ದಕ್ಷಿಣ ಭಾರತದ ಅತಿ ದೊಡ್ಡ ಶ್ರೀ ಲಕ್ಷೀ ನಾರಾಯಣ ಮಂದಿರದ ಉದ್ಘಾಟನೆ
ಬ್ರಹ್ಮಶ್ರೀ ಆಶ್ರಮದ ಪ್ರಾಂಗಣದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇಗುಲದ ಪ್ರಾಣ ಪ್ರತಿಷ್ಠೆಯ ಸ್ವರ್ಣ ಮುಹೂರ್ತ 17 – 18 ಜನವರಿ 2017 ರಂದು ನಡೆಯಲಿದೆ.
ಶ್ರೀ ಸಿದ್ಧೇಶ್ವರ ತೀರ್ಥ ಶ್ರೀ ಬ್ರಹ್ಮಶ್ರೀ ಆಶ್ರಮ, ತಿರುಪತಿಯ ಪುಣ್ಯ-ತೀರ್ಥ ಕೇತ್ರದಲ್ಲಿ ದಕ್ಷಿಣ ಭಾರತದ ಪ್ರಥಮ ಹಾಗು ಅದ್ವಿತೀಯ ಶ್ರೀ ಲಕ್ಷೀ ನಾರಾಯಣ ಮಂದಿರದ ಪ್ರಾಣ ಪ್ರತಿಷ್ಠೆಯ ಸ್ವರ್ಣ ಮುಹೂರ್ತ ನಡೆಯಲಿದೆ. ಬ್ರಹ್ಮಶ್ರೀ ಗುರುದೇವ ಅವರ ನೇತೃತ್ವದಲ್ಲಿ ತಪೋಭೂಮಿಯಲ್ಲಿ ನಡೆಯಲಿರುವ ಈ ಅಮೃತ ಗಳಿಗೆಗೆ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಸುಮಾರು ಮೂರು ಎಕರೆ ಪ್ರದೇಶದಲ್ಲಿ ಹರಡಿರುವ ಈ ಮಂದಿರವನ್ನು ನಿರ್ಮಿಸಲು ಸುಮಾರು 110 ಕ್ಕೂ ಅಧಿಕ ಶಿಲ್ಪಿಗಳು 8 ವರ್ಷಗಿಂತಲೂ ಹೆಚ್ಚು ಅವಧಿ ತೆಗೆದುಕೊಂಡಿದ್ದಾರೆ. ಅತ್ಯಂತ ಕುಸುರಿ ಶಿಲ್ಪಕೆತ್ತನೆಗಳು ಮಂದಿರಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಿವೆ. ಇತ್ತೀಚೆಗೆ ನಿರ್ಮಿತವಾದ ಅತ್ಯಂತ ದೊಡ್ಡ ದೇಗುಲಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ದೇವಾಲಯವನ್ನು ನಿರ್ಮಿಸಲು ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲದ ಶಿಲ್ಪಿಗಳು ಹಗಲಿರುಳು ಶ್ರಮಿಸಿದ್ದಾರೆ. ತಿರುಪತಿ ತಿರುಮಲ ದೇಗುಲದಿಂದ ಕೇವಲ 12 ಕಿಮಿ ದೂರದಲ್ಲಿರುವ ಈ ದೇಗುಲ ಕ್ಷಿಪ್ರಗತಿಯಲ್ಲಿ ಆಂಧ್ರಪ್ರದೇಶದ ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಬೇಳೆಯುತ್ತಿದೆ.
ತಿರುಪತಿ ಸಮೀಪದ ಸಿ ರಾಮಚಂದ್ರಾಪುರಂ ನಲ್ಲಿರುವ ಈ ಆಶ್ರಮ ಶ್ರೀ ಗುರು ಮಂದಿರ, ಶ್ರೀ ಬ್ರಹ್ಮೇಶ್ವರ ಮಹಾದೇವ ಪೂಜಾಮಂದಿರ ವಿವಿಧ ದೇವ ದೇವತೆಗಳ ಮಂದಿರ ಧ್ಯಾನಕೇಂದ್ರಗಳು ಈ ಆಶ್ರಮದ ಆಧ್ಯಾತ್ಮಿಕ ಸೊಬಗು ಹೆಚ್ಷಿಸಿವೆ. ಗಿರಿ ಶೃಂಗಗಳಿಂದ ಆವೃತವಾಗಿರುವ ಆಶ್ರಮದ ಸೌಂದರ್ಯ ಈ ದೇಗುಲದಿಂದ ಇಮ್ಮಡಿಗೊಳ್ಳಲಿದೆ. ಜೊತೆಗೆ ಇದು ಪ್ರವಾಸಿಗಳ ಪ್ರಮುಖ ಆಕರ್ಷಣೆಯಾಗಲಿದೆ. ಹಸಿರಿನಿಂದ ಹಾಗು ಅಪರೂಪದ ಸಸ್ಯಗಳಿಂದ, ಆಧ್ಯಾತ್ಮಿಕ ಶಕ್ತಿಯಂದ ಕೂಡಿರುವ ಈ ಪ್ರದೇಶ ಶಾಂತಿಯುತವಾಗಿದೆ.
ಶ್ರೀ ಗುರುದೇವರು ತಮ್ಮ ತಪಸ್ಸು ಹಾಗು ಸಾಧನೆಯಿಂದ ಈ ಭುಮಿಯನ್ನು ತಪೋಭೂಮಿಯನ್ನಾಗಿ ಮಾಡಿದ್ದಾರೆ. ಈ ತೀರ್ಥಸ್ಥಳಕ್ಕೆ ಭೇಟಿ ನೀಡುವುದರಿಂದ ಇಲ್ಲಿರುವ ಸಕಾರಾತ್ಮಕ ಶಕ್ತಿ ಭಕ್ತರಲ್ಲಿ ಸಂಚಾರಗೊಂಡು ಅವರ ದುಃಖ ದೂರವಾಗುತ್ತದೆ. ಶ್ರೀ ಗುರುದೇವರ ಪ್ರವಚನಗಳು ಇಲ್ಲಿಗೆ ಭೇಟಿ ನೀಡುವ ಭಕ್ತರ ಬದುಕಿನ ಗತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಿದೆ. ವಸುದೈವ ಕುಟುಂಬಕಮ್ ಎಂಬ ಉಕ್ತಿಯನ್ನು ಪಾಲಿಸುತ್ತಿರುವ ಈ ಆಶ್ರಮದಲ್ಲಿ ಜಾತಿ, ಧರ್ಮ, ಬಡವ ಬಲ್ಲಿದ, ಭೇದ ಭಾವವಿಲದ್ದೆ ಎಲ್ಲರೂ ಬರುತ್ತಾರೆ. ಆಶ್ರಮಕ್ಕೆ ಭಕ್ತಾದಿಗಳು ತೆರೆದ ಮನಸ್ಸಿನಿಂದ ಬಂದು ಮನಸ್ಸಲ್ಲಿ ಶಾಂತಿ ನೆಮ್ಮದಿಗಳನ್ನು ತುಂಬಿಕೊಂಡು ಹೋಗುತ್ತಾರೆ.