Home Mangalorean News Kannada News ದಕ ಜಿಲ್ಲಾಡಳಿತದ ವಿರುದ್ದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ – ಕ್ರಿಮಿನಲ್ ಪ್ರಕರಣ ದಾಖಲು

ದಕ ಜಿಲ್ಲಾಡಳಿತದ ವಿರುದ್ದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ – ಕ್ರಿಮಿನಲ್ ಪ್ರಕರಣ ದಾಖಲು

Spread the love

ದಕ ಜಿಲ್ಲಾಡಳಿತದ ವಿರುದ್ದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ – ಕ್ರಿಮಿನಲ್ ಪ್ರಕರಣ ದಾಖಲು

ಮಂಗಳೂರು: ದಕ ಜಿಲ್ಲಾಡಳಿತದ ವಿರುದ್ದ ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ದ ಜಿಲ್ಲಾಡಳಿತ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ಮೆಲ್ವಿನ್ ಪಿಂಟೊ ಎಂಬ ವ್ಯಕ್ತಿ ಜಿಲ್ಲಾಡಳಿತದ ವಿರುದ್ದ ಸುಳ್ಳು ವರದಿ/ಸುದ್ದಿಗಳನ್ನು ವಾಟ್ಸಾಪ್ ನಲ್ಲಿ ಹರಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು ಆತನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಮುಂದೆ ಯಾರೇ ವ್ಯಕ್ತಿಗಳು ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.

ಅಲ್ಲದೆ ಜಿಲ್ಲೆಯಲ್ಲಿ ದಿನಸಿ ಸಾಮಾಗ್ರಿಗಳನ್ನು ದಾನ ಮಾಡಬಯಸುವವರಿಗೆ ಜಿಲ್ಲಾಡಳಿತ ವತಿಯಿಂದ ಸಂಗ್ರಹಣಾ ಕೇಂದ್ರವನ್ನು ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದು ದಾನ ಮಾಡಬಯಸುವವರು ತಮ್ಮ ಕಿಟ್ ನಲ್ಲಿ ಅಕ್ಕಿ, ತೊಗರಿಬೇಳೆ, ದವಸ ಧಾನ್ಯ, ಸನ್ ಫ್ಲವರ್ ಎಣ್ಣೆ, ಮಸಾಲೆ ಪ್ಯಾಕ್, ಸಾಬಾಂರು ಮಸಾಲೆ, ಉಪ್ಪಿನಕಾಯಿ, ತರಕಾರಿಗಳನ್ನು ನೀಡುವಂತೆ ಕೋರಿದ್ದಾರೆ.

ಈ ಸಂಬಂಧ ಆಯುಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಯಾವುದೇ ಸಂದೇಹ ಇದ್ದಲ್ಲಿ 1077 ಕರೆ ಮಾಡುವಂತೆ ಕೋರಿದ್ದಾರೆ.


Spread the love

Exit mobile version