ತಾಯಿ, ಮಕ್ಕಳ ಕೊಲೆ ಪ್ರಕರಣದ ಮನೆಗೆ ಭೇಟಿ ನೀಡಿದ ಎಮ್. ಎಲ್. ಸಿ ಮಂಜುನಾಥ ಭಂಡಾರಿ
ಉಡುಪಿ: ನೇಜಾರಿನ ತೃಪ್ತಿ ನಗರದಲ್ಲಿ ನಡೆದ ಒಂದೇ ಕುಟುಂಬದ ತಾಯಿ ಮತ್ತು ಮಕ್ಕಳ ಕೊಲೆ ನಡೆದ ಮನೆಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಂಗಳವಾರ ಭೇಟಿ ನೀಡಿದ ತಂದೆ ಹಾಗೂ ಮಗನಿಗೆ ಸಾಂತ್ವಾನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘಟನೆ ನಡೆದಾಗ ನಾನು ಗೃಹ ಸಚಿವರ ಜೊತೆಗೆ ಇದ್ದಿದದು ಗೃಹ ಸಚಿವರ ಸೂಚನೆಯ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಉಡುಪಿಗೆ ಬಂದ ತಕ್ಷಣ ಭೇಟಿ ನೀಡಲು ಸೂಚಿಸಿದ್ದರು ಅದರಂತೆ ಕಾಂಗ್ರೆಸ್ ಮುಖಂಡರ ಜೊತೆ ಬಂದು ಸಾಂತ್ವನ ಹೇಳಿದ್ದೇನೆ. ಸುತ್ತಮುತ್ತಲಿನ ಜನರು ಈ ಕುಟುಂಬದ ಜೊತೆ ಇದ್ದು, ಇದು ಮಾನವ ಕುಲದಲ್ಲೇ ಕೃತ್ಯ ಎಂತಹ ಘಟನೆ ಮರುಕಳಿಸಬಾರದು. ಇದು ಎಂತವರಿಗೆ ಆಗಲಿ ನಂಬಲು ಸಾಧ್ಯವಿಲ್ಲದ ಕೃತ್ಯವಾಗಿದ್ದು, ಇದರಲ್ಲಿ ಸರ್ಕಾರಕ್ಕೆ ಒತ್ತಡ ತರಬೇಕಾದ ಅಗತ್ಯ ಇಲ್ಲ. ಸಂಪೂರ್ಣ ಸರಕಾರ ಕುಟುಂಬದ ಜೊತೆಗೆ ಇದ್ದು, ಗೃಹ ಸಚಿವರು ಕೂಡ ಕುಟುಂಬದ ಜೊತೆಗಿದ್ದಾರೆ. ನಾವೆಲ್ಲ ಒಂದು ಕುಟುಂಬ ಯಾರಿಗೆ ತೊಂದರೆಯಾದರೂ ನನಗೆ ತೊಂದರೆ ಆಗಿದೆ ಎಂದು ಸರ್ಕಾರ ಭಾವಿಸುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ದಿಷ್ಟ ಕ್ರಮ ಕೈಗೊಳ್ಳುತ್ತದೆ ಎಂದರು.
ಶೀಘ್ರ ಕೊಲೆಗಾರನ ಬಂಧಿಸುವ ಭರವಸೆ ಎಸ್ಪಿ ನೀಡಿದ್ದು, ತನಿಖೆಯ ವಿಚಾರ ಕೇಳುವುದು ಮತ್ತು ಹೇಳುವುದು ಸರಿಯಲ್ಲ. ಕೊಲೆಗಾರ ಮಾನವ ಕುಲಕ್ಕೆ ಕಂಟಕ ಕಪ್ಪು ಚುಕ್ಕೆಯಾಗಿದ್ದು, ಇಂತಹ ಘಟನೆ ಮತ್ತೊಂದು ಮರುಕಳಿಸಬಾರದು. ಆಡಳಿತ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸುತ್ತೇವೆ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸರಕಾರಕ್ಕೆ ಮುಟ್ಟಿಸುತ್ತೇನೆ. ಆರೋಪಿ ಯಾರೇ ಆಗಿರಲಿ ಎಂತವನೇ ಆಗಿರಲಿ, ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ರವಾನಿಸಬೇಕು. ಕೊಲೆಗಾರನಿಗೆ ಮನುಷ್ಯತ್ವವೇ ಇಲ್ಲ ಎಂದು ಅನಿಸುತ್ತದೆ ಎಂದರು.
ನಗರದಲ್ಲಿ ಸಿಸಿಟಿವಿ ಕೊರತೆ ಇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ಅಗತ್ಯ ಇದ್ದರೆ ನನ್ನ ಶಾಸಕರ ನಿಧಿಯಿಂದ ಸಿಸಿ ಟಿವಿ ಹಾಕಿಸುತ್ತೇನೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಹೇಳಿದ್ದೇನೆ. ನಾನು ಜನಪ್ರತಿನಿಧಿಯಾಗಿ ನಾನು ಕೂಡ ಇಂತಹ ಘಟನೆಗಳಿಗೆ ಹೊಣೆಯಾಗುತ್ತೇನೆ ಎಂದರು.