Home Mangalorean News Kannada News ತಂದೆಯಿಂದಲೇ ಮಗಳ ಅತ್ಯಾಚಾರ; ಆರೋಪಿ ವಶಕ್ಕೆ

ತಂದೆಯಿಂದಲೇ ಮಗಳ ಅತ್ಯಾಚಾರ; ಆರೋಪಿ ವಶಕ್ಕೆ

Spread the love

ತಂದೆಯಿಂದಲೇ ಮಗಳ ಅತ್ಯಾಚಾರ; ಆರೋಪಿ ವಶಕ್ಕೆ

ಬಂಟ್ವಾಳ: ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪುಂಜಾಲಕಟ್ಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತ ಬಾಲಕಿಯು ತಂದೆ-ತಾಯಿ, ತಮ್ಮ ಹಾಗೂ ತಂಗಿಯೊಂದಿಗೆ ಪಿಲಾತಬೆಟ್ಟು ಮನೆಯಲ್ಲಿ ವಾಸವಾಗಿದ್ದು, ಫೆ.8ರಂದು ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿರುವ ಸಂದರ್ಭ ತನ್ನ ತಂದೆ ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ್ದಾನೆ. ಅದಲ್ಲದೆ ಬಳಿಕವೂ ಹಲವು ಅತ್ಯಾಚಾರ ಎಸಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.


Spread the love

Exit mobile version