ತಪ್ಪಿಸಿದ ರಾಹುಕಾಲ ಅವರಿಗೆ ಮಾತ್ರ, ರಾಜ್ಯಕ್ಕೆ ರಾಹುಕಾಲ ಅಂಟಿದ್ದು ಗ್ಯಾರೆಂಟಿ – ಶ್ರೀನಿಧಿ ಹೆಗ್ಡೆ

Spread the love

ತಪ್ಪಿಸಿದ ರಾಹುಕಾಲ ಅವರಿಗೆ ಮಾತ್ರ, ರಾಜ್ಯಕ್ಕೆ ರಾಹುಕಾಲ ಅಂಟಿದ್ದು ಗ್ಯಾರೆಂಟಿ – ಶ್ರೀನಿಧಿ ಹೆಗ್ಡೆ

ಉಡುಪಿ: ರಾಹುಕಾಲ ಎಂಬ ಕಾರಣಕ್ಕೆ ನಿಗದಿತ ಸಮಯಕ್ಕಿಂತ 45 ನಿಮಿಷ ಬೇಗ ಬಜೆಟ್ ಆರಂಭಿಸಿದ ಸಿಎಂ, ರಾಜ್ಯದ ಹಿಂದೂಗಳಿಗೆ ಮರಾಮೋಸ ಮಾಡಿದ್ದಲ್ಲದೇ ಉಡುಪಿ ಜಿಲ್ಲೆಗೂ ಯಾವ ಯೋಜನೆಗಳನ್ನು ಘೋಷಿಸಿಲ್ಲ ಎಂದು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಹಾಗು ಹೈಕೋರ್ಟ್ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಆರ್ಥಿಕತೆಗೆ ಅತೀ ಅಮೂಲ್ಯ ಕೊಡುಗೆ ನೀಡುವ ಕರಾವಳಿ ಜಿಲ್ಲೆಯ ಮೀನುಗಾರಿಕೆ ಹಾಗೂ ಬಂದರು ಅಭಿವೃದ್ಧಿಗೆ ಯಾವುದೇ ಅನುದಾನ ನೀಡದೆ, ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು, ಬ್ರಹ್ಮಾವರ ಕೃಷಿ ಕಾಲೇಜು ಘೋಷಣೆಯ ಭರವಸೆಯು ಈಡೇರಿಲ್ಲ.

ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಸೇರಿದಂತೆ ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಏರಿಕೆ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ, ನಾರಾಯಣ ಗುರು ಅಭಿವೃಧ್ದಿ ನಿಗಮಕ್ಕೆ ಅನುದಾನದ ಬಗ್ಗೆ ಯಾವುದೇ ಘೋಷಣೆ ಮಾಡದೇ ಸಿದ್ದರಾಮಯ್ಯನವರು ತಮ್ಮ ದಾಖಲೆಯ 16 ನೇ ಬಜೆಟ್‌ನಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ.

ಜನರ ಆಶಾಭಾವನೆಗಳಿಗೆ ವಿರುದ್ಧವಾಗಿ ಸಂಪತ್ತಿನ ಸಮಾನ ಹಂಚಿಕೆ ಎಂಬುದು ಸಿದ್ದರಾಮಯ್ಯ ಸರ್ಕಾರದಲ್ಲಿ ಮರೀಚಿಕೆಯಾಗಿದೆ. ನನ್ನ ತೆರಿಗೆ ನನ್ನ ಹಕ್ಕು ಎಂದು ಕೇಂದ್ರ ಸರ್ಕಾರದ ವಿರುದ್ಧವಾಗಿ ವಾದ ಮಂಡಿಸಿದವರು ಇಂದು ಉಡುಪಿ ಜಿಲ್ಲೆಯ ತೆರಿಗೆಯ ಪಾಲನ್ನು ಸರಿಯಾದ ಕ್ರಮದಲ್ಲಿ ನಮ್ಮ ಜಿಲ್ಲೆಗೆ ಹಿಂತಿರುಗಿಸಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಗೆ ಯಾವುದೇ ರೀತಿಯ ಉತ್ತೇಜನ ನೀಡಿಲ್ಲ. ಬೆಲೆ ಏರಿಕೆಗೆ ಕಡಿವಾಣ ಬೀಳಲಿದೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ವಕ್ಫ್ ಬೋರ್ಡ್ ₹ 150 ಕೋಟಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಕ್ಕೆ ₹ 1000 ಕೋಟಿ, ಅಲ್ಪಸಂಖ್ಯಾತ ಮಹಿಳೆಯರ ಸ್ವಯಂ ರಕ್ಷಣೆಗೆ ಕ್ರಮ, ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ಸಭಾಂಗಣ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ, ₹ 2 ಕೋಟಿವರೆಗಿನ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಸೇರಿದಂತೆ ಒಂದು ಸಮುದಾಯವನ್ನು ಓಲೈಸುವ ಮೂಲಕ ತನ್ನ ಒಟ್ ಬ್ಯಾಂಕ್ ಅನ್ನು ಭದ್ರ ಪಡಿಸುವ ಹಳೆ ಚಾಳಿಯನ್ನು ಇಂದು ಬಜೆಟ್ ನಲ್ಲಿ ಮುಂದುವರೆಸಿರುವುದು ರಾಜ್ಯದ ವಿಪರ್ಯಾಸವೇ ಸರಿ.

ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಇಲ್ಲ, ಉದ್ಯೋಗ ಸೃಷ್ಟಿಗೆ ಅವಕಾಶ ಇಲ್ಲ, ಕೃಷಿ ವಲಯಕ್ಕೆ ಆದ್ಯತೆ ಇಲ್ಲ, ಸರ್ಕಾರಿ ಶಾಲಾ ಕಟ್ಟಡಕ್ಕೆ ಅನುದಾನ ಮರೀಚಿಕೆ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಮೂಲೆಗುಂಪು, ಹಿಂದುಳಿದ ವರ್ಗ ಹಿಂದುಳಿದ ಸಮುದಾಯದ ಏಳಿಗೆಗೆ ಅವಕಾಶ ಇಲ್ಲದ ಈ ಬಜೆಟ್ ನಿಜವಾಗಿಯೂ ರಾಜ್ಯದ ಜನರ ಆಶೋತ್ತರಳಿಗೆ ಕೊಳ್ಳಿ ಇಡಲಾಗಿದೆ.

ಕಳೆದ ಬಾರಿ ಬಜೆಟ್ ನಲ್ಲಿ ಘೋಷಿಸಿ ಯೋಜನೆಗಳು ಕೇವಲ ಪತ್ರಕ್ಕೆ ಸೀಮಿತವಾದಂತೆ ಈ ಬಾರಿಯ ಬಜೆಟ್‌ನಲ್ಲಿನ ಯೋಜನೆಗಳು ಕೇವಲ ಪತ್ರಕ್ಕೆ ಸೀಮಿತಗೊಳ್ಳದಿರಲಿ ಎಂದು   ಟೀಕಿಸಿದ್ದಾರೆ.

ರಾಜ್ಯದ ಹಾಗೂ ರಾಷ್ಟ್ರದ ಜನತೆಗೆ ಧಾರ್ಮಿಕ ನಂಬಿಕೆಗೆ ಸದಾ ಘಾಸಿಗೊಳಿಸುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಹು ಕಾಲದ ನೆಪವೊಡ್ಡಿ ಬಜೆಟ್ ಅನ್ನು ನಿಗದಿತ ಅವಧಿಗೂ ಮುನ್ನ ಆರಂಭ ಮಾಡಿದ ಬಜೆಟ್‌ನಲ್ಲಿ ರಾಜ್ಯದ ಜನತೆಗೆ ರಾಹುಕಾಲ ಮಾತ್ರ ತಪ್ಪಿಸಿದ್ದು, ಆದರೆ ಕಂಟಕವನ್ನು ಇಡೀ ರಾಜ್ಯದ ಮೇಲೆ ಹೊರಿಸಿರುವುದು ಸಿದ್ದರಾಮಯ್ಯನವರ ಸಾಧನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments