ತುಳುಭಾಷೆಯ ಮಹಾಕಾವ್ಯ ಮಂದಾರ ರಾಮಾಯಣ- ಡಾ. ಡಾ. ಪ್ರಭಾಕರ ಜೋಷಿ ಅಭಿಮತ
ವಿದ್ಯಾಗಿರಿ: ಆಡುಮಾತಿನಲ್ಲಿ ತುಳುವಿನ ಮಹಾಕಾವ್ಯ ಬರೆದವರಲ್ಲಿ ಮಂದಾರ ಕೇಶವ ಭಟ್ಟ ಮೊದಲಿಗರಾಗಿದ್ದಾರೆ ಎಂದು ಮಂಗಳೂರಿನ್ತ ಕಲಾ ವಿಮರ್ಶಕ ಡಾ. ಪ್ರಭಾಕರ ಜೋಷಿ ಹೇಳಿದರು.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಧೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಆಳ್ವಾಸ್ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಮಂದಾರ ರಾಮಾಯಣ: ಇತಿಹಾಸ ಮತ್ತು ಸಂಸ್ಕ್ರತಿ ಶೋಧ ಎಂಬ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತಾನಾಡಿದರು.
ತುಳು ಸಾಹಿತಿ ಮಂದಾರ ಕೇಶವ ಭಟ್ಟರು ಯಾರನ್ನು ಅನುಸರಿಸದೆ ತನ್ನದೇ ಅದ ಶೈಲಿಯಲ್ಲಿ ಬರೆದಿದ್ದಾರೆ ಎಂದರು.
ಮಂಗಳೂರು ವಿವಿಯ ಕುಲಪತಿ ಡಾ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಇತಿಹಾಸ ಮತ್ತು ಸಂಸ್ಕ್ರತಿಯನ್ನ ವಿದ್ಯಾರ್ಥಿಗಳು ಶೋಧಿಸಬೇಕು. ನಮ್ಮ ಸಂಸ್ಕ್ರತಿ, ಆಚಾರ-ವಿಚಾರ ಉಳಿಯಬೇಕೆಂದರೆ ಭಾಷೆಯನ್ನ ಉಳಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ, ತುಳುನಾಡು ಜನಪದ ಸಂಪ್ರಾದಯಗಳಲ್ಲಿ ಅತ್ಯಂತ ಶ್ರೀಮಂತ ನಾಡು. ಅಷ್ಟೇ ಅಲ್ಲದೇ ಇಲ್ಲಿಯ ಆಚರಣೆ, ಗದ್ಯ-ಪದ್ಯ ಸಾಹಿತ್ಯಗಳು ಹೀಗೆ ಎಲ್ಲದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ಮಂದಾರ ರಾಮಾಯಣವನ್ನು ಕಲಾರಂಗಭೂಮಿಗೂ ಅಳವಡಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಮೇಶ್ ಕೆ. ಆಳ್ವಾಸ್ ಕಾಲೇಜಿನ ಇತಿಹಾಸ ವಿಭಾಗದ ಅಶೋಕ್ ರಾಕೇಶ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಇಂದುಧರ್ ನಿರೂಪಿಸಿದರು.