ತನ್ನ ನಾಲ್ಕು ಶಿಕ್ಷಣ ಸಂಸ್ಥೆಗಳ ಅಂದಾಜು ರೂ 70 ಲಕ್ಷ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ
ಕುಂದಾಪುರ: ರಾಜ್ಯಾದಾದ್ಯಂತ ಆವರಿಸುತ್ತಿರುವ ಕೋವಿಡ್-19 ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ಸಂಕಷ್ಟಕ್ಕೀಡಾಗಿರುವ ಈ ಹೊತ್ತಲ್ಲಿ ಬೈಂದೂರು ಶಾಸಕ ಬಿಎಮ್ ಸುಕುಮಾರ ಶೆಟ್ಟಿ ತಮ್ಮ ಅಧೀನದಲ್ಲಿರುವ ನಾಲ್ಕು ಶಿಕ್ಷಣ ಸಂಸ್ಥೆಗಳ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕೋವಿಡ್-19 ಸೋಕಿನಿಂದಾಗಿ ಕೆಲಸವಿಲ್ಲದೇ ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಕಟ್ಟಲಾಗದೆ ಅಂತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಪೋಷಕರ ಸಂಕಷ್ಟದ ಬೆನ್ನಲ್ಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಶುಲ್ಕ ವಿನಾಯಿತಿ ಘೋಷಿಸಿದ್ದಾರೆ. ಅಂತೆಯೇ ತಾಲೂಕಿನ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧೀನದಲ್ಲಿ ನಡೆಯುತ್ತಿರುವ 4 ಪ್ರಮುಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ.
ಕುಂದಾಪುರ ಎಜುಕೇಶನ್ ಸೊಸೈಟಿಯ ಅಧೀನದಲ್ಲಿ ಎಲ್ಕೆಜಿ ಯಿಂದ ಪದವಿ ಶಿಕ್ಷಣ ನೀಡುವ 4 ಶಿಕ್ಷಣ ಸಂಸ್ಥೆಗಳಿದ್ದು, ಅಂದಾಜು 4,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 4 ತ್ರೈಮಾಸಿಕಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸಲು ಹಾಗೂ ವರ್ಷದ ಬಾಕಿ ಶುಲ್ಕವನ್ನು ಪರೀಕ್ಷಾ ಅವಧಿಯ ಕೊನೆಯ ತ್ರೈಮಾಸಿಕದಲ್ಲಿ ತುಂಬಲು ಅವಕಾಶ ನೀಡಲಾಗುತ್ತದೆ.
ಶುಲ್ಕ ಮನ್ನಾ ಕುರಿತು ಮಾತನಾಡಿದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು, ದೇಶಾದ್ಯಾಂತ ಜನರು ಕೋವಿಡ್-19 ಕಾರಣದಿಂದಾಗಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ನಮ್ಮ ಟ್ರಸ್ಟಿಯ ಅಧೀನದಲ್ಲಿ ನಡೆಯುವ 4 ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೆÇೀಷಕರು ಇದಕ್ಕೆ ಹೊರತಾಗಿಲ್ಲ ಎನ್ನುವ ಅರಿವು ನಮಗಿದೆ. ಈ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದ ಕೊನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಬರಬೇಕಾಗಿರುವ 1.5 ಕೋಟಿ ರೂಪಾಯಿ ಶಾಲಾ ಶುಲ್ಕದಲ್ಲಿ ಅಂದಾಜು 70 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಬಾಕಿ ಶುಲ್ಕದಲ್ಲಿ ಸಂಪೂರ್ಣ ಮನ್ನಾ, ತಂದೆ ಅಥವಾ ತಾಯಿ ಒಬ್ಬರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೇ.50 ಮನ್ನಾ, ಬಡ ಕುಟುಂಬದ ವಿದ್ಯಾರ್ಥಿಗಳಿಗೂ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ಆದರೆ ಹಣಕಾಸು ಸ್ಥಿತಿ ಉತ್ತಮ ಇರುವ ಪೆÇೀಷಕರಿಂದ ಪೂರ್ಣ ಶುಲ್ಕ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಿಕ್ಷಕರು, ಸಿಬ್ಬಂದಿಗಳ ಸಂಬಳ, ಶಾಲೆ, ವಾಹನಗಳ ನಿರ್ವಹಣೆ ಹಾಗೂ ಇತರ ಖರ್ಚುಗಳು ಸೇರಿ ಪ್ರತಿ ತಿಂಗಳು ಅಂದಾಜು 45 ಲಕ್ಷ ರೂಪಾಯಿವರೆಗೆ ಟ್ರಸ್ಟಿಗೆ ಖರ್ಚಿನ ಹೊರೆ ಬರುತ್ತಿದೆ. ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಯಾವುದೇ ವಿದ್ಯಾರ್ಥಿ ಅಥವಾ ಪೆÇೀಷಕರಿಂದ ಬಲವಂತವಾಗಿ ಶಾಲಾ ಶುಲ್ಕವನ್ನು ವಸೂಲು ಮಾಡುವ ಪರಿಪಾಠ ಈ ಹಿಂದಿನಿಂದಲೂ ಇಲ್ಲ. ಬೈಂದೂರು ಹಾಗೂ ಕುಂದಾಪುರ ಗ್ರಾಮೀಣ ಭಾಗದ ಮಕ್ಕಳಿಗೂ ಸಮಾನವಾದ ಶಿಕ್ಷಣ ನೀಡಬೇಕು ಎನ್ನುವ ಗುರಿಯನ್ನು ಹೊಂದಿರುವ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೆÇೀಷಕರಿಗೆ ಕೊರೊನಾ ಸಂಕಷ್ಟದಿಂದಾಗಿ ಶುಲ್ಕ ಪಾವತಿ ಅಸಾಧ್ಯವಾದಲ್ಲಿ ಆರ್ಥಿಕ ಸಂಸ್ಥೆಯಿಂದ ಸಾಲ ಪಡೆದಾದರೂ ಒಳ್ಳೆಯ ಶಿಕ್ಷಣ ನೀಡಬೇಕು ಎನ್ನುವ ಬದ್ಧತೆಯನ್ನು ಆಡಳಿತ ಮಂಡಳಿ ಹೊಂದಿದೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.