ತುಂಬೆ ದೇವಸ್ಥಾನ ಕಳವು ಪ್ರಕರಣ: ಮೂವರ ಬಂಧನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಗ್ರಾಮದ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 04/11/2024 ರಂದು ರಾತ್ರಿ ಬೆಳ್ಳಿಯ ಆಭರಣಗಳನ್ನು ಹಾಗೂ ನಗದನ್ನು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳವು ಪ್ರಕರಣದ ಕುಖ್ಯಾತ ಕಳ್ಳರ ತಂಡವನ್ನು ದ.ಕ ಜಿಲ್ಲಾ ಪೋಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಬಂಟ್ವಾಳ ತಾಲೂಕು ಇರಾ ಎಂಬಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಬಂಧಿತರಿಂದ ರೂ 1,25,000/-ಮೌಲ್ಯದ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಲಾಗಿರುತ್ತದೆ.
ಬಂಧಿತರನ್ನು ಕೇರಳ ರಾಜ್ಯದ ಹೊಸದುರ್ಗ ನಿವಾಸಿ ಬಶೀರ್ ಕೆ ಪಿ, @ ಆಕ್ರಿ ಬಶೀರ್ (44), ಪ್ರಕಾಶ್ ಬಾಬು @ ಮಹಮ್ಮದ್ ನಿಯಾಝ್ (46) ಮತ್ತು ಬಂಟ್ವಾಳ ಪುದು ನಿವಾಸಿ ಎಫ್. ಜೆ. ಮಹಮ್ಮದ್ ಇಸ್ಮಾಯಿಲ್(53) ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಬಶೀರ್ ಕೆಪಿ ಎಂಬಾತನು ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ದ ಬೇರೆ ಬೇರೆ ಠಾಣೆಗಳಲ್ಲಿ ಸುಮಾರು 13 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಮತ್ತು ಆರೋಪಿ ಪ್ರಕಾಶ್ ಬಾಬು @ ಮಹಮ್ಮದ್ ನಿಯಾಝ್ ಎಂಬಾತನ ವಿರುದ್ದ 03 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.
ಸದ್ರಿ ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿಎಸ್ ರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್ ವಿಜಯಪ್ರಸಾದ್ ರವರ ನೇತೃತ್ವದ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ ಮತ್ತು ಪಿಎಸ್ಐ ಗಳಾದ ಶ್ರೀ ನಂದ ಕುಮಾರ್ ಪಿಎಸ್ಐ ಪೂಂಜಾಲಕಟ್ಟೆ ಪೊಲೀಸ್ ಠಾಣೆ, ಶ್ರೀ ಹರೀಶ್ ಎಮ್ ಆರ್ ಬಂಟ್ವಾಳ ಗ್ರಾಮಾಂತರ ಠಾಣೆ, ಶ್ರೀ ಲೋಲಾಕ್ಷ ಪಿಎಸ್ಐ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಹಾಗೂ ಸಿಬ್ಬಂಧಿಗಳಾದ ಉದಯ ರೈ, ಪ್ರವೀಣ್ ಎಮ್, ಅದ್ರಾಮ, ಹರಿಶ್ಚಂದ್ರ, ನಝೀರ್, ಕೃಷ್ಣ ನಾಯ್ಕ್, ಸಂತೋಷ್, ರಾಹುಲ್ ರಾವ್, ಅಶೋಕ್, ವಿವೇಕ್ ಕೆ, ಕುಮಾರ್ ಹೆಚ್.ಕೆ, ಬಸವರಾಜ್, ರಮ್ಜಾನ್, ಕುಮಾರ, ಮಹಾಂತೇಶ್ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ ರವರುರವರನ್ನೊಳಗೊಂಡ ತಂಡ ಪಾಲ್ಗೊಂಡಿರುತ್ತದೆ.