Home Mangalorean News Kannada News ದಕ ಎಸ್ಪಿಯಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ರವಿಕಾಂತೆ ಗೌಡ ಅಧಿಕಾರ ಸ್ವೀಕಾರ

ದಕ ಎಸ್ಪಿಯಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ರವಿಕಾಂತೆ ಗೌಡ ಅಧಿಕಾರ ಸ್ವೀಕಾರ

Spread the love

ದಕ ಎಸ್ಪಿಯಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ರವಿಕಾಂತೆ ಗೌಡ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ನೂತನ ಪೋಲಿಸ್ ವರಿಷ್ಠಾಧೀಕಾರಿಯಾಗಿ ರವಿಕಾಂತೆ ಗೌಡ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಸೋಮವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿ ಜೆ ಸಜೀತ್ ಅವರು ರವಿಕಾಂತೆ ಗೌಡರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಸಗರ ಹಳ್ಳಿಯವರಾದ ಡಾ. ಬಿ. ಆರ್. ರವಿಕಾಂತೇ ಗೌಡ ಪ್ರಸಿದ್ದ ಬರಹಗಾರ ಬೆಸಗರಹಳ್ಳಿ ರಾಮಣ್ಣರ ಪುತ್ರರಾಗಿದ್ದು ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ಗುರುತಿಸಲ್ಪಟ್ಟಿದ್ದಾರೆ.

ಗಮನಾರ್ಹ ಸಾಧನೆಗಳು
1. ಹುಬ್ಬಳ್ಳಿಯ ಕುಖ್ಯಾತ ಅಕ್ರಮ ಮದ್ಯ ದಂಧೆಯನ್ನು ಮಟ್ಟಹಾಕಿದ್ದು, ಈ ಸಾಧನೆಗಳ ಬಗ್ಗೆ ರಾಜ್ಯ ಸರ್ಕಾರ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತದೆ.

2. ಹುಬ್ಬಳ್ಳಿಯ ಕೋಮುಗಲಭೆಗಳನ್ನು ಹತ್ತಿಕ್ಕಿ ಸೌಹಾರ್ದ ವಾತಾವರಣ ನಿರ್ಮಾಣಕ್ಕಾಗಿ ಪೊಲೀಸ್ ನಾಗರಿಕರ ವೇದಿಕೆಯನ್ನು ರಚಿಸಿ ಯಶಸ್ವಿ ಶಾಂತಿ ಸ್ಥಾಪನೆ.

3. ಡಿಸಿಪಿ. ಬೆಂಗಳೂರು ಅಪರಾಧ ವಿಭಾಗದಲ್ಲಿದ್ದಾಗ ಕುಖ್ಯಾತ ಭಯೋತ್ಪಾದಕನನ್ನು ಬಂಧಿಸಿ 2 ಎಕೆ 56, 450 ಗುಂಡು, 10 ಗ್ರನೇಡ್ ವಶಪಡಿಸಿಕೊಂಡು ಆಗಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಡೆಗಟ್ಟಿರುತ್ತಾರೆ.

4. ಬೆಂಗಳೂರಿನಲ್ಲಿ ರೌಡಿಗಳ ವಿರುದ್ಧ ಸತತ ಕಾರ್ಯಾಚರಣೆ ನಡೆಸಿ ನಿಷ್ಕ್ರಿಯಗೊಳಿಸಿರುವ ಯಶಸ್ಸು.

5. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದ ಕೋಮು-ಗಲಭೆಗಳ ವೇಳೆ ವಿಶೇಷ ಕರ್ತವ್ಯಕ್ಕೆ ತೆರಳಿ ಕೋಮುಗಲಭೆಗಳನ್ನು ಮಟ್ಟಹಾಕಿ ಯಶಸ್ವಿ ಶಾಂತಿ ಸ್ಥಾಪನೆ.

6. ತಳಹಂತದ ಪೊಲೀಸ್ ಸಿಬ್ಬಂದಿಗಳನ್ನು ಸಬಲೀಕರಣಗೊಳಿಸುವ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಉಪಗಸ್ತು ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತಂದು ಅದರ ಆಧಾರದ ಮೇಲೆ ಸುಧಾರಿತ ಗಸ್ತು ವ್ಯವಸ್ಥೆಯನ್ನು ಕರ್ನಾಟಕ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿರುತ್ತಾರೆ. ಇವರ ಕಾರ್ಯವನ್ನು ಮುಖ್ಯ ಮಂತ್ರಿಗಳು, ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.

7. ಈ ಮೊದಲು ಆಂಗ್ಲ ಭಾಷೆಯಲ್ಲಿ ಕವಾಯತು ಆದೇಶಗಳನ್ನು ನೀಡಲಾಗುತ್ತಿತ್ತು. 2016ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ಕವಾಯತು ಆದೇಶಗಳನ್ನು ರೂಪಿಸಿ ಜಾರಿಗೊಳಿಸಲಾಯಿತು. ಕನ್ನಡದ ಕವಾಯತು ಆದೇಶದ ಉಚ್ಚಾರಣೆ, ಶೈಲಿ ಮತ್ತು ಕವಾಯತಿಗೆ ಕನ್ನಡ ಭಾಷೆಯ ಕವಾಯತು ಆದೇಶಗಳು ಒಗ್ಗಿಕೊಂಡ ರೀತಿಯು ವ್ಯಾಪಕವಾಗಿ ಸಾರ್ವಜನಿಕರ, ಗಣ್ಯರ ಮತ್ತು ಮಾಧ್ಯಮಗಳ ಪ್ರಶಂಸೆಗೆ ಒಳಗಾಗಿದೆ.

ವಿದ್ಯಾಭ್ಯಾಸ

1. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ–ಕನ್ನಡ ಮಾಧ್ಯಮದಲ್ಲಿ ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ.
2. ಬಿ.ಇ.(ಮೆಕ್ಯಾನಿಕಲ್) – ಪಿ.ಇ.ಎಸ್. ಕಾಲೇಜು, ಮಂಡ್ಯ,
3. ಎಂ.ಟೆಕ್. (ಪ್ರೊಡಕ್ಷನ್ ಇಂಜಿನಿಯರಿಂಗ್ ಸಿಸ್ಟಮ್ಸ್ ಟೆಕ್ನಾಲಜಿ) – ಎನ್.ಐ.ಟಿ., ಮೈಸೂರು.
4. ಸ್ಪರ್ಧಾತ್ಮಕ ಪರೀಕ್ಷೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ
ಮಾಧ್ಯಮದಲ್ಲಿ ಪರೀಕ್ಷೆ ಬರೆದು – ರಾಜ್ಯಕ್ಕೆ 6ನೇ ರ್ಯಾಂಕ್ – ಡಿ.ಎಸ್.ಪಿ. ಹುದ್ದೆಗೆ ಆಯ್ಕೆ.
5. ತದನಂತರ ಐಪಿಎಸ್ ಹುದ್ದೆಗೆ ಬಡ್ತಿ.
6. “ಕುವೆಂಪು ಸಾಂಸ್ಕøತಿಕ ವಿದ್ಯಮಾನ : ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕಾಗಿ
ಹಂಪಿ ಕನ್ನಡ ವಿಶ್ವವಿದ್ಯಾಲಯವು 2015ರಲ್ಲಿ ಡಿ.ಲಿಟ್. ಪದವಿ ಪ್ರದಾನ ಮಾಡಿದೆ.
ಅಭಿರುಚಿ ಮತ್ತು ಆಸಕ್ತಿ ಸಾಹಿತ್ಯ ಮತ್ತು ಸೃಜನಶೀಲ ಕ್ರಿಯೆಗಳಲ್ಲಿ ಆಸಕ್ತಿ, ಸಂಸ್ಕøತಿ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ಅನೇಕ ಕವನಗಳು, ಲೇಖನಗಳು, ಲಲಿತ ಪ್ರಬಂಧಗಳು ಪ್ರಕಟವಾಗಿವೆ.
ಅನುಭವ ಬೆಂಗಳೂರು ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ, ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಯೂನಿವರ್ಸಿಟಿ, ವಿಶ್ವೇಶ್ವರಯ್ಯ ಕಾಲೇಜ್ ಆಫ್
ಇಂಜಿನಿಯರಿಂಗ್, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ.
ಸೇವೆಗೆ ಸೇರಿದ ದಿನಾಂಕ 15-03-1997
ಸೇವೆ ಸಲ್ಲಿಸಿದ ಸ್ಥಳಗಳು 1. ಡಿ.ಎಸ್.ಪಿ., ನಂಜನಗೂಡು ಉಪ ವಿಭಾಗ.
2. ಡಿ.ಸಿ.ಪಿ., ಕಾನೂನು ಮತ್ತು ಸುವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ.
3. ಡಿ.ಸಿ.ಪಿ., ಅಪರಾಧ, ಬೆಂಗಳೂರು ನಗರ.
4. ಎಸ್.ಪಿ., ರಾಜ್ಯ ಗುಪ್ತ ವಾರ್ತೆ, ಬೆಂಗಳೂರು.
5. ಡಿ.ಸಿ.ಪಿ., ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರ.
6. ಡಿ.ಸಿ.ಪಿ., ಈಶಾನ್ಯ ವಿಭಾಗ, ಬೆಂಗಳೂರು ನಗರ.
7. ಡಿ.ಸಿ.ಪಿ., ಕೇಂದ್ರ ವಿಭಾಗ, ಬೆಂಗಳೂರು ನಗರ.
8. ಪ್ರಸ್ತುತ ಎಸ್.ಪಿ. ಬೆಳಗಾವಿ ಜಿಲ್ಲೆ.
ಪುರಸ್ಕಾರ 2002ರ ಮುಖ್ಯಮಂತ್ರಿಗಳ ಚಿನ್ನದ ಪದಕ
2007ರ ಮುಖ್ಯಮಂತ್ರಿಗಳ ಚಿನ್ನದ ಪದಕ


Spread the love

Exit mobile version