ಡಿ ಗ್ರೂಪ್ ನೌಕರರ ಸಂಘದ ಮಹಾಸಭೆ, ಸನ್ಮಾನ

Spread the love

ಡಿ ಗ್ರೂಪ್ ನೌಕರರ ಸಂಘದ ಮಹಾಸಭೆ, ಸನ್ಮಾನ

ಮ0ಗಳೂರು : ದ.ಕ. ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘದ 2016-17ನೇ ಸಾಲಿನ ಮಹಾಸಭೆಯು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಇವರ ಅಧ್ಯಕ್ಷತೆಯಲ್ಲಿ ಜರಗಿತು.

2016-17ನೇ ಸಾಲಿನ ವಾರ್ಷಿಕ ವರದಿಯನ್ನು ಎಂ. ಉದಯರಂಜನ್ ಮತ್ತು ಯು.ಕೆ. ನಾರಾಯಣ್ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು. 2017-18ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಗೆ ಇಲಾಖಾವಾರು ಸುಮಾರು 50 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಬಳಿಕ ಜರುಗಿದ ಸನ್ಮಾನ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೋ ಭಾಗವಹಿಸಿ ಸಂಘದ ವಜ್ರಮಹೋತ್ಸವದ ಅಂಗವಾಗಿ ‘ವಜ್ರ –ಜವಾನ’ ಸ್ಮರಣ ಸಂಚಿಕೆಯ ಜಾಹೀರಾತು ಮನವಿ ಪತ್ರವನ್ನು ಬಿಡುಗಡೆ ಮಾಡಿದರು. 2017 ರ ಗಣರಾಜ್ಯೋತ್ಸವ ರಾಷ್ಟ್ರಪ್ರಶಸ್ತಿ ಹಾಗೂ ರಾಷ್ಟ್ರಪತಿ ಪದಕ ಪಡೆದ ಎಸಿಪಿ ವಲೈಂಟಿನ್ ಡಿಸೋಜ ಡಿವೈಎಸ್‍ಪಿ ಇವರಿಗೆ ದ.ಕ. ಸರ್ಕಾರಿ ಜಿಲ್ಲಾ ಗ್ರೂಪ್ ಡಿ ನೌಕರರ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.

ಪದೋನ್ನತಿ ಹೊಂದಿ ದ್ವಿ.ದ.ಸ. ಹುದ್ದೆಗೆ ನೇಮಕಗೊಂಡು ಸಂಘದ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಬಿ.ಶೇಷಪ್ಪ (ವೆನ್‍ಲಾಕ್ ಆಸ್ಪತ್ರೆ) ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಟೇಶ್ ಯೆಯ್ಯಾಡಿ (ದ.ಕ.ಜಿಲ್ಲಾ ಪಂಚಾಯತ್/ಆರೋಗ್ಯ ಇಲಾಖೆ), ಚೆನ್ನಮ್ಮ (ಲೋಕೋಪಯೋಗಿ ಇಲಾಖೆ) ಹಾಗೂ ಗೀತಾ (ಕರ್ನಾಟಕ ರಾಜ್ಯ ಕಾರ್ಮಿಕ ವಿಮಾ ಇಲಾಖೆ) ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಗದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕರ್ನಾಟಕ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ವಂದಿಸಿದರು.


Spread the love