Home Mangalorean News Kannada News ತುಕ್ಕು ಹಿಡಿದು ಅಪಾಯಕ್ಕೆ ಕಾಯುತ್ತಿದೆ ಮಟಪಾಡಿಯ ಟ್ರಾನ್ಸ್ ಫಾರ್ಮರ್ ಕಂಬಗಳು!

ತುಕ್ಕು ಹಿಡಿದು ಅಪಾಯಕ್ಕೆ ಕಾಯುತ್ತಿದೆ ಮಟಪಾಡಿಯ ಟ್ರಾನ್ಸ್ ಫಾರ್ಮರ್ ಕಂಬಗಳು!

Spread the love

ತುಕ್ಕು ಹಿಡಿದು ಅಪಾಯಕ್ಕೆ ಕಾಯುತ್ತಿದೆ ಮಟಪಾಡಿಯ ಟ್ರಾನ್ಸ್ ಫಾರ್ಮರ್ ಕಂಬಗಳು!

ಬ್ರಹ್ಮಾವರ: ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ, ಯಾವುದೇ ಸೂಕ್ತ ಭದ್ರತೆ ಇಲ್ಲದೆ ಟ್ರಾನ್ಸ್ ಫಾರ್ಮರ್ ಒಂದು ಸಾರ್ವಜನಿಕರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಅಂದ ಹಾಗೆ ಈ ದ್ರಶ್ಯ ಕಂಡುಬರುತ್ತಿರುವುದು ಬ್ರಹ್ಮಾವರ ಸಮೀಪದ ಮಟಪಾಡಿಬಳಿ.

ಸುಮಾರು 50ಕ್ಕೂ ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ಟ್ರಾನ್ಸ್ ಫಾರ್ಮರ್ ಕಳೆದ ಕೆಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಸುಮಾರು 30 ವರ್ಷಗಳಿಂದಲೂ ಹಿಂದಿನಿಂದಲೂ ಮಟಪಾಡಿ ಶ್ರೀ ನಿಕೇತನ ಶಾಲೆಯ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಹಂತದಲ್ಲಿವೆ.

ಈ ಭಾಗದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಅಂಚೆ ಕಚೇರಿ ಹಾಗೂ ಯಕ್ಷಗಾನ ಸಂಘದ ಕಚೇರಿ ಇದೆ ಅಲ್ಲದೆ ಜನವಸತಿ ಪ್ರದೇಶ ಇದಾಗಿದ್ದು, ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಪರಿಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಅಪಾಯವನ್ನು ಕಟ್ಟಿಟ್ಟ ಬುತ್ತಿ ಆಗಿ ಪರಿಣಮಿಸಿದೆ.

ಈ ಪರಿಸರದಲ್ಲಿ ನೂರಾರು ಮಂದಿ ಶಾಲಾ ವಿದ್ಯಾರ್ಥಿಗಳು , ಮಕ್ಕಳು ತಿರುಗಾಡುತ್ತಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯಾವುದೇ ರೀತಿಯ ತಡೆ ಬೇಲಿ ಇಲ್ಲದೆ ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಅಷ್ಟೇ ಅಲ್ಲದೆ ಪವರ್ ಮ್ಯಾನ್ ಗಳ ಜೀವಕ್ಕೂ ಅಪಾಯವಿದೆ.

ಅಪಾಯದಲ್ಲಿರುವ ಈ ಟ್ರಾನ್ಸ್ ಫಾರ್ಮರ್ ನಿಂದ ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ತುಕ್ಕು ಹಿಡಿದಿರುವ ಕಂಬಗಳನ್ನು ಕೂಡಲೇ ಬದಲಿಸುವ ಅವಶ್ಯಕತೆ ಇದ್ದು, ಇಲ್ಲವಾದಲ್ಲಿ ಈ ಮಳೆಗಾಲದಲ್ಲಿ ತುಂಡಾಗಿ ಬಿದ್ದು ಜೀವಹಾನಿ ಸಂಭವಿಸುವ ಮೊದಲು ಅದನ್ನು ಬದಲಿಸುವಂತೆ ಸಾರ್ವಜನಿಕರು ಮೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದು ಸೂಕ್ತ ಕ್ರಮ ಕೈಗೊಂಡು ಮುಂಬರುವ ಅಪಾಯ ತಪ್ಪಿಸಬೇಕಾಗಿದೆ.


Spread the love

Exit mobile version