Home Mangalorean News Kannada News ತುಳು ಭಾಷೆ ಕೋಡ್ ವರ್ಡ್ ನನ್ನ ಜೀವ ಉಳಿಸಿತು – ಅಪಹೃತರಿಂದ ರಕ್ಷಿಸಲ್ಪಟ್ಟ ರಿಚ್ಚಾರ್ಡ್ ಲಾಜರಸ್

ತುಳು ಭಾಷೆ ಕೋಡ್ ವರ್ಡ್ ನನ್ನ ಜೀವ ಉಳಿಸಿತು – ಅಪಹೃತರಿಂದ ರಕ್ಷಿಸಲ್ಪಟ್ಟ ರಿಚ್ಚಾರ್ಡ್ ಲಾಜರಸ್

Spread the love

ತುಳು ಭಾಷೆ ಕೋಡ್ ವರ್ಡ್ ನನ್ನ ಜೀವ ಉಳಿಸಿತು – ಅಪಹೃತರಿಂದ ರಕ್ಷಿಸಲ್ಪಟ್ಟ ರಿಚ್ಚಾರ್ಡ್ ಲಾಜರಸ್
ಮಂಗಳೂರು: ತುಳು ಭಾಷೆ ಮತ್ತು ಕೆಲವೊಂದು ಕೋಡ್ ವರ್ಡ್ ಭಾಷೆಗಳು ನನ್ನ ಜೀವವನ್ನು ಉಳಿಸಲು ಸಹಾಯವಾದವು ರಂದು ಇತ್ತಿಚೇಗೆ ರಾಜಾಸ್ಥಾನದ ಭರತ್ ಪುರದಲ್ಲಿ ಅಪಹರಣಕ್ಕೊಳಗಾಗಿ ಬಿಡುಗಡೆಯಾಗಿ ಬಂದ ರಿಚ್ಚರ್ಡ್ ಲಾಜರಸ್ ಹೇಳಿದರು.

richard-kidnapped-20160806

ಅವರು ನಗರದ ಹೋಟೇಲ್ ವುಡ್ ಲ್ಯಾಂಡ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜನರೇಟರ್ ಟೆಕ್ಷಿಶಿಯನ್ ವೃತ್ತಿ ಮಾಡುವ ನನ್ನನ್ನು ಅರುಣ್ ಡಿಸೋಜಾರವರು ರಾಜಾಸ್ಥಾನದಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುವ ನಾಲ್ಕು ಜನರೇಟರ್ ನೋಡಿ ಬರುವಂತೆ ಕಳುಹಿಸಿದ್ದರು. ಜುಲೈ 30ರಂದು ನಾನು ರಾಜಸ್ಥಾನದ ಭರತ್ ಪುರ ತಲುಪಿದ್ದೆ. ಜನರೇಟರ್ ಮಾರಟ ಮಾಡುವವರು ತಿಳಿಸಿದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಪಿಕಪ್ ವಾಹನದಲ್ಲಿ ಬಂದು ಜನರೇಟರ್ ಕೊಡಿಸುವುದಾಗಿ ಕರೆದೊಯ್ದರು. ತುಂಬಾ ಆತ್ಮೀಯವಾಗಿ ಅರುಣ್ ಅವರು ಹೇಳಿದ ರೀತಿಯಲ್ಲೇ ಜನರೇಟರ್ ವಿಷಯದಲ್ಲಿ ಆ ವ್ಯಕ್ತಿ ಮಾತಾಡಿದ್ದರಿಂದ ಯಾವುದೇ ಅನುಮಾನವಿಲ್ಲದೆ ಗಾಡಿ ಹತ್ತಿದ್ದೆ. ಆದರೆ ಅವರು ಅಲ್ಲಿಂದ ಸುಮಾರು 40 ಕಿಮಿ ದೂರದ ಅಜ್ಞಾತ ಸ್ಥಳವೊಂದಕ್ಕೆ ನನ್ನನ್ನು ಕರೆದೊಯ್ದು, ಗದ್ದೆಯಲ್ಲಿ ಕಟ್ಟಿ ಹಾಕಿದ್ದರು. ಸುಮಾರು ನಾಲ್ಕು ದಿನಗಳ ಕಾಲ ಮಳೆಯಲ್ಲಿ ನೆನೆಯುತ್ತಾ ಹಾಕಿದ್ದ ಬಟ್ಟೆಯಲ್ಲೇ ಇರಬೇಕಾಯಿತು. ನನ್ನ ಮೊಬೈಲ್, ಪರ್ಸ್ ಮತ್ತು ಹಣವನ್ನು ಕಸಿದುಕೊಂಡಿದ್ದಲ್ಲದೆ 10 ಲಕ್ಷ ಹಣದ ಬೇಡಿಕೆ ಕೂಡ ಇಟ್ಟರು.

ನಾನು ಅರುಣ್ ಅವರಿಗೆ ಕರೆ ಮಾಡಿದಾಗ ತುಳುವಿನಲ್ಲಿ ಕೆಲವೊಂದು ಸೂಚ್ಯ ಮಾತುಗಳಲ್ಲಿ ನಾನು ಅಪಹರಣಕ್ಕೋಳಗಾಗಿರುವ ವಿಷಯವನ್ನು ತಿಳಿಸಿದೆ.ಅಪಹರಣಕಾರರ ನನ್ನನ್ನು ಕಟ್ಟಿ ಹಾಕಿದ್ದ ವೇಳೆ ನನ್ನ ಸುತ್ತಮುತ್ತ ಕೆಲವೊಮ್ಮೆ ಮೂರು ನಾಲ್ಕು ಮಂದಿ ಇರುತ್ತಿದ್ದರು ಅವರ ಬಳಿಕ ವಿವಿಧ ಮಾರಾಕಾಸ್ತ್ರಗಳಿದ್ದವು. ಘಟನೆಯಿಂದ ತಾನೂ ತೀರ ನಿಸ್ತೇಜನಾಗಿದ್ದೆ ಅಲ್ಲಿಂದ ಬಂದು ಚೇತರಿಸಿಕೊಳ್ಳು ಎರಡು ದಿನಗಳೇ ಬೇಕಾಯಿತು.

ಅರುಣ್ ಡಿಸೋಜಾ ಮಾತನಾಡಿ ನಾನು ರಿಚ್ಚರ್ಡ್ ಅವರ ಕರೆಯನ್ನು ಸ್ವೀಕರಿಸಿದ ಕೂಡಲೇ ಯೂತ್ ಕಾಂಗ್ರೆಸ್ ನಾಯಕ ಪವನ್ ರಾಜ್ ಮತ್ತು ಪ್ರಕಾಶ್ ಪಿಂಟೊ ಅವರಿಗೆ ಮಾಹಿತಿ ನೀಡಿದೆ ಅಲ್ಲದೆ ಸಚಿವ ಯು ಟಿ ಖಾದರ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಿದೆ. ಖಾದರ್ ಕೂಡಲೇ ಸ್ಪಂದಿಸಿ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರಿಗೆ ಕರೆ ಮಾಡಿ ರಿಚ್ಚರ್ಡ್ ಬಿಡುಗಡೆಗೆ ಸಹಕರಿಸುವಂತೆ ಸೂಚಿಸಿದರು.

ಚಂದ್ರಶೇಖರ್ ಕೂಡಲೇ ರಾಜಾಸ್ಥಾನ ಐಜಿಪಿ ಅಶೋಕ್ ವರೀಷ್ಟ ಹಾಗೂ ಎಸ್ ಎಸ್ ಪಿ ಭರತ್ ಪುರ ಕೈಲಾಸ್ ವಿಶ್ನೋಯಿ ಅವರನ್ನು ಸಂಪರ್ಕಿಸಿ ರಿಚ್ಚರ್ಡ್ ಅವರನ್ನು ಬಿಡುಗಡೆಗೊಳಿಸುಲು ಸಹಾಯ ಯಾಚಿಸಿದರು. ಪೋಲಿಸ್ ಕಮೀಷನರ್ ಚಂದ್ರಶೇಖರ್ ತಂಡವನ್ನು ರಚನೆ ಮಾಡಿ ಮಥುರಾಗೆ ಕಳಿಸಿದರು.ಅಪಹರಣಕಾರರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಜತೆ ಆತ್ಮೀಯವಾಗಿ ಮಾತನಾಡುತ್ತಾ ಐದು ಲಕ್ಷ ನೀಡುವುದಾಗಿ ಹೇಳಿ ಅದಕ್ಕಾಗಿ ಡಮ್ಮಿ ಫ್ಲೈಟ್ ಟಿಕೇಟ್ ಪ್ರತಿಯನ್ನು ವಾಟ್ಸಪ್ ಮೂಲಕ ಅಪಹರಣಕಾರರಿಗೆ ಕಳುಹಿಸಿದೆ. ಪೋಲಿಸ್ ಕಮೀಷನರ್ ನಿರ್ದೇಶನ ಮೇರೆಗೆ ನಗರ ಪೋಲಿಸರು ಪವನ್ ರಾಜ್ ಹಾಗೂ ಪ್ರಕಾಶ್ ಪಿಂಟೊ ಜತೆ ದೆಲ್ಲಿಗೆ ತೆರಳಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಜಾಸ್ಥಾನದ ಭರತ್ ಪುರದ ಐಜಿಪಿಯನ್ನು ಭೇಟಿ ಮಾಡಿದೆವು.

ಉತ್ತರ ಪ್ರದೇಶ ಮತ್ತು ರಾಜಾಸ್ಥಾನದ ಗಡಿ ಭಾಗವಾದ ಹಾತಿ ಎಂಬಲ್ಲಿ ಪೋಲಿಸರುಉ, ಸಶಸ್ತ್ರ ಪಡೆಯ ಜತೆ ಧಾಳಿ ನಡೆಸಿ ಅಲ್ಲಿನ ಕ್ರಿಮಿನಲ್ ಮುಬಾರಕ್ ಮತ್ತು ಆತನ ಸಹಚರರನ್ನು ಬಂಧಿಸಿದರು. ಈ ವಿಷಯ ತಿಳಿದ ಅಪಹರಣಕಾರರು ಪೋಲಿಸರು ತಮ್ಮನ್ನೂ ಕೂಡ ಬಂಧಿಸಬಹುದೆಂದು ಅರಿತು ರಿಚ್ಚರ್ಡ್ ನನ್ನು ಬಿಡುಗಡೆಗೊಳಿಸಿದರು, ಈ ಮೂಲಕ ರಿಚ್ಚರ್ಡ್ ನನ್ನ ರಕ್ಷಿಸಿದ ಪೋಲಿಸರು ಬಂಧನದಲ್ಲಿದ್ದ ವೇಳೆ ರಿಚ್ಚರ್ಡ್ ಅವರಿಂದಲೇ ಫೋನ್ ಮೂಲಕ ಹಣ ಹಾಕಲು ತಿಳಿಸಿದ್ದ ಅಕೌಂಟ್ ನಂಬರ್ ಹೆಸರು ವಿಳಾಸ ಪತ್ತೆ ಹಚ್ಚಿ ಕರ್ನಾಟಕ, ರಾಜಾಸ್ಥಾನಾ ಹಾಗೂ ಉತ್ತರಪ್ರದೇಶ ಪೋಲಿಸರೊಂದಿಗೆ ಧಾಳಿ ಮಾಡಿ ಮೆಹಮೂದ್ ಎಂಬಾತನ್ನನ್ನು ಬಂಧಿಸಿದ್ದಾರೆ ಎಂದು ಪವನ್ ರಾಜ್ ಹೇಳೀದರು.


Spread the love

Exit mobile version