ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೋನಾ ಪಾಸಿಟಿವ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ವರದಿಯಾಗಿದೆ.
ರೋಗಿ ಸಂಖ್ಯೆ ಪಿ 578 ರ ಸಂಪರ್ಕದಲ್ಲಿದ್ದಂತಹ ಬಂಟ್ವಾಳದ 30 ವರ್ಷದ ಯುವಕ, 70 ಮತ್ತು 60 ವರ್ಷದ ಮಹಿಳೆಯ ಗಂಟಲು ದ್ರವ ಪರೀಕ್ಷೆ ವರದಿ ಸ್ವೀಕೃತವಾಗಿದ್ದು, ಇವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುತ್ತದೆ. ಇವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರೆಲ್ಲರೂ ಬಂಟ್ವಾಳ ಕಸಬಾ ಗ್ರಾಮದ ಒಂದೇ ಕುಟುಂಬದವರಾಗಿರುತ್ತಾರೆ ಎಂದು ದಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.