Home Mangalorean News Kannada News ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮಠಗಳನ್ನು ಸರ್ಕಾರದ ವಶಕ್ಕೆ ಪಡೆದು ತೋರಿಸಲಿ – ಯಶ್ ಪಾಲ್ ಸುವರ್ಣ

ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮಠಗಳನ್ನು ಸರ್ಕಾರದ ವಶಕ್ಕೆ ಪಡೆದು ತೋರಿಸಲಿ – ಯಶ್ ಪಾಲ್ ಸುವರ್ಣ

Spread the love

ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮಠಗಳನ್ನು ಸರ್ಕಾರದ ವಶಕ್ಕೆ ಪಡೆದು ತೋರಿಸಲಿ – ಯಶ್ ಪಾಲ್ ಸುವರ್ಣ

ಉಡುಪಿ: ತನ್ನ ಅಧಿಕಾರ ಅವಧಿಯಲ್ಲಿ ಒಮ್ಮೆಯೂ ಕೃಷ್ಣ ಮಠದತ್ತ ತಲೆಹಾಕದೆ ಭಂಢತನ ಪ್ರದರ್ಶಿಸಿರುವ ಸಿ ಎಂ ಸಿದ್ದರಾಮಯ್ಯ ಈಗ ಮಠಗಳನ್ನು ಸರಕಾರಿಕರಣಗೊಳಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ.ತಾಕತ್ತಿದ್ದರೆ ಸಿಎಂ ಸಿದ್ದರಾಮಯ್ಯ ಮಠಗಳನ್ನು ಸರ್ಕಾರದ ವಶಕ್ಕೆ ಪಡೆದು ತೋರಿಸಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಸವಾಲೆಸೆದಿದ್ದಾರೆ

ತಮ್ಮನ್ನು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸಿಗರು ಕೇವಲ ಹಿಂದೂ ಬೌದ್ಧ ಸಿಖ್ ಮತ್ತು ಜೈನ ಮಠ ಮಂದಿರಗಳನ್ನು ಮಾತ್ರ ಈ ಸುತ್ತೋಲೆಯಲ್ಲಿ ಸೇರಿಸಿ ಮುಸ್ಲಿಂ ಮತ್ತು ಕ್ರೈಸ್ತ ಸಂಸ್ಥೆಗಳನ್ನು ಹೊರಗಿಟ್ಟಿದ್ದಾರೆ. ನಿಜಕ್ಕೂ ಇವರು ಜಾತ್ಯಾತೀತರಾಗಿದ್ದರೆ ಹಿಂದೂ ಮಠಗಳನ್ನು ವಶಪಡಿಸಿಕೊಳ್ಳಲು ತೋರುತ್ತಿರುವ ದಾರ್ಷ್ಟ್ಯವನ್ನು ಮುಸ್ಲಿಂ ಮತ್ತು ಕ್ರೈಸ್ತರ ಧಾರ್ಮಿಕ ಸಂಸ್ಥೆಗಳ ಮೇಲೂ ತೋರಿಸಲಿ. ಕೇವಲ ಹಿಂದೂ ಸಮಾಜದ ಮೇಲೆ ಗಧಾಪ್ರಹಾರ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ.? ಉಡುಪಿಯ ಕೃಷ್ಣ ಮಠ ಪ್ರತೀದಿನ ಸಾವಿರಾರು ಭಕ್ತರಿಗೆ ಅನ್ನದಾನ ನಡೆಸುತ್ತಿದೆ. ಇದು ಸರಕಾರದ ಭಿಕ್ಷೆಯಿಂದಲ್ಲ ಭಕ್ತಾದಿಗಳು ಮಠದ ಶ್ರೀಗಳ ಮೇಲಿನ ಭಕ್ತಿಯಿಂದ ಸಮರ್ಪಿಸಿದ ದೇಣಿಗೆಯ ಹಣದಿಂದಾಗಿ.ಮಠವನ್ನು ಸರಕಾರೀಕರಣಗೊಳಿಸಿದರೆ ಈ ಕಾಂಗ್ರೆಸಿಗರಿಗೆ ಈ ಧರ್ಮಕಾರ್ಯ ಮುಂದುವರೆಸಿಕೊಂಡು ಹೋಗಲು ಸಾಧ್ಯವಿದೆಯೇ.? ಕೇವಲ ಮಠದ ಸಂಪತ್ತನ್ನು ದೋಚುವುದಷ್ಟೇ ಸರಕಾರಿಕರಣದ ಉದ್ದೇಶವೇ ಎನ್ನುವುದನ್ನು ಕಾಂಗ್ರೆಸಿಗರು ಸ್ಪಷ್ಟಪಡಿಸಬೇಕು.

ಜನಪ್ರಿಯ ಯೋಜನೆಗಳ ಜಾರಿಗಾಗಿ ಮಿತಿಮೀರಿ ಸಾಲಮಾಡಿ ದಿವಾಳಿ ಎದ್ದು ಹೋಗಿರುವ ರಾಜ್ಯದ ಸಿದ್ದರಾಮಯ್ಯ ಸರಕಾರ ಇದೀಗ ತನ್ನ ಬೊಕ್ಕಸ ತುಂಬಿಸಲು ಮಠ ಮಂದಿರಗಳ ಮೇಲೆ ಕಣ್ಣು ಹಾಕಿದೆ. ತಲತಲಾಂತರಗಳಿಂದ ಆಸ್ತಿಕ ಭಕ್ತರಿಂದ ಪೋಷಿಸಿಕೊಂಡು ಬಂದ ಶ್ರೀಮಂತ ಮಠಗಳನ್ನು ವಶಪಡಿಸಿಕೊಂಡು ಲೂಟಿಗೈಯಲು ಸಿದ್ದು ಸರಕಾರ ಮುಂದಾಗಿದೆ. ಮಠಗಳ ಸ್ವಾಧೀನದ ವಿಚಾರವನ್ನು ಸದನದಲ್ಲಿ ಚರ್ಚಿಸದೇ ನೇರವಾಗಿ ಸಮಿತಿ ರಚನೆ ಮಾಡಿ ಅಭಿಪ್ರಾಯ ಸಂಗ್ರಹಕ್ಕೆ ಇಳಿದಿರುವ ಸರಕಾರದ ತೋಳದ ಬುದ್ಧಿ ಜಗಜ್ಜಾಹೀರಾಗಿದ್ದು, ಸಿದ್ದರಾಮಯ್ಯ ಸರಕಾರದ ಹಿಂದೂ ಧಮನ ನೀತಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರಿಸಲಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಹಿಂದೂ ವಿರೋಧಿ ಸಲಹೆಗಾರ ಮತ್ತು ಆತನ ಪಟಾಲಮ್ಮಿನ ಮಾತು ಕೇಳಿ ಹಿಂದೂ ಸಮಾಜದ ತಂಟೆಗೆ ಬಂದರೆ ಮುಂಧಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ವನಾಶ ಶತಸಿದ್ಧ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version