Home Mangalorean News Kannada News ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ

ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ

Spread the love

ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ

ಮೂಡುಬಿದಿರೆ:  ಗ್ರಾಮೀಣ ಪ್ರದೇಶದ  ತುಳು ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ತುಳು ಬಾಷೆಯನ್ನು ಇನ್ನಷ್ಟು ಸಮೃಧ್ಧಗೊಳಿಸಬಹುದು ಎಂದು   ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ ಭಂಡಾರಿ ತಿಳಿಸಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುಳು ಸಂಸ್ಕøತಿ ಅಧ್ಯಯನ ಕೇಂದ್ರ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ” ತುಳುವರ ಆರಾಧನಾ ಸಂಸ್ಕøತಿ ನೆಲೆ-ಬೆಲೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತುಳು ಪುಸ್ತಕಗಳನ್ನು ಓದುವುದು ಬರೆಯುವುದು ಹಾಗೂ ತುಳುವಿನಲ್ಲಿ ವ್ಯವಹರಿಸುವುದರಿಂದ  ತುಳುಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ.  1969-70 ರ ಸಂಧರ್ಭದಲ್ಲಿ ಕೆಲವು ತುಳು ಅಭಿಮಾನಿಗಳ ಮೂಲಕ  ಪ್ರಾರಂಭವಾದ ‘ತುಳುಕೂಟ’ ಎಂಬ ಸಂಘಟನೆಯು ಇದೀಗ ತುಳು ಅಕಾಡೆಮಿಯ ರೂಪ ತಳೆದು  ರಜತ ವರ್ಷದ ಸಂಭ್ರಮಾಚರಣೆಯಲ್ಲಿದೆ.  ಈ ಅಕಾಡಮಿಯ ಫಲವಾಗಿ ಇಂದು ಸುಮಾರು 45 ಶಾಲೆಗಳಲ್ಲಿ ತುಳು ಕಲಿಕೆ ನಡೆಯುತ್ತಿದ್ದು,  ಈ ಭಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  620 ಮಕ್ಕಳು ತುಳುಭಾಷೆಯನ್ನು ಐಚ್ಚಿಕ ಭಾಷೆಯಾಗಿ ತೆಗೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಯಾವುದೆ ವಿಚಾರವನ್ನು ಕೇವಲವಾಗಿ ಗ್ರಹಿಸದೆ ಅದರ ಹಿಂದಿರುವ ಅರ್ಥವನ್ನು ಅರಿತಾಗ ಮಾತ್ರ ಆ ವಿಷಯದ ಮೌಲ್ಯ ನಮಗೆ ಮನವರಿಕೆಯಾಗುವುದು.  ತುಳುವಿನ ಆಚರಣೆಗಳು ಹತ್ತು ಜನರು ಸೇರಿಮಾಡುವ ಆಚರಣೆಯಾದುದರಿಂದ ಇಂದಿಗೂ ಜನಮಾನಸದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿ ಆಚರಿಸಲ್ಪಡುತ್ತದೆ ಎಂದು ಹೇಳಿದರು.

ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಮುಖವಾಗಿ ಮೂರು ಗೋಷ್ಠಿಗಳು ನಡೆದವು.  ತುಳುನಾಡಿನ ಆಲಡೆಗಳು ಎಂಬ ವಿಚಾರಗೋಷ್ಠಿಯನ್ನು  ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಪ್ರಾಧ್ಯಪಕ ಡಾ ಅರುಣ್ ಕುಮಾರ ನಡೆಸಿ ಕೊಟ್ಟರೆ, ದೈವಾರಾಧನೆ- ಕಲಾಮೌಲ್ಯಗಳು ಹಾಗೂ ತುಳುವರ ಕೃಷಿ ಸಂಸ್ಕøತಿ ಎಂಬ ವಿಚಾರಗೋಷ್ಠಿಗಳನ್ನು  ಜಾನಪದ ವಿದ್ವಾಂಸ ಕೆ ಎಲ್ ಕುಂಡಂತಾಯ  ಹಾಗೂ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎ ಗುಣಪಾಲ ಕಡಂಬ ನಡೆಸಿಕೊಟ್ಟರು.  ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 13 ಕ್ಕೂ ಅಧಿಕ ಸಂಶೋಧನಾರ್ಥಿಗಳು ಹಾಗೂ ಪ್ರಾಧ್ಯಪಕರುಗಳು ವಿಚಾರ ಸಂಕಿರಣಕ್ಕೆ ಸಂ¨ಂಧಪಟ್ಟಂತೆ ಪೂರಕ ಪ್ರ¨ಂಧಗಳನ್ನು ಮಂಡಿಸಿದರು. ಇದೇ ಸಂಧರ್ಭದಲ್ಲಿ ತುಳುವಿಗೆ ಸಂಬಂಧಪಟ್ಟ  ಪ್ರಾತಿನಿಧಿಕ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕನ್ನಡ ಉಪನ್ಯಾಸಕ ಹಾಗು ಕಾರ್ಯಕ್ರಮದ ಸಂಯೋಜಕ ಡಾ ಯೋಗೀಶ್ ಕೈರೋಡಿ ಸ್ವಾಗತಿಸಿ, ಆಳ್ವಾಸ್ ಪದವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ ಚಂದ್ರಶೇಖರ ಗೌಡ ವಂದಿಸಿದರು.  ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ವಿಕ್ಷೀತಾ ಶೆಟ್ಟಿ ನಿರೂಪಿಸಿದರು.


Spread the love

Exit mobile version