Home Mangalorean News Kannada News ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಸದಸ್ಯರಿಂದ ಗಣೇಶೋತ್ಸವ ಶುಭಾಶಯ ವಿನಿಮಯ

ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಸದಸ್ಯರಿಂದ ಗಣೇಶೋತ್ಸವ ಶುಭಾಶಯ ವಿನಿಮಯ

Spread the love
RedditLinkedinYoutubeEmailFacebook MessengerTelegramWhatsapp

ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಸದಸ್ಯರಿಂದ ಗಣೇಶೋತ್ಸವ ಶುಭಾಶಯ ವಿನಿಮಯ

ಮಲ್ಪೆ: ಸಮನ್ವಯ ಸರ್ವಧರ್ಮ ಸಮಿತಿ, ಸಂತ ಅನ್ನಮ್ಮ ದೇವಾಲಯ ಇದರ ಸದಸ್ಯರು ಸಾರ್ವಜನಿಕ ಗಣೇಶೋತ್ಸವ ಸಮಿತಿ ತೊಟ್ಟಂ ಇದರ ಕಾರ್ಯಕ್ರಮಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಈ ವೇಳೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಇವರಿಗೆ ಶಾಲು ಹೊದಿಸಿ ಗೌರವ ಅರ್ಪಿಸಿದರು.

ಈ ವೇಳೆ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫೆರ್ನಾಂಡಿಸ್, ಸದಸ್ಯರಾದ ಲೆಸ್ಲಿ ಆರೋಝಾ, ಸಂಯೋಜಕ ಆಗ್ನೆಲ್ ಫೆರ್ನಾಂಡಿಸ್, ಮಾಧ್ಯಮ ಸಂಯೋಜಕ ಕ್ಲಾರೆನ್ಸ್ ಫೆರ್ನಾಂಡಿಸ್, ಕ್ಯಾಲ್ವಿನ್ ಡಿಸೋಜಾ, ಪ್ಯಾಟ್ರಿಕ್ ಕ್ರಾಸ್ತಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version