪ್ರದೀಪ್ ಶೆಟ್ಟಿ, ಉತ್ತಮ ಎಸೆತಗಾರಾಗಿ ಅಜಿತ್, ಉತ್ತಮ ಕ್ಷೇತ್ರ ರಕ್ಷಕರಾಗಿ ಸುದರ್ಶನ್, ಉತ್ತಮ ಗೂಟರಕ್ಷಕರಾಗಿ ಅಂಕುಶ್ ಪ್ರಶಸ್ತಿಯನ್ನು ಪಡೆದರು. ಸೆಮಿಫೈನಲ್ ಪ್ರವೇಶಿಸಿದ ಸಿಎಫ್ ಸಿ ಚಾಂತಾರು ಮತ್ತು ಕುಂಜಾಲು ಸ್ಟ್ರೈಕರ್ಸ್ ತಂಡಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾದ ಅರುಣ್ ನಾಯಕ್, ರಾಜ್ಯ ಮಟ್ಟದ ಕ್ರಿಕೆಟ್ ವೀಕ್ಷಕ ವಿವರಣೆಗಾರರಾದ ರಾಘವೇಂದ್ರ ಆಚಾರ್ಯ ಮತ್ತು ಕಾರ್ಯಕ್ರಮ ನಿರೂಪಕ, ಪತ್ರಕರ್ತ ಚೇತನ್ ಜಿ ಪೂಜಾರಿ ಮಟಪಾಡಿ ಇವರನ್ನು ಸನ್ಮಾನಿಸಲಾಯಿತು. ದಿ. ಪ್ರಭಾಕರ ಆಚಾರ್ಯ ಕುಟುಂಬಿಕರಿಗೆ ಗೌರವಾರ್ಪಣೆ ನಡೆಸಲಾಯಿತು.
ವೇದಿಕೆಯಲ್ಲಿ ಪದ್ಮಾನಾಭ ಆಚಾರ್ಯ, ಅಶೋಕ್ ಪೂಜಾರಿ, ಚಂದ್ರ ಶೇಖರ ನಾಯಕ್, ಅಬ್ದುಲ್ ಸಲೀಮ್, ರಾಜೇಶ್ ಶೆಟ್ಟಿ ಬಿರ್ತಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಚಂದ್ರ ಶೇಖರ ನಾಯರಿ, ವಸಂತಿ ಪ್ರಭಾಕರ ಆಚಾರ್ಯ, ಪ್ರಸನ್ನ, ಸಂದೇಶ್ ಪೂಜಾರಿ, ಸುರೇಶ್ ಎನ್ ಕರ್ಕೇರಾ, ವಿಜಯ ನಾಯಕ್, ಸುಬ್ರಹ್ಮಣ್ಯ ಆಚಾರ್ಯ, ಜೊಯ್ಸನ್ ಬಾಂಜ್, ಗಣಪತಿ ಆಚಾರ್ಯ, ಯೂತ್ ಕ್ಲಬ್ ಅಧ್ಯಕ್ಷ ಶರತ್ ನಾಯಕ್, ಕೋಶಾಧಿಕಾರಿ ಅಖಿಲೇಶ್ ನಾಯಕ್, ಕ್ರೀಡಾ ಕಾರ್ಯದರ್ಶಿ ಮುರಳಿ ನಾಯಕ್, ಭರತ್ ನಾಯಕ್, ಆಸ್ಫಾನ್ ಉಪಸ್ಥಿತರಿದ್ದರು.
ಯೂತ್ ಕ್ಲಬ್ ಅಧ್ಯಕ್ಷ ಶರತ್ ನಾಯಕ್ ಸ್ವಾಗತಿಸಿ, ಸನ್ಮಾನಿತರ ಪರಿಚಯವನ್ನು ಶರೋನ್, ಅಂಕುಶ್, ಸುಬ್ರಹ್ಮಣ್ಯ ಆಚಾರ್ಯ ನೀಡಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.