ತಾಯಿ ಮತ್ತು ಮಗನಿಗೆ ಕೊರೋನಾ ಪಾಸಿಟಿವ್ – ಶಕ್ತಿನಗರ ಪ್ರದೇಶ ಸೀಲ್ ಡೌನ್
ಮಂಗಳೂರು: ನಗರದ ಶಕ್ತಿನಗರ ಸುತ್ತಲಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಶಕ್ತಿನಗರ ಪೂರ್ವ ವಿಭಾಗದ ಚಿತ್ತರಂಜನ್ ಹೌಸ್, ಪಶ್ಚಿಮದಿಂದ ನೀಲಕ್ಷ ಮನೆ, ಉತ್ತರಕ್ಕೆ ತಿಪ್ಪೆಸಮ ಮನೆ ಮತ್ತು ದಕ್ಷಿಣಕ್ಕೆ ಗಿಸ್ಸೆಲಾ ಡಿ ಮೇಟಾ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಈ ಭಾಗದ 22 ಮನೆಗಳು, 5 ಕಚೇರಿಗಳು ಸಂಪೂರ್ಣ ಕಂಟೈನ್ಮೆಂಟ್ ವ್ಯಾಪ್ತಿಗೊಳಪಡಿಸಲಾಗಿದೆ.
ಅಲ್ಲಿಂದ 5 ಕಿ.ಮೀ. ಸುತ್ತಮುತ್ತಲಿನ ವಾಮಂಜೂರು ಜಂಕ್ಷನ್, ಉರ್ವಾ ಮಾರ್ಕೆಟ್, ಪದವಿನಂಗಡಿ, ಬಂಟ್ಸ್ ಹಾಸ್ಟೆಲ್ ಪ್ರದೇಶಗಳನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಬಫರ್ ಝೋನ್ ವ್ಯಾಪ್ತಿಗೆ 4800 ಮನೆಗಳು, 1350 ಅಂಗಡಿ ಮತ್ತು ಕಚೇರಿಗಳು, 73000 ಜನರು ಈ ಬಫರ್ ಝೋನ್ ವ್ಯಾಪ್ತಿಗೊಳಪಡುತ್ತಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.