Home Mangalorean News Kannada News ತೆಂಕನಿಡಿಯೂರು : ಜ್ಞಾನಸಂಗಮ ಐ.ಸಿ.ಟಿ. ತರಗತಿಗಳ ಉದ್ಘಾಟನೆ

ತೆಂಕನಿಡಿಯೂರು : ಜ್ಞಾನಸಂಗಮ ಐ.ಸಿ.ಟಿ. ತರಗತಿಗಳ ಉದ್ಘಾಟನೆ

Spread the love

ತೆಂಕನಿಡಿಯೂರು : ಜ್ಞಾನಸಂಗಮ ಐ.ಸಿ.ಟಿ. ತರಗತಿಗಳ ಉದ್ಘಾಟನೆ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ರೂಸಾ ಯೋಜನೆಯಡಿ 63 ಲಕ್ಷ ಮೊತ್ತದ ಸುಸಜ್ಜಿತ ಸಲಕರಣೆಗಳುಳ್ಳ ಜ್ಞಾನಸಂಗಮ ಐ.ಸಿ.ಟಿ. ತರಗತಿಗಳನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರು ಇತ್ತೀಚಿಗೆ ಉದ್ಘಾಟಿಸಿದರು.

tenkanidiyuru

ಈ ತಾಂತ್ರೀಕೃತ ಸೌಲಭ್ಯವನ್ನು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳಿಬ್ಬರೂ ತಮ್ಮ ಜ್ಞಾನದ ಉನ್ನತೀಕರಣಕ್ಕೆ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನರಸಿಂಹಮೂರ್ತಿ ಇವರು ರೂಸಾ ಯೋಜನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆಯವರು ಜ್ಞಾನಸಂಗಮ ಕಾರ್ಯಕ್ರಮದ ಪ್ರಯೋಜನವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಧನಂಜಯ ಮತ್ತು ಕಾಲೇಜು ಸಲಹಾ ಸಮಿತಿಯ ಸದಸ್ಯರುಗಳಾದ ಪ್ರಖ್ಯಾತ್ ಶೆಟ್ಟಿ, ಎಂ.ಎಲ್. ಸಾಮಗ ಹಾಗೂ ಗ್ರಾಮಪಂಚಾಯತ್ ಸದಸ್ಯೆ ಶ್ರೀಮತಿ ಕಲ್ಪನಾ ಸುರೇಶ್ ಉಪಸ್ಥಿತರಿದ್ದರು.

ರೂಸಾ ಯೋಜನೆ ಸಂಚಾಲಕ ಮತ್ತು ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದ ಕಾರ್ಯಕ್ರಮವನ್ನು ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಪ್ರೊ. ಪ್ರಸಾದ್ ರಾವ್ ಎಂ. ನಿರೂಪಿಸಿದರು.


Spread the love

Exit mobile version