ತಲೆಮರೆಸಿಕೊಂಡಿದ್ದ ಸಜಾ ಆರೋಪಿ ಬಂಧನ
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ಸರಹದ್ದಿನ ಪಣಂಬೂರು ಗ್ರಾಮದ ಎಸ್ಪಿನ್ ಹಾಲ್ ಗೋದಾಮ್ ಎಂಬಲ್ಲಿ 2007ನೇ ಸಾಲಿನಲ್ಲಿ ನಡೆದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಅಪಘಾತವೆಸಗಿದ ವಾಹನ ಚಾಲಕ ರಾಜೇಶ್ ನಾಯಕ್ಕ ಪ್ರಾಯ:37 ವರ್ಷ ಎಂಬಾತನಿಗೆ ದಿನಾಂಕ 04-04-2008 ರಂದು ಮಾನ್ಯ ನ್ಯಾಯಾಲಯವು ಸಜೆಯನ್ನು ವಿಧಿಸಿದ್ದು, ನ್ಯಾಯಾಲಯದ ತೀರ್ಪಿನ ಬಳಿಕ ಆರೋಪಿ ರಾಜೇಶ್ ನಾಯ್ಕ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಈತನ ಬಂಧನದ ಬಗ್ಗೆ ವಾರೆಂಟ್ ಹೊರಡಿಸಿದಂತೆ ಆರೋಪಿತನು ತನ್ನ ವಿಳಾಸವನ್ನು ಬದಲಾಯಿಸಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿರುತ್ತಾನೆ.ಆರೋಪಿತನ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ರಚಿಸಿ ,ಆರೋಪಿಯನ್ನು ದಿನಾಂಕ 12-10-2018 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತೌಡುಗೋಳಿ ನರಿಂಗಾಣ ನಿವಾಸಿ ರಾಜೇಶ್ ನಾಯ್ಕ (48) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಹನುಮಂತರಾಯ, ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ಹಾಗೂ ವಾರೆಂಟ್ ಸಿಬ್ಬಂದಿ ಶೈಲೇಂದ್ರ.ಕೆ ಮತ್ತು ಪಣಂಬೂರು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.