Home Mangalorean News Kannada News ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

Spread the love

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ ಸಾಹಿತ್ಯ ಕಲೆಯು ತತ್ವ, ಸಿದ್ಧಾಂತ ಹಾಗೂ ಜನರ ಸಂಸ್ಕøತಿಯನ್ನು ಹೊಂದಿದೆ ಮಾತ್ರವಲ್ಲ ತತ್ವಪದಗಳು ನೋಡಲು ಸರಳವಾಗಿದ್ದರೂ ಜಾತೀಕರಣ ಹಾಗೂ ಸಾಮ್ರಾಜ್ಯಶಾಹಿಯ ಚಿಂತನೆಯ ಒಳಾರ್ಥವನ್ನು ಹೊಂದಿದೆ’ ಎಂದು ಡಾ. ಬಸವರಾಜ ಸಬರದ ಹೇಳಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನದ `ಕರ್ನಾಟಕ ದರ್ಶನ: ಅಧ್ಯಾತ್ಮ ಪರಂಪರೆ’ ವಿಚಾರಗೋಷ್ಠಿಯಲ್ಲಿ ತತ್ವಪದಗಳ ಕುರಿತು ಮಾತನಾಡಿದರು.

`ಕರ್ನಾಟಕದ ಭಕ್ತಿ ಪಂಥಗಳಿಗೆ 3000 ವರ್ಷದ ಪರಂಪರೆಯಿದ್ದು, ತತ್ವಪದಗಳು 13 ನೇ ಶತಮಾನದಲ್ಲಿ ಹುಟ್ಟಿಕೊಂಡಿವೆ. ಈ ತತ್ವಪದಗಳಲ್ಲಿ ಸೂಫಿ ಪರಂಪರೆ, ಶಿಶುನಾಳ ಪರಂಪರೆ, ಅವಧೂತ ಪರಂಪರೆಯಂತಹ ಹಲವಾರು ಪರಂಪರೆಗಳಿದ್ದು, ಇವು ಸೌಹಾರ್ದತೆಯನ್ನು ಉಂಟುಮಾಡುವುದಷ್ಟೆ ಅಲ್ಲ ಮೌಲ್ಯಗಳನ್ನು ಕೂಡ ನೀಡಿವೆ ಎಂದರು.

ಸಂತಶಿಶುನಾಳ ಶರೀಫ, ಬಿದನೂರಿನ ಗಂಗಮ್ಮ, ಕಲ್ಲೂರಿನ ತಾಯಮ್ಮ, ಮುಂತಾದ ತತ್ವಪದಕಾರರು ಅಗಾಧ ಕೊಡುಗೆಯನ್ನು ಸ್ಮರಿಸಿದ ಡಾ. ಬಸವರಾಜ ಸಬರದ ದಲಿತ ತತ್ವಪದಕಾರರು, ಮಹಿಳಾ ತತ್ವಪದಕಾರರು ಹಾಗೂ ಇಸ್ಲಂ ತತ್ವಪದಕಾರರು ಅದ್ಭುತ ಕ್ರಾಂತಿಯನ್ನು ತತ್ವಪದಗಳಲ್ಲಿ ಮಾಡಿದ್ದಾರೆ. ಆದರೆ ಈ ಕೊಡುಗೆಗಳಿಗೆ ಯಾವುದೇ ಸಾಹಿತ್ಯಿಕ ಕುರುಹುಗಳಿಲ್ಲ ಎಂದು ವಿವರಿಸಿದರು.

`ಇಂದು ಜಾಗತೀಕರಣ ಹಾಗೂ ದೇಶೀಕರಣ ಮುಖ್ಯವಾಗಿದ್ದು, ಕೆಲವೊಂದು ಸಾಮಾಜಿಕ ಪರಿಭಾಷೆಯನ್ನು ಆಧ್ಯಾತ್ಮಿಕ ಪರಿಭಾಷೆಯನ್ನಾಗಿ ಪರಿವರ್ತನೆ ಮಾಡಲಾಗಿದೆ. ಜ್ಞಾನವನ್ನು ಪಸರಿಸುವುದು ಧರ್ಮವಾದರೆ ಅದನ್ನು ಕೆಡಿಸುವುದು ಅಧರ್ಮ. ಅಂತಹ ಜ್ಞಾನವನ್ನು ಪಸರಿಸುವ ಧರ್ಮದ ಕಾರ್ಯವನ್ನು ಈ ತತ್ವ ಪದಕಾರರು ಮಾಡಿದ್ದಾರೆ. ವಿವಿಧ ತೋಟದಳಲ್ಲಿ ಬೆಳೆದ ತತ್ವಪದಗಳ ಪರಿಮಳವು ದೇಶಿ ಸುವಾಸನೆಯನ್ನು ನೀಡುವುದರ ಜೊತೆಗೆ ಸಾಮಾಜಿಕ ಆಧ್ಯಾತ್ಮಿಕ ಪರಿಮಳವನ್ನು ನೀಡುತ್ತಿದೆ’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನುಡಿಸಿರಿಯ 2018ರ ಸರ್ವಾಧ್ಯಕ್ಷೆಯಾದ ಡಾ. ಮಲ್ಲಿಕಾ ಎಸ್ ಘಂಟಿ ಹಾಗೂ ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಡಾ.ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

-ಶ್ರೀರಕ್ಷಾ ರಾವ್, ಆಳ್ವಾಸ್ ಕಾಲೇಜು ಮೂಡಬಿದ್ರೆ


Spread the love

Exit mobile version