Home Mangalorean News Kannada News ತೆಂಕನಿಡಿಯೂರು ಶಾಲಾ ಸುವರ್ಣತೋತ್ಸವ: ಲಾಂಛನ, ಸಂಪರ್ಕ ಕಚೇರಿ ಉದ್ಘಾಟನೆ

ತೆಂಕನಿಡಿಯೂರು ಶಾಲಾ ಸುವರ್ಣತೋತ್ಸವ: ಲಾಂಛನ, ಸಂಪರ್ಕ ಕಚೇರಿ ಉದ್ಘಾಟನೆ

Spread the love

ತೆಂಕನಿಡಿಯೂರು ಶಾಲಾ ಸುವರ್ಣತೋತ್ಸವ: ಲಾಂಛನ, ಸಂಪರ್ಕ ಕಚೇರಿ ಉದ್ಘಾಟನೆ

ಉಡುಪಿ: ತೆಂಕನಿಡಿಯೂರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರಂಭದ ಲಾಂಛನ ಹಾಗೂ ಸಂಪರ್ಕ ಕಚೇರಿಯ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರುಗಿತು.

ಲಾಂಛನವನ್ನು ಜಿಪಂ ಸದಸ್ಯ ಜನಾರ್ಧನ ತೋನ್ಸೆ ಹಾಗೂ ಕಛೇರಿಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ ಉದ್ಘಾಟಿಸಿ ಶುಭ ಹಾರೈಸಿದರು.

thenkanidiyoor-college-jubilee

ಸುವರ್ಣ ಮಹೋತ್ಸ ಹಾಗೂ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುವರ್ಣ ಮಹೋತ್ಸವ ಆರ್ಥಿಕ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ, ಗೋಪಾಲಕೃಷ್ಣ ಶೆಟ್ಟಿ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಸತೀಶ್ ನಾಯ್ಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಾನಿ ಶಂಕರ್ ಲಾಡ್, ಕ್ರೀಡಾ ಸಮಿತಿಯ ಸಂಚಾಲಕ ರಾಮಚಂದ್ರ ಪಾಟ್ಕರ್, ತಾಪಂ ಸದಸ್ಯ ಧನಂಜಯ ಕುಂದರ್, ಪ್ರಥ್ವಿರಾಜ್ ಶೆಟ್ಟಿ, ದಿನಕರ ಹೇರೂರು, ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್ ಪಾಲನ್, ಶ್ರೀನಿವಾಸ್, ರೆಹಮಾನ್, ಅರ್ಚನ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರಪ್ಪ ಸ್ವಾಗತಿಸಿದರು, ಶಿಕ್ಷಕಿ ಶ್ರುತಿ ವಂದಿಸಿದರು.


Spread the love

Exit mobile version