ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣ ನಿರ್ಬಂಧ – ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ದಕ ಜಿಲ್ಲೆಯಲ್ಲಿ ಕರೋನಾದ ಗಂಭೀರ ಸಮಸ್ಯೆ ಮನಗಂಡು ಹಾಗೂ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ದಕ್ಷಿಣ ಕನ್ನಡಕ್ಕೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣ ನಿರ್ಬಂಧಿಸಲಾಗಿದೆ ಎಂದು ಮೀನುಗಾರಿಕೆ, ಬಂದರು, ಒಳನಾಡು ಸಚಿವ ಹಾಗೂ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಕರೋನದ ಗಂಭೀರ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.