ದಕ್ಷಿಣ ಕನ್ನಡದಲ್ಲಿ ಅಡಕೆ, ಕಾಳುಮೆಣಸಿನ ಬೆಳೆ ವಿಮೆ ಮೊತ್ತ ಜಮೆ ಆರಂಭ

Spread the love

ದಕ್ಷಿಣ ಕನ್ನಡದಲ್ಲಿ ಅಡಕೆ, ಕಾಳುಮೆಣಸಿನ ಬೆಳೆ ವಿಮೆ ಮೊತ್ತ ಜಮೆ ಆರಂಭ

2023-24 ನೆ ಸಾಲಿನ ಬೆಳೆ ವಿಮೆ ಜಮೆ ಆಗತೊಡಗಿದೆ. ಕೃಷಿಕರು ಪ್ರತಿ ವರ್ಷ ಅಡಕೆ ಹೆಕ್ಟೇರಿಗೆ 6,400 ರೂ.ಹಾಗೂ ಕಾಳುಮೆಣಸಿನ ಪ್ರತಿ ಹೆಕ್ಟೇರಿಗೆ 2,350 ರೂ. ವಿಮಾ ಪ್ರೀಮಿಯಂ ಸಹಕಾರಿ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಸರಕಾರ ನಿಗದಿಗೊಳಿಸಿದ ದಿನದೊಳಗೆ ಪಾವತಿಸಿದರೆ, ಅಡಕೆ ಹೆಕ್ಟೇರಿಗೆ ಗರಿಷ್ಟ 1,28,000 ರೂ. ಹಾಗೂ ಕಾಳುಮೆಣಸಿಗೆ ಪ್ರತಿ ಹೆಕ್ಟೇರಿಗೆ 47,000ರೂ. ತನಕ ವಿಮೆ ಮೊತ್ತ ಆಯಾ ವರ್ಷದಲ್ಲಿ ಬಿದ್ದ ಮಳೆಯ ಆಧಾರದಲ್ಲಿ ಜಮೆಯಾಗುತ್ತದೆ.

ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ನೊಳಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆಯಾಗುವ ಬೆಳೆ ವಿಮೆ ಈ ಬಾರಿ ನವೆಂಬರ್‌ ತಿಂಗಳಲ್ಲಿ ಜಮೆಯಾಗುತ್ತಿದೆ. ತೋಟಗಾರಿಕೆ ಬೆಳೆಗಳಿಗೆ ವಿನ್ಯಾಸಗೊಳಿಸಿದ 2023-24 ನೇ ಸಾಲಿನ ವಿಮೆಯ ಮೊತ್ತ ಇದಾಗಿದೆ.

ದಕ ಜಿಲ್ಲೆಯಲ್ಲಿಅಡಕೆ ಮತ್ತು ಕಾಳುಮೆಣಸಿಗೆ ಅನ್ವಯವಾಗುವ ಬೆಳೆ ವಿಮೆ ಯೋಜನೆಗೆ ಕೃಷಿಕರು ಅಡಕೆ ಹೆಕ್ಟೇರಿಗೆ 6,400 ರೂ.ಹಾಗೂ ಕಾಳುಮೆಣಸಿನ ಪ್ರತಿ ಹೆಕ್ಟೇರಿಗೆ 2,350 ರೂ. ವಿಮಾ ಪ್ರೀಮಿಯಂ ಸಹಕಾರಿ ಸಂಘ ಅಥವಾ ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಸರಕಾರ ನಿಗದಿಗೊಳಿಸಿದ ದಿನದೊಳಗೆ ಪಾವತಿಸಿದರೆ, ಅಡಕೆ ಹೆಕ್ಟೇರಿಗೆ ಗರಿಷ್ಟ 1,28,000 ರೂ. ಹಾಗೂ ಕಾಳುಮೆಣಸಿಗೆ ಪ್ರತಿ ಹೆಕ್ಟೇರಿಗೆ 47,000ರೂ. ತನಕ ವಿಮೆ ಮೊತ್ತ ಆಯಾ ವರ್ಷದಲ್ಲಿ ಬಿದ್ದ ಮಳೆಯ ಆಧಾರದಲ್ಲಿ ಜಮೆಯಾಗುತ್ತದೆ.

2018-19 ರಲ್ಲಿ ಗರಿಷ್ಟ ಮಿತಿ 1,28,000ರೂ., 2019-20 ರಲ್ಲಿ 60,000ರೂ., 2020-21 ರಲ್ಲಿ52,000 ರೂ., 2021-22 ರಲ್ಲಿ 60,000ರೂ. 2023ರಲ್ಲಿ70,000ರೂ ಆಸುಪಾಸು ಪ್ರತಿ ಹೆಕ್ಟೇರ್‌ ಅಡಕೆ ಬೆಳೆಗೆ ಜಮೆಗೊಂಡಿತ್ತು. ಈ ವರ್ಷವೂ 70000 ರೂ. ಸರಾಸರಿ ಜಮೆಯಾಗುತ್ತಿದೆ ಎಂದು ಮೊತ್ತ ಜಮೆಯಾಗಿರುವ ಫಲಾನುಭವಿಗಳು ತಿಳಿಸಿದ್ದಾರೆ.

ಹವಾಮಾನ ಆಧರಿಸಿ ಜುಲೈ 1 ರಿಂದ ಜೂನ್‌ 30ರ ತನಕದ ಅವಧಿಯ ಈ ಯೋಜನೆಯಲ್ಲಿ ಆಯಾ ಪ್ರದೇಶದಲ್ಲಿ ಬಿದ್ದಿರುವ ಮಳೆಯ ಆಧಾರದ ಮೇಲೆ ಮೊತ್ತ ಬಿಡುಗಡೆಯಾಗುತ್ತದೆ. ಜತೆಗೆ ಕಳೆದ 15 ವರ್ಷಗಳಲ್ಲಿ ಸುರಿದ ಮಳೆ ಪ್ರಮಾಣದ ಮಾನದಂಡದೊಂದಿಗೆ ಸರಾಸರಿ ಮಳೆ ಆಧಾರದ ಮೇಲೆ ವಿಮಾ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ತೋಟಗಾರಿಕೆ ಇಲಾಖೆ ಈ ಬಗ್ಗೆ ರೈತರಿಗೆ ಹಾಗೂ ಸಂಬಂಧಪಟ್ಟವರಿಗೆ ಮಾಹಿತಿಗಳನ್ನು ಒದಗಿಸುತ್ತದೆ. ಮೊತ್ತವನ್ನು ಸರಕಾರ ಹಾಗೂ ವಿಮೆ ಕಂಪನಿಗಳು ನಿಗದಿಪಡಿಸಿ, ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮೆಗೊಳಿಸಲಾಗುತ್ತದೆ.

ದಕ ಜಿಲ್ಲೆಯ ನಾನಾ ತಾಲೂಕುಗಳ ಬೇರೆ ಬೇರೆ ಗ್ರಾಮಗಳಲ್ಲಿಸುರಿದಿರುವ ಮಳೆಯ ಆಧಾರದಲ್ಲಿವಿಮೆಯ ಮೊತ್ತ ಬಿಡುಗಡೆಗೊಳ್ಳುವ ಕಾರಣ ಎಲ್ಲಗ್ರಾಮದ ಫಲಾನುಭವಿಗಳಿಗೆ ಒಂದೇ ರೀತಿಯ ಮೊತ್ತ ಜಮೆ ಆಗುವುದಿಲ್ಲ. ಇದು ಗ್ರಾಮದಲ್ಲಿಬಿದ್ದ ಮಳೆ ಆಧಾರದಲ್ಲಿ ಬಿಡುಗಡೆಗೊಳ್ಳುತ್ತದೆ. ಹೆಚ್ಚಿನ ಗ್ರಾಮಗಳಲ್ಲಿಮಳೆ ಮಾಪಕ ಯಂತ್ರ ಹಾಗೂ ಇದನ್ನು ನಿರ್ವಹಿಸುವ ಸಿಬ್ಬಂದಿ ಕೊರತೆ ಇರುವ ಕಾರಣ ಮೊತ್ತವನ್ನು ತಾಲೂಕು ಕೇಂದ್ರದಲ್ಲಿಬಿದ್ದ ಮಳೆಯ ಆಧಾರದಲ್ಲಿನಿಗದಿಪಡಿಸಬೇಕು ಎಂದು ಹೆಚ್ಚಿನ ಫಲಾನುಭವಿಗಳು ಆಗ್ರಹಿಸಿದ್ದಾರೆ.

ಕೃಷಿಕರಿಗೆ ಈ ಮೊತ್ತ ಬಿಡುಗಡೆಯಾಗಲು ಕಂದಾಯ,ತೋಟಗಾರಿಕೆ ಮೊದಲಾದ ಇಲಾಖೆಗಳ ಪಾತ್ರವು ಮಹತ್ವದ್ದು. ಕೆಲವು ಕಡೆ ಕಂದಾಯ ಇಲಾಖೆಯು ಪಹಣಿ ಪತ್ರದಲ್ಲಿ ಬೆಳೆ ನಮೂದಿಸುವಾಗ ಉಂಟಾಗುವ ತಾಂತ್ರಿಕ ಎಡವಟ್ಟು, ಬೆಳೆ ಸಮೀಕ್ಷೆ ವೇಳೆ ರೈತರು ನಮೂದಿಸುವ ತಪ್ಪು ಮಾಹಿತಿಗಳು ಬೆಳೆವಿಮೆ ಮೊತ್ತ ಬಿಡುಗಡೆಗೆ ಅಡ್ಡಿಯಾಗುತ್ತದೆ . ಇಂತಹ ಎಡವಟ್ಟುಗಳಿಂದ ಕಂತು ಪಾವತಿಸಿದ ರೈತರು ಯೋಜನೆಯಿಂದ ವಂಚಿತರಾಗುವುದು ಇದೆ. ಹಾಲಿ ವರ್ಷದಲ್ಲಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.


Spread the love
Subscribe
Notify of

0 Comments
Inline Feedbacks
View all comments